Advertisement

ಪ್ರವಾಸಿಗರಿಗಾಗಿ ರೈಲು ಕೋಚ್‌ ಕೆಫೆಟೇರಿಯಾ

05:12 AM Jun 23, 2020 | Lakshmi GovindaRaj |

ಮೈಸೂರು: ನವೀಕೃತಗೊಂಡ ನಗರದ ರೈಲ್ವೆ ವಸ್ತು ಸಂಗ್ರಹಾಲಯಕ್ಕೆ ಹಳೆಯ ರೈಲ್ವೆ ಬೋಗಿಯೊಂದನ್ನು ಕೆಫೆಟೇರಿಯಾ ಆಗಿ ವಿಶಿಷ್ಟ ರೀತಿಯಲ್ಲಿ ಪರಿವರ್ತಿಸಲಾಗಿದೆ. ವಸ್ತು ಸಂಗ್ರಹಾಲಯಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ  ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ರೈಲು ಬೋಗಿ ಯೊಂದನ್ನು ರೆಸ್ಟೋರೆಂಟ್‌ ಆಗಿ ಪರಿವರ್ತಿಸಿದೆ.

Advertisement

ನವೀಕೃತ ಬೋಗಿಯಲ್ಲಿ ಸೃಷ್ಟಿಸಿರುವ ವಾತಾವರಣ, ಪಾರಂಪರಿಕ ಬೋಗಿ ಮತ್ತು ರೈಲುಗಾಡಿಗಳಿಗೆ ಸಮಕಾಲೀನ ಕಲೆ, ಬಹು ಮಾಧ್ಯಮ,  ವಿಡಿಯೋ ಮತ್ತು ಧ್ವನಿ ಅಳವಡಿಸಿದೆ. ಪ್ರವಾಸಿಗರಿಗಾಗಿ ರೈಲು ಕೋಚ್‌ ಕೆಫೆಟೇರಿಯಾ ಸಿದ್ಧವಾಗಿದೆ. ರೈಲ್ವೆ ಸಂಗ್ರಹಾಲಯದ ಹಲವು ಹೊಸ ವೈಶಿಷ್ಟಗಳಲ್ಲಿ ಕೋಚ್‌ ರೆಸ್ಟೋರೆಂಟ್‌ ಒಂದಾಗಿದೆ. ಹಳೆಯ ಉಗಿ  ಲೋಕೋಮೋಟಿವ್‌ಗಳು, ಪುರಾತ ನ ಹೆಂಚಿನ ಹೊದಿಕೆ ಶೈಲಿಯಲ್ಲಿ ರೆಸ್ಟೋರೆಂಟ್‌ ನಿರ್ಮಿಸಲಾಗಿದೆ.

ಇದು ದಾರಿ ಪಕ್ಕದ ರೈಲ್ವೆ ನಿಲ್ದಾಣದ ಮತ್ತು ಲೆವೆಲ್‌ ಕ್ರಾಸಿಂಗ್‌ ಗೇಟ್‌ಗಳ ಭಾವನೆಯೊಂದಿಗೆ, ಹಸಿರು ಸುರಂಗಮಾರ್ಗ, ಆಂಫಿ  ಥಿಯೇಟರ್‌, ಹೊರಾಂ ಗಣ ಪ್ರದರ್ಶನ ಅದ್ಭುತ ಅನುಭವ ನೀಡಲಿದೆ. ಕೋಚ್‌ ರೆಸ್ಟೋರೆಂಟ್‌ನಲ್ಲಿ ಒಂದು ಬಾರಿಗೆ 3ರಿಂದ 4 ಕುಟುಂಬಗಳಿಗೆ ಆತಿಥ್ಯ ವಹಿಸಬಲ್ಲದು. ಶುಚಿ, ರುಚಿ, ಆರೋಗ್ಯಕರ ತಿಂಡಿ, ಲಘು ಉಪಾಹಾರ ಮತ್ತು ಕಾಫಿ  ಮತ್ತು ಚಹಾ ಸವಿಯಲು ಉತ್ತಮ ವಾತಾವರಣ ಕಲ್ಪಿಸಲಾಗಿದೆ.

ಕೋಚ್‌ ರೆಸ್ಟೋರೆಂಟ್‌ ಉದ್ಘಾಟನೆ: ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣ ಗರ್ಗ್‌ ಕೋಚ್‌ ರೆಸ್ಟೋರೆಂಟನ್ನು ಸೋಮ ವಾರ ಉದ್ಘಾಟಿಸಿದರು. ಈ ಕೋಚ್‌ ರೆಸ್ಟೋರೆಂಟ್‌ ಎಸ್‌ ಡಬ್ಲ್ಯುಆರ್‌ಡಬ್ಲ್ಯುಡಬ್ಲ್ಯುಒ ಪದಾಧಿಕಾರಿಗಳ ಆಶ್ರಯದಲ್ಲಿ ಲಾಭ ರಹಿತ-ನಷ್ಟವಿಲ್ಲದ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಈ ಸಂದರ್ಭದಲ್ಲಿ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next