ರೈಲ್ವೇ ಪ್ರಯಾಣಕರಿಗೆ ಮಾಹಿತಿ ನೀಡುವ ಯುಟಿಎಸ್ ಅರಿವು ಆಂದೋಲನಕ್ಕೆ ಪಾಲಕ್ಕಾಡ್ ರೈಲ್ವೇ ವಿಭಾಗೀಯ ಪ್ರಬಂಧಕ ಪ್ರತಾಪ ಸಿಂಗ್ ಶಮಿ ಶನಿವಾರ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದರು.
Advertisement
ಈ ಸಂದರ್ಭ ಮಾತನಾಡಿದ ಅವರು, ಒಂದು ವಾರ ನಡೆಯುವ ಈ ಆಂದೋಲನದಲ್ಲಿ ಪ್ರಯಾಣಿಕರು ಟಿಕೆಟ್ ಕೌಂಟರ್‌ನಲ್ಲಿ ಸರದಿಯಲ್ಲಿ ನಿಂತು ಟಿಕೆಟ್ ಖರೀದಿಸುವ ಬದಲು ಯುಟಿಎಸ್ ಆ್ಯಪ್ ಡೌನ್ಲೋಡ್ಮಾಡಿ ಆ ಮೂಲಕ ಕಾದಿರಿಸದ ಟಿಕೆಟ್ ಪಡೆಯುವ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
Related Articles
ಪ್ರಯಾಣಿಕರು ಮೊಬೈಲ್‌ನಲ್ಲಿ ಯುಟಿಎಸ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳ ಬೇಕು. ಅನಂತರ ಮೊಬೈಲ್ ನಂಬರ್, ಹೆಸರು, ನಗರ, ಎಲ್ಲಿಂದ ಎಲ್ಲಿಗೆ ಪ್ರಯಾಣ, ಟಿಕೆಟ್ ಸ್ವರೂಪ, ಪ್ರಯಾಣಿಕರ ಸಂಖ್ಯೆಯನ್ನು ನೋಂದಾಯಿಸಬೇಕು. ನೋಂದಣಿ ಯಶಸ್ವಿಯಾದ ಬಳಿಕ ರೈಲ್ವೇ ವ್ಯಾಲೆಟ್ ಶೂನ್ಯ ಬ್ಯಾಲೆನ್ಸ್‌ನೊಂದಿಗೆ ಸ್ವಯಂ ತೆರೆಯುತ್ತದೆ. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. ರೈಲ್ವೇ ವ್ಯಾಲೆಟನ್ನು ರೈಲು ನಿಲ್ದಾಣಗಳಲ್ಲಿರುವ ಯುಟಿಎಸ್ ಕೌಂಟರ್ ಅಥವಾ www.utsonmobile.indianrail.gov.in ಮೂಲಕ ರಿಚಾರ್ಚ್ ಮಾಡಬಹುದಾಗಿದೆ. ಟಕೆಟ್ ದರ ವ್ಯಾಲೆಟ್‌ನಲ್ಲಿರುವ ನಗದಿನಿಂದ ಕಡಿತಗೊಳ್ಳುತ್ತದೆ. ಈ ಬಗ್ಗೆ ಮೊಬೈಲ್‌ಗೆ ಸಂದೇಶ ಬರುತ್ತದೆ. ಇದೇ ಟಿಕೆಟ್ ಆಗಿ ಪರಿಗಣಿಸಲ್ಪಡುತ್ತದೆ. ಮುದ್ರಿತ ಟಿಕೇಟು ಇರುವುದಿಲ್ಲ. ಟಿಕೆಟ್ ತಪಾಸಕರಿಗೆ ಈ ಸಂದೇಶವನ್ನು ತೋರಿಸಿದರೆ ಸಾಕಾಗುತ್ತದೆ. ರೈಲು ನಿಲ್ದಾಣದಿಂದ 25 ಮೀ. ದೂರದ ಬಳಿಕ ಆ್ಯಪ್ ಮೂಲಕ ಟಿಕೆಟು ಪಡೆಯಬಹುದು.
Advertisement