Advertisement
ಮುಂಬಯಿಯ ಲೋಕಮಾನ್ಯ ತಿಲಕ್ (ಟಿ) ಸ್ಟೇಷನ್ ಯಾರ್ಡ್ ವಾಷಿಂಗ್ ಪಿಟ್ ಲೈನ್ ನಂ. 7ರಲ್ಲಿ ಮಾ. 19 ತನಕ ದುರಸ್ತಿ ಹಿನ್ನೆಲೆಯಲ್ಲಿ ನಂ. 16346 ತಿರುವನಂತಪುರ ಸೆಂಟ್ರಲ್-ಲೋಕಮಾನ್ಯ ತಿಲಕ್ (ಟಿ) ನೇತ್ರಾ ವತಿ ಡೈಲಿ ಎಕ್ಸ್‌ಪ್ರೆಸ್ ಮತ್ತು ನಂ. 12620 ಮಂಗಳೂರು ಸೆಂಟ್ರಲ್- ಲೋಕಮಾನ್ಯ ತಿಲಕ್ (ಟಿ) ಮತ್ಸ್ಯಗಂಧ ಡೈಲಿ ಎಕ್ಸ್‌ಪ್ರೆಸ್ ಮಾ. 18ರ ತನಕ ಪನ್ವೇಲ್ ವರೆಗೆ ಮಾತ್ರ ಸಂಚರಿಸಲಿವೆ.
ನಂ. 16345 ಲೋಕಮಾನ್ಯ ತಿಲಕ್ (ಟಿ)-ತಿರುವನಂತಪುರ ಸೆಂಟ್ರಲ್ ನೇತ್ರಾವತಿ ಡೈಲಿ ಎಕ್ಸ್‌ಪ್ರೆಸ್ ಹಾಗೂ ನಂ. 12619 ಲೋಕಮಾನ್ಯ ತಿಲಕ್ (ಟಿ)-ಮಂಗಳೂರು ಸೆಂಟ್ರಲ್ ಮತ್ಸ್ಯಗಂಧ ಡೈಲಿ ಎಕ್ಸ್‌ಪ್ರೆಸ್ ಮಾ. 19ರ ವರೆಗೆ ನಿಗದಿತ ಸಮಯಕ್ಕೆ ಲೋಕಮಾನ್ಯ ಬದಲು ಪನ್ವೇಲ್‌ನಿಂದ ಪ್ರಯಾಣ ಆರಂಭಿಸಲಿವೆ. ಮಾ. 3ರ ವರೆಗೆ ವ್ಯತ್ಯಯ
ಮಂಗಳೂರು ಹೊರವಲಯದ ಪಡೀಲ್- ಜೋಕಟ್ಟೆ ನಿಲ್ದಾಣಗಳ ನಡು ವಿನ ಕುಲಶೇಖರದ ಸುರಂಗದಲ್ಲಿ ಹಳಿ ಬದಲಾವಣೆ, ತಾಂತ್ರಿಕ ಕಾಮಗಾರಿ ಹಿನ್ನೆಲೆಯಲ್ಲಿ ಕೊಂಕಣ, ನೈಋತ್ಯ ಮತ್ತು ದಕ್ಷಿಣ ರೈಲ್ವೇಯ ರೈಲುಗಳ ಸಂಚಾರ ದಲ್ಲಿ ಮಾ. 3ರ ವರೆಗೆ ವ್ಯತ್ಯಯ ವಾಗಲಿದೆ.
Related Articles
ಮಂಗಳೂರು ಸೆಂಟ್ರಲ್-ಮಡ್ಗಾಂವ್ (06602/ 06601), ಅಜೆ¾àರ್ ಜಂಕ್ಷನ್-ಎರ್ನಾಕುಳಂ ಜಂಕ್ಷನ್ (12978/ 12977), ಚಂಡೀ ಗಢ ಜಂಕ್ಷನ್- ಕೊಚ್ಚುವೇಲಿ (12218/ 12217), ತಿರುನಲ್ವೇಲಿ ಎಕ್ಸ್ ಪ್ರಸ್ ಜಾಮ್‌ನಗರ- ತಿರುನಲ್ವೇಲಿ ಜಂಕ್ಷನ್ (19578/ 19577),ಹಜ್ರತ್ ನಿಜಾಮುದ್ದೀನ್- ಎರ್ನಾ ಕುಳಂ (12284/ 12283), ತಿರುನ ಲ್ವೇಲಿ ಹಂಸಫರ್ ಎಕ್ಸ್‌ಪ್ರೆಸ್ ಗಾಂಧಿ ಧಾಮ ಜಂಕ್ಷನ್- ತಿರುನಲ್ವೇಲಿ ಜಂಕ್ಷನ್ (20924/20923), ಓಖಾ- ಎರ್ನಾಕುಳಂ ಎಕ್ಸ್‌ಪ್ರೆಸ್ (16337/ 16338), ತಿರುನಲ್ವೇಲಿ ಜಂಕ್ಷನ್-ದಾದರ್ (22630/ 22629), ಇಂದೋರ್ ಜಂಕ್ಷನ್- ಕೊಚ್ಚುವೇಲಿ (20932/20931), ಪೋರ್‌ಬಂದರ್-ಕೊಚ್ಚುವೇಲಿ (20910/20909).
Advertisement
ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಮತ್ತೆ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ವಾಗುತ್ತಿದೆ. ಮಾ. 15ರ ಬಳಿಕ ಮತ್ತೆ ಎಂದಿನಂತೆ ಸಂಚರಿಸಲಿವೆ.– ಸುಧಾ ಕೃಷ್ಣಮೂರ್ತಿ, ಪಿಆರ್‌ಒ, ಕೊಂಕಣ ರೈಲ್ವೇ ಭಾಗಶಃ ರದ್ದು
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (12133/ 12134) ರೈಲುಗಳು ಮಾ. 2 ತನಕ ಸುರತ್ಕಲ್ ಮತ್ತು ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವುದಿಲ್ಲ. ಮಡಗಾಂವ್-ಮಂಗಳೂರು ಸೆಂಟ್ರಲ್ (10107/ 10108) ರೈಲುಗಳು ಮಾ. 3ರ ವರೆಗೆ ತೋಕೂರು ಮತ್ತು ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವುದಿಲ್ಲ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್-ಮಂಗಳೂರು ಜಂಕ್ಷನ್ (12133/ 12134) ಡೈಲಿ ಎಕ್ಸ್ ಪ್ರಸ್‌ನ ಪ್ರಯಾಣಿಕರು ಈ ಅವಧಿಯಲ್ಲಿ ಮಂಗಳೂರು ಜಂಕ್ಷನ್ ಮತ್ತು ಸುರತ್ಕಲ್ ನಿಲ್ದಾಣಗಳ ನಡುವೆ ಸಂಚರಿಸಲು ಬಸ್ ವ್ಯವಸ್ಥೆ ಮಾಡಲಾಗಿದೆ.