Advertisement

ಮಾರ್ಚ್‌ ಅಂತ್ಯಕ್ಕೆ ಗಂಗಾವತಿಗೆ ರೈಲು

03:36 PM Dec 07, 2018 | Team Udayavani |

ಗಂಗಾವತಿ: ಬಹುದಿನಗಳ ಕನಸಾಗಿರುವ ಗಂಗಾವತಿವರೆಗಿನ ರೈಲ್ವೆ ಮಾರ್ಗದಲ್ಲಿ 2019ರ ಮಾರ್ಚ್‌ ಅಂತ್ಯದ ವೇಳೆ ರೈಲು ಓಡಿಸಲು ರೈಲ್ವೆ ಇಲಾಖೆ ಸಕಲ ಸಿದ್ಧತೆ ನಡೆಸಿದೆ. ಗುರುವಾರ ನೈರುತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಎ.ಕೆ. ಸಿಂಗ್‌ ಹಾಗೂ ಅಧಿಕಾರಿಗಳ ತಂಡ ಗಂಗಾವತಿ ರೈಲ್ವೆ ನಿಲ್ದಾಣ ಹಾಗೂ ವಸತಿ ಗೃಹಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಗಂಗಾವತಿಯಿಂದ ಚಿಕ್ಕಬೆಣಕಲ್ಲವರೆಗೆ ರೈಲ್ವೆ ಮಾರ್ಗದ ಮೇಲೆ ಪರೀಕ್ಷಾರ್ಥ ಗಾಡಿಯ ಮೇಲೆ ಅಧಿಕಾರಿಗಳು ತೆರಳಿ ಗುಣಮಟ್ಟ ಪರಿಶೀಲನೆ ನಡೆಸಿದರು. ಭೇಟಿಯ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣದಲ್ಲಿ ಸಸಿಗಳನ್ನು ನೆಡಲಾಯಿತು. ಗುತ್ತಿಗೆದಾರರಿಂದ ಮಹಾಪ್ರಬಂಧಕ ಎ.ಕೆ. ಸಿಂಗ್‌ ಹಾಗೂ ಮುಖ್ಯ ಅಭಿಯಂತರ ರಾಮಗೋಪಾಲ ಮಾಹಿತಿ ಪಡೆದುಕೊಂಡರು. 

Advertisement

ಈ ಸಂದರ್ಭದಲ್ಲಿ ರೈಲ್ವೆ ಸಲಹಾ ಮಂಡಳಿ ಮಾಜಿ ಸದಸ್ಯ ಹಾಗೂ ನಾಗರೀಕ ಹಿತರಕ್ಷಣಾ ವೇದಿಕೆ ಸಂಚಾಲಕ ವಿ.ಪಿ. ಗುಪ್ತಾ ಮಾತನಾಡಿ, ಈಗಾಗಲೇ ಗಂಗಾವತಿ ರೈಲ್ವೆ ನಿಲ್ದಾಣದವರೆಗೆ ರೈಲು ಸಂಚಾರ ಮಾಡಬೇಕಿತ್ತು. ರೈಲ್ವೆ ಹಳಿಯ ಕೊರತೆಯಿಂದ ಮಾರ್ಗದ ಕಾಮಗಾರಿ ವಿಳಂಬವಾಗಿದೆ. ದೇಶದಲ್ಲಿ ರೈಲ್ವೆ ಅಪಘಾತ ಹಾಗೂ ಮಾರ್ಗ ಪರಿವರ್ತನೆ ಹಿನ್ನೆಲೆಯಲ್ಲಿ ಹಳಿ ಕೊರತೆಯಾಗಿದೆ. ಈಗಾಗಲೇ ಗಂಗಾವತಿ ತನಕ ಹಳೆಯ ಹಳಿಗಳ ಜೋಡಣೆಯಾಗಿದ್ದು, ಫೆಬ್ರುವರಿ ವೇಳೆ ನೂತನ ಹಳಿ ಜೋಡಣೆ ಮಾಡಿ ಮಾರ್ಚ್‌ ಅಂತ್ಯದ ವೇಳೆಗೆ ಗಂಗಾವತಿಯಿಂದ ರೈಲು ಸಂಚಾರ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಗಂಗಾವತಿಯಿಂದ ಗೋವಾ ಹಾಗೂ ಹೈದ್ರಾಬಾದ್‌ ಬೆಂಗಳೂರು ಸೇರಿ ಪ್ರಮುಖ ನಗರಗಳಿಗೆ ರೈಲು ಓಡಿಸುವಂತೆ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಂಸದರಿಗೆ ಈಗಾಗಲೇ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next