Advertisement
ಈ ರೈಲು ಮಂಗಳೂರಿಗೆ 8.15ಕ್ಕೆ ಬರುತ್ತಿದ್ದು, ಅಲ್ಲಿಂದ ಸುರತ್ಕಲ್‌ಗೆ ಬರುವಾಗ 11 ಗಂಟೆ ಆಗುತ್ತಿದೆ. ಅವೈಜ್ಞಾನಿಕ ವೇಳಾಪಟ್ಟಿಯಿಂದ ಈ ರೀತಿಯ ವಿಳಂಬ ಆಗುತ್ತಿದೆ ಎಂದು ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಆರೋಪಿಸಿದೆ.
ಮತ್ಸ್ಯಗಂಧ ಎಕ್ಸ್‌ಪ್ರೆಸ್ ಮಂಗಳೂರಿನಿಂದ ಕುಂದಾಪುರಕ್ಕೆ ಬರಲು 2 ಗಂಟೆ ಸಾಕು. ಅಷ್ಟೇ ನಿಲುಗಡೆ ಇರುವ ಈ ರೈಲಿಗೆ ಮಾತ್ರ 3 ಗಂಟೆ ಯಾಕೆ ಅನ್ನುವುದಾಗಿ ಪ್ರಶ್ನಿಸಿರುವ ಸಮಿತಿ, ನೈಋತ್ಯ ರೈಲ್ವೇಯವರಿಂದ ಮೊದಲಿಗಿಂತಲೂ ಅರ್ಧ ಗಂಟೆ ಬೇಗನೆ ರೈಲನ್ನು ಪಡೆದು, ಕೊಂಕಣ ರೈಲ್ವೇಗೆ ಮಾತ್ರ ವಿಳಂಬವಾಗಿ ರೈಲನ್ನು ಹಸ್ತಾಂತರಿಸುವ ದಕ್ಷಿಣ ರೈಲ್ವೇಯ ಕ್ರಮ ಅನುಮಾನ ಮೂಡಿಸಿದೆ. ಪ್ರತಿ ದಿನ ರೈಲು ಜೋಕಟ್ಟೆ, ತೋಕೂರು, ಸುರತ್ಕಲ್ ನಿಲ್ದಾಣಕ್ಕೆ 30 ರಿಂದ 40 ನಿಮಿಷ ಬೇಗ ಬಂದು ನಿಲ್ಲುವ ಬದಲು, 9.30ಕ್ಕೆ ಕೊಂಕಣ ರೈಲ್ವೇಗೆ ಹಸ್ತಾಂತರಿಸಿದರೆ, ಉಡುಪಿ, ಕುಂದಾಪುರಕ್ಕೆ ಒಂದು ಗಂಟೆ ಬೇಗನೇ ತಲುಪಬಹುದು ಎನ್ನುವ ಸಲಹೆ ನೀಡಿದೆ.
Related Articles
Advertisement