Advertisement

ಪುತ್ತೂರು: ಅವಿವಾಹಿತ ಯುವಕ ನೇಣು ಬಿಗಿದು ಆತ್ಮಹತ್ಯೆ

10:15 AM May 01, 2021 | Team Udayavani |

ಪುತ್ತೂರು: ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿಡ್ಪಳ್ಳಿ ಗ್ರಾಮದ ಪೊಯ್ಯೆತ್ತಡ್ಕ ಎಂಬಲ್ಲಿ ನಡೆದಿದೆ.

Advertisement

ನಿಡ್ಪಳ್ಳಿ ಪೊಯ್ಯೆತ್ತಡ್ಕ ಐತ್ತಪ್ಪ ನಾಯ್ಕರವರ ಪುತ್ರ ವಿಶ್ವನಾಥ ಮೃತಪಟ್ಟವರಾಗಿದ್ದಾರೆ. ಕೂಲಿ ಕಾರ್ಮಿಕರಾಗಿರುವ ವಿಶ್ವನಾಥರವರ ಮನೆಯ ಸಮೀಪದಲ್ಲಿರುವ ಕಟ್ಟಡದ ಹೊರ ಜಗಲಿಯ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮುಂಜಾನೆ ಪತ್ತೆಯಾಗಿದೆ.

ಇದನ್ನೂ ಓದಿ :  ಇಂಗ್ಲೆಂಡ್ ದೇಶದ ಈ ಮಗು, ಅತಿ ಹೆಚ್ಚು ತೂಕ ಹೊಂದಿರುವ 2 ನೇ ಶಿಶು! : ತೂಕ ಎಷ್ಟು ಗೊತ್ತಾ!

ಸಾವಿನ ಕುರಿತು ಸಾರ್ವಜನಿಕರು ಅನುಮಾನ‌ ವ್ಯಕ್ತಪಡಿಸಿದ್ದಾರೆ. ಘಟನ ಸ್ಥಳಕ್ಕೆ ಸಂಪ್ಯ ಪೊಲೀಸರು ಅಗಮಿಸಿ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next