Advertisement
ರೈಲ್ವೆ ಇಲಾಖೆಯು ಈಗಾಗಲೇ ಜಿಲ್ಲೆಯ ಮಾರಿಕುಪ್ಪಂನಿಂದ ಬೆಂಗಳೂರಿಗೆ ಡೆಮು ರೈಲುಸಂಚಾರ ಡಿಸೆಂಬರ್‌ನಲ್ಲಿ ಆರಂಭಿಸಿದ್ದು, ಇದೀಗಬಂಗಾರಪೇಟೆಯಿಂದ ಕೋಲಾರ ಮತ್ತುಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಗಳ ಮೂಲಕಬೆಂಗಳೂರಿನ ಯಶವಂತಪುರ, ಮೆಜೆಸ್ಟಿಕ್ ಹಾಗೂಕಂಟೋನ್ಮೆಂಟ್ ರೈಲು ನಿಲ್ದಾಣಗಳಿಗೆ ಸಂಚಾರ ಆರಂಭವಾಗಲಿದೆ.
Related Articles
Advertisement
ಮಾರ್ಗ-3: ರೈಲು ಸಂಖ್ಯೆ 0680 ಪ್ರತಿ ನಿತ್ಯವೂ ಸಂಜೆ 4 ಗಂಟೆಗೆ ಬಂಗಾರಪೇಟೆ ಬಿಟ್ಟುರಾತ್ರಿ 8.20 ಕ್ಕೆ ಬೆಂಗಳೂರುಮೆಜೆಸ್ಟಿಕ್ ತಲುಪಲಿದೆ. ಈರೈಲು ಕೋಲಾರವನ್ನು 4.22 ಕ್ಕೆತಲುಪಿ 4.23 ಕ್ಕೆ ಬಿಡಲಿದೆ.ಚಿಕ್ಕಬಳ್ಳಾಪುರ 6.07 ಕ್ಕೆ ತಲುಪಿ 6.08 ಕ್ಕೆ ಬಿಡಲಿದೆ.
ಮಾರ್ಗ-4: ರೈಲು ಸಂಖ್ಯೆ 06269 ಪ್ರತಿ ನಿತ್ಯವೂ ಸಂಜೆ 5.55 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ರೈಲುನಿಲ್ದಾಣ ಬಿಟ್ಟು ರಾತ್ರಿ 9.45 ಕ್ಕೆ ಬಂಗಾರಪೇಟೆತಲುಪಲಿದೆ. ಚಿಕ್ಕಬಳ್ಳಾಪುರವನ್ನು ರಾತ್ರಿ 7.28 ಕ್ಕೆತಲುಪಿ 7.30 ಕ್ಕೆ ಬಿಡಲಿದೆ. ಕೋಲಾರವನ್ನು ರಾತ್ರಿ 9.10 ತಲುಪಿ 9.12 ಕ್ಕೆ ಬಿಡಲಿದೆ.
ಪ್ರಯಾಣಿಕರಿಗೆ ಅನುಕೂಲ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಮಾರ್ಗದಲ್ಲಿ ರೈಲುಗಳಸಂಚಾರವಾಗುವುದು ನಿತ್ಯವೂ ಸರ್ಕಾರಿ ಮತ್ತುಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ತೆರಳುವ ಉದ್ಯೋಗಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ.ಹಾಗೆಯೇ ತಾವು ಬೆಳೆದ ತರಕಾರಿಗಳನ್ನು ರೈಲುಮೂಲಕ ಬೆಂಗಳೂರು ಮಾರುಕಟ್ಟೆಗೆ ಸಾಗಿಸಲು ರೈತಾಪಿ ವರ್ಗಕ್ಕೂ ಪ್ರಯೋಜನಕಾರಿಯಾಗಿದೆ.ಜೊತೆಗೆ ಬಸ್‌ಗಳಲ್ಲಿ 70 ರಿಂದ 80 ರೂ.ಟಿಕೆಟ್ ಖರೀದಿಸಿ ಪ್ರಯಾಣಿಸಲು ಕಷ್ಟವಾಗುವ ಬಡ ಹಾಗೂ ಸಾಮಾನ್ಯ ವರ್ಗದ ಪ್ರಯಾಣಿಕರುಇದಕ್ಕಿಂತಲೂಕಡಿಮೆ ಮೊತ್ತದಲ್ಲಿ ಬಂಗಾರಪೇಟೆಯಿಂದ ಬೆಂಗಳೂರಿನ ನಿಲ್ದಾಣಗಳಿಗೆ ಹೋಗಿ ವಾಪಸ್ ಬರಲು ಅನುಕೂಲವಾಗುತ್ತದೆ.
ಸಿದ್ಧತೆಗಳೇನು?: ಸತತ ಒಂಬತ್ತು ತಿಂಗಳಿನಿಂದಲೂಕೋಲಾರ ಮತ್ತು ಚಿಕ್ಕಬಳ್ಳಾಪುರ ಮಾರ್ಗದಲ್ಲಿ ರೈಲುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಈಹಿನ್ನೆಲೆಯಲ್ಲಿ ಹೊಸದಾಗಿ ರೈಲು ಸಂಚಾರ ಆರಂಭವಾಗುತ್ತಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ರೈಲ್ವೆ
ಇಲಾಖೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದೆ. ಟ್ರ್ಯಾಕ್ ಸುರಕ್ಷತೆ ಖಚಿತಪಡಿಸಿಕೊಳ್ಳಲು ರೈಲುಗಳ ಓಡಾಟ ಸ್ಥಗಿತಗೊಂಡಿದ್ದಾಗಲೂ ಪ್ರತಿ ಹದಿನೈದುದಿನಗಳಿಗೊಮ್ಮೆ ಟ್ರಯಲ್ ರೈಲುಗಳ ಸಂಚಾರ ನಡೆಸಿಟ್ರ್ಯಾಕ್ ಸುರಕ್ಷತೆ ದೃಢಪಡಿಸಿಕೊಳ್ಳಲಾಗುತ್ತಿತ್ತು.ಇದೀಗ ಪ್ರಯಾಣಿಕರ ಓಡಾಟ ಆರಂಭವಾಗುವಹಿನ್ನೆಲೆಯಲ್ಲಿ ಸ್ಟೇಷನ್ ಮಾಸ್ಟರ್‌ಗಳು ಕಡ್ಡಾಯವಾಗಿಫೇಸ್ ಮಾಸ್ಕ್ ಧರಿಸಿಯೇ ಟಿಕೆಟ್ ನೀಡಬೇಕೆಂದು ಸೂಚಿಸಲಾಗಿದೆ.
ಹಾಗೆಯೇ ಪ್ರಯಾಣಿಕರು ಸಾಮಾನ್ಯವಾಗಿ ಇರುವ ಕೋವಿಡ್‌ಮಾರ್ಗಸೂಚಿಗಳಾದ ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್ ಬಳಕೆ ಇತ್ಯಾದಿಗಳನ್ನು ತಪ್ಪದೇ ಬಳಸಲುಸೂಚಿಸಲಾಗಿದೆ.
ಒಟ್ಟಾರೆ ಕೋಲಾರ ಚಿಕ್ಕಬಳ್ಳಾಪುರ ಮಾರ್ಗದಲ್ಲಿಮತ್ತೇ ರೈಲುಗಳ ಸಂಚಾರ ಆರಂಭವಾಗುತ್ತಿರುವುದುಅವಿಭಜಿತ ಕೋಲಾರ ಜಿಲ್ಲೆಯ ನೂರಾರು ಪ್ರಯಾಣಿಕರ ಸಂತಸಕ್ಕೆ ಕಾರಣವಾಗಿದೆ
ಒಂಬತ್ತು ತಿಂಗಳ ನಂತರ ಕೋಲಾರ ಮತ್ತುಚಿಕ್ಕಬಳ್ಳಾಪುರ ಮಾರ್ಗದಲ್ಲಿ ಡೆಮುರೈಲುಗಳ ಸಂಚಾರ ಆರಂಭವಾಗಲಿದೆ. ಕೋವಿಡ್‌ಮಾರ್ಗಸೂಚಿಗಳ ಪ್ರಕಾರ ಸುರಕ್ಷತೆಗೆ ಮಾರ್ಗಸೂಚಿ ಬಂದಿದೆ. ಜೋಡಿಜಿಲ್ಲೆಯ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರಯೋಜನ ಪಡೆಯಲು ಕೋರಿದೆ. – ಅಮರೇಶ್, ಸ್ಟೇಷನ್ ಮಾಸ್ಟರ್
ಕೋಲಾರ ಮತ್ತು ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಡೆಮು ರೈಲುಗಳ ಸಂಚಾರಆರಂಭವಾಗುತ್ತಿರುವುದು ಸಂತೋಷ. ಬಡವರು ಮತ್ತು ವ್ಯಾಪಾರಿ, ಕೃಷಿಕರು ತಮ್ಮ ಸರಕುಸಾಗಾಣಿಕೆಗಾಗಿ ಸುಲಭ ದರದಲ್ಲಿ ಬೆಂಗಳೂರಿಗೆ ಹೋಗಿ ಬರಲು ಅನುಕೂಲವಾಗುತ್ತದೆ. ಕೋಲಾರದಿಂದ ಬೆಳಗ್ಗೆ 7 ಗಂಟೆ ವೇಳೆಗೆಮತ್ತೂಂದು ರೈಲು ಸಂಚಾರ ಆರಂಭಿಸಿದರೆಮತ್ತಷ್ಟು ಅನುಕೂಲವಾಗುತ್ತದೆ. – ಚಾನ್‌ಪಾಷಾ, ರೈಲ್ವೆ ಪ್ರಯಾಣಿಕರು. ಕೋಲಾರ
-ಕೆ.ಎಸ್.ಗಣೇಶ್/ತಮೀಮ್ ಪಾಷ