ಸುಳ್ಯ: ದಿನದ ಅಂತrದಲ್ಲಿ ನಡೆದ ಎರಡು ಪ್ರತ್ಯೇಖ ದುರ್ಘಟನೆಯಲ್ಲಿ ತೆಂಗಿನ ಕಾಯಿ ಕೀಳಲು ಮರ ಹತ್ತಿ, ಮರದಿಂದ ಬಿದ್ದು ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ಕೇಮ್ರಾಜೆ ಗ್ರಾಮದಲ್ಲಿ ಸಂಭವಿಸಿದೆ.
ಘಟನೆ 1:
ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಅಂಬೆಕಲ್ಲು ಬಳಿಯ ಪರ್ಲಡಿ ಎಂಬಲ್ಲಿ ಎ.10 ರಂದು ಮಧ್ಯಾಹ್ನ ತೆಂಗಿನ ಕಾಯಿ ಕೀಳಲು ತೆಂಗಿನ ಮರ ಹತ್ತಿದ್ದ ನೆಲ್ಲೂರು ಕೇಮ್ರಾಜೆ ಗ್ರಾಮದ ದಾಸನಕಜೆ ದಿ.ಶಿವರಾಮ ಮಣಿಯಾಣಿ ಅವರ ಪುತ್ರ ಸತೀಶ ಮಣಿಯಾಣಿ (35) ಆಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದರು.
ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ದಾರಿಮಧ್ಯೆ ಗಾಯಾಳು ಯುವಕ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಅವಿವಾಹಿತರಾಗಿದ್ದು ತಾಯಿ, ಓರ್ವ ಸಹೋದರನನ್ನು ಅಗಲಿದ್ದಾರೆ.
ಸತೀಶ್ ಅವರ ತಂದೆ, ಓರ್ವ ಸಹೋದರ ಕೂಡ ತೆಂಗಿನ ಮರದಿಂದ ಬಿದ್ದು ಮೃತಪಟ್ಟಿದ್ದರು.
ಘಟನೆ 2:
ಇನ್ನೊಂದು ಘಟನೆಯೂ ನೆಲ್ಲೂರು ಕೇರ್ಮಾಜೆ ಗ್ರಾಮದಲ್ಲೇ ಸಂಭವಿಸಿದೆ. ನೆಲ್ಲೂರು ಕೇಮ್ರಾಜೆ ಗ್ರಾಮದ ನಾರ್ಣಕಜೆ ದಿ.ಕುಂಞ ಎಂಬವರ ಪುತ್ರ ಹರೀಶ್(29) ಮೃತರು.
ಹರೀಶ್ ನೆಲ್ಲೂರು ಕೇಮ್ರಾಜೆ ಗ್ರಾಮದ ಬೊಳ್ಳಾಜೆ ಬಳಿಯ ಕಂದೂರು ಎಂಬಲ್ಲಿ ಎ.11ರಂದು ತೆಂಗಿನ ಕಾಯ ಕೀಳಲು ಮರ ಹತ್ತಿ ತೆಂಗಿನಕಾಯಿ ತೆಗೆದು ಇಳಿಯುತ್ತಿದ್ದ ವೇಳೆ ಸ್ಮೃತಿ ತಪ್ಪಿ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.