Advertisement

ಶ್ರೀಕಾಕುಳಂ: ಹಳಿಯ ಮೇಲೆ ನಿಂತಿದ್ದವರಿಗೆ ಯಮರೂಪಿಯಾದ ರೈಲು! ಐವರು ಸಾವು

01:42 PM Apr 12, 2022 | keerthan |

ಹೈದರಾಬಾದ್: ರೈಲು ಹರಿದ ಪರಿಣಾಮ ಐವರು ಪ್ರಯಾಣಿಕರು ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ಸೋಮವಾರ ರಾತ್ರಿ ನಡೆದಿದೆ. ಈ ದುರ್ಘಟನೆಯಲ್ಲಿ ಮತ್ತೊಬ್ಬ ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ರೈಲ್ವೆ ಮತ್ತು ಸ್ಥಳೀಯ ಪೊಲೀಸರು ಅಪಘಾತದ ಸ್ಥಳಕ್ಕೆ ಧಾವಿಸಿದ್ದು, ತನಿಖೆ ಆರಂಭಿಸಿದ್ದಾರೆ. ಘಟನೆ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಬಟುವಾ ಗ್ರಾಮದಲ್ಲಿ ಸೋಮವಾರ ರಾತ್ರಿ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ:ಪ್ರಧಾನಿ ಪ್ರಮಾಣಕ್ಕೆ ಅಧ್ಯಕ್ಷರೇ ಗೈರು! ಅನಾರೋಗ್ಯದ ನೆಪ ಹೇಳಿದ ಪಾಕ್‌ ಅಧ್ಯಕ್ಷ ಅಳ್ವಿ

ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ  ಪ್ರಯಾಣಿಕರು ತಾವು ಪ್ರಯಾಣಿಸುತ್ತಿದ್ದ ಗುವಾಹಟಿ ಎಕ್ಸ್‌ಪ್ರೆಸ್ ರೈಲಿನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ತುರ್ತು ಸರಪಳಿಯನ್ನು ಎಳೆದರು. ಅವರು ರೈಲಿನಿಂದ ಇಳಿದು ಹಳಿಗಳ ಮೇಲೆ ನಿಂತಿದ್ದರು. ಆಗ ಎದುರಿನಿಂದ ಬಂದ ಇನ್ನೊಂದು ರೈಲು ‘ಕೋನಾರ್ಕ್ ಎಕ್ಸ್‌ಪ್ರೆಸ್’ ಇವರು ನಿಂತಿದ್ದ ಹಳಿಯ ಮೇಲೆ ಬಂದಿತ್ತು. ಇದನ್ನು ತಿಳಿಯದ ದುರ್ದೈವಿಗಳು ರೈಲಿನಡಿ ಸಿಲುಕಿಕೊಂಡಿದ್ದಾರೆ. ರೈಲು ಭುವನೇಶ್ವರದಿಂದ ವಿಶಾಖಪಟ್ಟಣಂಗೆ ತೆರಳುತ್ತಿತ್ತು.

Advertisement

ಮೃತರಲ್ಲಿ ಇಬ್ಬರು ಅಸ್ಸಾಂ ಮೂಲದವರು ಎಂದು ಗುರುತಿಸಲಾಗಿದೆ. ಉಳಿದವರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next