ಬೆಳಗಾವಿ: ಪತ್ನಿ ಸಾವಿನಿಂದ ಮನನೊಂದ ಪತಿ ತನ್ನ ನಾಲ್ವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮ ನಡೆದಿದೆ.
ಮಾಜಿ ಯೋಧನಾಗಿದ್ದ ಗೋಪಾಲ ದೊಡ್ಡಪ್ಪ ಹಾದಿಮನಿ (46), ತನ್ನ ಮಕ್ಕಳಾದ ಸೌಮ್ಯ ಗೋಪಾಲ್ ಮಾದೇವಿ,(19) ಸ್ವಾತಿ ಗೋಪಾಲ ಹಾದಿಮನಿ,(16) ಸಾಕ್ಷಿ ಗೋಪಾಲ್ ಹಾದಿಮನಿ, (12) ಸೃಜನ್ ಗೋಪಾಲ್ ಹಾದಿಮನಿ (10) ಅವರಿಗೆ ವಿಷ ಹಾಕಿ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಫುಡ್ ಇನ್ಸ್‌ಪೆಕ್ಷರ್ ಎಂದು ನಂಬಿಸಿ ಮೋಸ
ಗೋಪಾಲ ದೊಡ್ಡಪ್ಪ ಹಾದಿಮನಿ ,ಪತ್ನಿ ಜಯಾ ಇತ್ತೀಚೆಗೆ ಬ್ಲ್ಯಾಕ್ ಫಂಗಸ್ ಗೆ ಬಲಿಯಾಗಿದ್ದರು. ಇದೇ ನೋವಿನಲ್ಲಿ ಮನನೊಂದಿದ್ದ ಗೋಪಾಲ ದೊಡ್ಡಪ್ಪ ಹಾದಿಮನಿ ಖಿನ್ನತೆಗೆ ಒಳಗಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.