ಕೇರಳ (ಕೊಲ್ಲಂ) : ವಿಷ ಸೇವಿಸಿ ಪತಿ ಆತ್ಮಹತ್ಯೆ ಮಾಡಿಕೊಂಡ ಕೆಲ ಗಂಟೆಯ ಬಳಿಕ ಅನಾರೋಗ್ಯ ಪೀಡಿತೆ ಪತ್ನಿ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.
ರವೀಂದ್ರನ್ ಪಿಳ್ಳೈ (72) ತಮ್ಮ ನಿವಾಸದಲ್ಲಿ ಶನಿವಾರ ಬೆಳಗ್ಗೆ (ಮೇ 6 ರಂದು) ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಪಕ್ಕದಲ್ಲಿ ಕೀಟನಾಶಕ ಬಾಟಲಿ ಪತ್ತೆಯಾಗಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.
ಇದನ್ನೂ ಓದಿ:ಜೂಜಾಟದ ವೇಳೆ ಪೊಲೀಸ್ ದಾಳಿ: ಭೀತಿಯಿಂದ ಓಡುವಾಗ ಬಾವಿಗೆ ಬಿದ್ದು ಯುವಕ ಮೃತ್ಯು
ರವೀಂದ್ರನ್ ಪಿಳ್ಳೈ ಅವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು, ಕೆಲ ಸಮಯದಿಂದ ಹಾಸಿಗೆ ಹಿಡಿದಿದ್ದರು. ಪತಿಯ ಸಾವಿನ ಸುದ್ದಿಯನ್ನು ಕೇಳಿದ ಕೆಲವೇ ಗಂಟೆಯಲ್ಲಿ ರವೀಂದ್ರನ್ ಪಿಳ್ಳೈ ಅವರ ಪತ್ನಿ ಲಲಿತಾಂಬಿಕಾ (75) ಅವರಿಗೆ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ.
ದಂಪತಿ ಮೂರು ಮಕ್ಕಳನ್ನು ಅಗಲಿದ್ದಾರೆ.