ಬೆಂಗಳೂರು: ಮಧ್ಯಮ ವರ್ಗದವರಿಗೆ ವಿಶ್ವ ದರ್ಜೆಯ ರೈಲು ಪ್ರಯಾಣದ ಅನುಭವ ನೀಡುವ ಉದ್ದೇಶದಿಂದ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ವಿನ್ಯಾಸಗೊಳಿಸಲಾಗಿದೆ. ಕೇಂದ್ರ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ವಂದೇ ಭಾರತ್ ಸ್ಲೀಪರ್ ಕೋಚ್ ರೈಲಿನ 2 ಮೂಲ ಮಾದರಿ (ಪ್ರೋಟೋ ಟೈಪ್)ಯನ್ನು ಪರಿಶೀಲಿಸಿದ ಬಳಿಕ ರವಿವಾರ ಪ್ರಾಯೋಗಿಕ ಚಾಲನೆ ನೀಡಿದರು.
ಭಾರತ್ ಅರ್ಥ್ ಮೂವರ್ಸ್ ಲಿಮಿಟಿಡ್ (ಬಿಇಎಂಎಲ್) ವಂದೇ ಭಾರತ್ ಸ್ಲಿàಪರ್ ಕೋಚ್‌ಗಳನ್ನು ವಿನ್ಯಾಸ ಮಾಡಿದೆ. ನಿದ್ರಿಸಲು ಆರಾಮದಾಯಕ ಹಾಸಿಗೆ, ವಿಶಾಲವಾದ ಸ್ಥಳಾವಕಾಶ, ಗಾಳಿ ಬೆಳಕು ಹೊಂದಿದೆ. ಬೋಗಿಯನ್ನು ಸಂಪೂರ್ಣವಾಗಿ ಸ್ಟೀಲ್‌ನಿಂದ ನಿರ್ಮಿಸಿದ್ದು ಅಪಘಾತವಾದರೂ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆ ಆಗದಂತೆ ಸುರಕ್ಷತಾ ವಿನ್ಯಾಸ ರೂಪಿಸಲಾಗಿದೆ.
ಒಳಾಂಗಣದಲ್ಲಿ ಗ್ಲಾಸ್ ಫೈಬರ್ ರೈನ್‌ಫೋಸ್ಡ್ì ಪ್ಲಾಸ್ಟಿಕ್ಸ್ ಬಳಸಲಾಗಿದೆ. ಏರೋಡೈನಾಮಿಕ್ ಡಿಸೈನ್ ಅಳವಡಿಸಿಕೊಳ್ಳಲಾಗಿದೆ. ಸೆನ್ಸಾರ್ ಆಧಾರಿತ ಅಂತರ್ ಸಂವಹನ ವ್ಯವಸ್ಥೆ, ರೀಡಿಂಗ್ ಹಾಗೂ ವಾಕಿಂಗ್ ಲೈಟ್ಸ್, ಅಡುಗೆ ತಯಾರಿಸಲು ವಿಶೇಷ ಕೊಠಡಿ ಇದೆ. ಇಲ್ಲಿ ಓವೆನ್, ಫ್ರಿಡ್ಜ್, ನೀರು ಕಾಯಿಸುವ ವ್ಯವಸ್ಥೆ ಇದೆ. ಜತೆಗೆ ಕಸದ ತೊಟ್ಟಿ ಇದೆ.
ವಂದೇ ಭಾರತ್ ರೈಲು ಪ್ರತೀ ಗಂಟೆಗೆ 160 ಕಿ.ಮೀ. ಚಲಿಸಲಿದೆ. ರೈಲ್ವೇ ನಿಲ್ದಾಣದಲ್ಲಿ ನಿಲುಗಡೆ ಸಮಯ ಹೊರತುಪಡಿಸಿ ಸುಮಾರು 800ರಿಂದ 1200 ಕಿ.ಮೀ. ದೂರವನ್ನು ಕೇವಲ ಏಳೂವರೆ ಗಂಟೆಯಲ್ಲಿ ಕ್ರಮಿಸಲಿದೆ. ಆದರೆ ಪ್ರಸ್ತುತ ಪರೀಕ್ಷೆಯ ಅವಧಿಯಲ್ಲಿ ಗಂಟೆಗೆ 180 ಕಿ.ಮೀ. ವೇಗದಲ್ಲಿ ಓಡಲಿದೆ. ಸ್ಲೀಪರ್ ಕೋಚ್ ವಂದೇ ಭಾರತ್ ರೈಲಿನಲ್ಲಿ 16 ಬೋಗಿಗಳಿವೆ. ಈ ರೈಲು ವಿಶೇಷವಾಗಿ ರೈಲು ಪ್ರಯಾಣಕ್ಕಾಗಿ ವಿನ್ಯಾಸ ಮಾಡಲಾಗಿದೆ.
ಇದರಲ್ಲಿದೆ ಬಿಸಿ ನೀರು ಸ್ನಾನದ ವ್ಯವಸ್ಥೆ
ವಂದೇ ಭಾರತ್ ಸ್ಲೀಪರ್ ಕೋಚ್ ರೈಲಿನ ಎಸಿ 1 ಬೋಗಿನಲ್ಲಿ ಬಿಸಿ ನೀರು ಸ್ನಾನದ ವ್ಯವಸ್ಥೆ ಇದೆ. ಮ್ಯಾಡುಲರ್ ಪ್ಯಾಂಟ್ರಿ, ವಿಶೇಷ ಚೇತನರನ್ನು ಗಮನದಲ್ಲಿಟ್ಟು ಕೋಚ್ ಹಾಗೂ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಸ್ವಯಂ ಚಾಲಿತ ಡೋರ್ ವ್ಯವಸ್ಥೆ, ವಿಶೇಷವಾಗಿ ಮೊಬೈಲ್ ಹೋಲ್ಡರ್, ಚಾರ್ಜ್ ಪಾಯಿಂಟ್, ಆಹಾರ ಸೇವಿಸುವ ಫೋಲ್ಡ್ ಟೇಬಲ್, ಅಪಘಾತ ನಿಯಂತ್ರಕ ಕವಚ, ವಿಶೇಷವಾಗಿ ಡ್ರೆ„ವಿಂಗ್ ಟ್ರೆ„ಲರ್ ಬೋಗಿಯಲ್ಲಿ ಆರ್‌ಪಿಎಫ್ ಸೇರಿ ಭದ್ರತಾ ಸಿಬಂದಿಯ ಶ್ವಾನದಳ ತಂಗಲು ಡಾಗ್ ಬಾಕ್ಸ್’ ಇಡಲಾಗಿದೆ. ಅಗತ್ಯವಿದ್ದರೆ ಪ್ರಯಾಣಿಕರ ಸಾಕು ನಾಯಿಗೂ ಅವಕಾಶ ನೀಡಲಿದ್ದಾರೆ. ವಿಶಾಲವಾದ ಲಗೇಜ್ ಕೊಠಡಿ ಸೇರಿದಂತೆ ಇತರ ಸೌಲಭ್ಯ ಹೊಂದಿದೆ.