Advertisement

ಜೀನ್ಸ್‌ ಧರಿಸಿದ್ದಕ್ಕೆ ಹೊಡೆದು ಕೊಂದರು!

12:09 AM Jul 23, 2021 | Team Udayavani |

ದೆವೊರಿಯಾ (ಉ.ಪ್ರ.): ಜೀನ್ಸ್‌  ಧರಿಸಿದ್ದನ್ನು ವಿರೋಧಿಸಿ ಕುಟುಂಬಸ್ಥರು ಮಾಡಿ ರುವ ಹಲ್ಲೆಗೆ ನೇಹಾ ಪಾಸ್ವಾನ್‌ (17) ಎಂಬ ಬಾಲಕಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಸವ್ರೇಜಿ ಖಾರ್ಗ್‌ ಎಂಬ ಹಳ್ಳಿಯಲ್ಲಿ ನಡೆದಿದೆ.

Advertisement

ಜೀನ್ಸ್‌ ಧರಿಸಕೂಡದೆಂದು ಕುಟುಂಬಸ್ಥರು ಪದೇಪದೆ ಸೂಚಿಸಿದ್ದರೂ ಅದನ್ನು ಪಾಲಿಸದ್ದ ಕ್ಕಾಗಿ ಕುಟುಂಬಸ್ಥರು ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಆಕೆ ಅಸುನೀಗಿದ್ದನ್ನು ಕಂಡು ಶವವನ್ನು ತಮ್ಮ ಹಳ್ಳಿಯ ಬಳಿಯ ಬಳಿ ಇರುವ ಹೆದ್ದಾರಿಯಲ್ಲಿರುವ ಸೇತುವೆಯಲ್ಲಿ ನೇಣು ಬಿಗಿದು ತೂಗು ಹಾಕಿದ್ದಾರೆ.

ಪ್ರಯಾಣಿಕರು ನೀಡಿದ ಮಾಹಿತಿ ಮೇರೆಗೆ ಶವ ವಶಕ್ಕೆ ಪಡೆದ ಪೊಲೀಸರು ತನಿಖೆಯ ಅನಂತರ ಬಾಲಕಿಯ ಅಜ್ಜ, ಚಿಕ್ಕಪ್ಪಂದಿರನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next