ಬೆಂಗಳೂರು: ನಾಗರಬಾವಿಯ ರಿಂಗ್ ರಸ್ತೆಯ ಮೇಲ್ಸೇತುವೆ ಬಳಿ ಚಲಿಸುತ್ತಿದ್ದ ಲಾರಿಯಿಂದ ಬೃಹತ್ ಗಾತ್ರದ ದಿಮ್ಮಿಗಳು ಬೈಕ್ ಮೇಲೆ ಬಿದ್ದು ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟರೆ, ಸವಾರ ಗಾಯಗೊಂಡಿದ್ದಾನೆ.
ತಮಿಳುನಾಡು ಮೂಲದ ನಂದಿನಿ ಲೇಔಟ್ ನಿವಾಸಿ ಮುಕೇಶ್ (23) ಮೃತ ದುರ್ದೈ ವಿ. ಮುಕೇಶ್ ಬಾಮೈದ ಬೈಕ್ ಸವಾರ ಡೇವಿಡ್, ಮತ್ತೂಂದು ಬೈಕ್‌ನ ಸವಾರ ಶಿವು ಗಾಯಗೊಂಡಿದ್ದಾರೆ.
ಮುಕೇಶ್ ತಮಿಳುನಾಡಿ ತಿರುವಣ್ಣಾಮಲೆಯಲ್ಲಿರುವ ತಾಯಿ ಹಾಗೂ ಅಜ್ಜಿಯನ್ನು ನೋಡಿಕೊಂಡು ಶುಕ್ರವಾರ ಮುಂಜಾನೆ 4.30ಕ್ಕೆ ಸೆಟಲೈಟ್ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ನಿಲ್ದಾಣದಿಂದ ಬಾಮೈದ ಡೇವಿಡ್ ತಮ್ಮ ಬೈಕ್‌ನಲ್ಲಿ ಮುಕೇಶ್‌ರನ್ನು ಮನೆಗೆ ಕರೆದುಕೊಂಡು ಬರುತ್ತಿದ್ದರು. ಇತ್ತ ಸುಂಕದಕಟ್ಟೆಯಿಂದ ಟಿಂಬರ್ ಯಾರ್ಡ್ ಕಡೆಗೆ ಮರದ ದಿಮ್ಮಿಗಳನ್ನು ತೆಗೆದುಕೊಂಡು ಬರುತ್ತಿದ್ದ ಲಾರಿ ಮಾರ್ಗಮಧ್ಯೆ ನಾಗರಬಾವಿ ರಿಂಗ್ ರಸ್ತೆಯ ಮೇಲ್ಸೇತುವೆ ಬಳಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿತ್ತು.
ಅದೇ ರಸ್ತೆಯಲ್ಲಿ ಲಾರಿಯ ಮುಂಭಾಗದಿಂದ ಬರುತ್ತಿದ್ದ ಡೇವಿಡ್ ಬೈಕ್ ಮೇಲೆ ಬೃಹತ್ ಗಾತ್ರದ ಮರದ ದಿಮ್ಮಿಗಳು ಬಿದ್ದಿದ್ದವು. ಪರಿಣಾಮ ಮುಕೇಶ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡೇವಿಡ್ ಗಾಯಗೊಂಡಿದ್ದಾರೆ. ಲಾರಿ ಪಕ್ಕದಲ್ಲಿ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ಶಿವು ಎಂಬುವವರಿಗೂ ಗಾಯಗಳಾಗಿವೆ. ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
7 ತಿಂಗಳ ಹಿಂದೆ ಮದುವೆ ಪತ್ನಿ 5 ತಿಂಗಳ ಗರ್ಭಿಣಿ: ಕೂಲಿ ಕೆಲಸ ಮಾಡುತ್ತಿದ್ದ ಮುಕೇಶ್ 7 ತಿಂಗಳ ಹಿಂದೆ ಮದುವೆಯಾಗಿದ್ದರು. ಇವರ ಪತ್ನಿ 5 ತಿಂಗಳ ಗರ್ಭಿಣಿಯಾಗಿದ್ದು, ನಾಗರ ಬಾವಿಯ ಖಾಸಗಿ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂ ದನ ಮುಗಿಲು ಮುಟ್ಟಿದೆ. ಆಂಧ್ರ ಪ್ರದೇಶ ಮೂಲದ ಲಾರಿಯಾಗಿದ್ದು, ಟಿಂಬರ್ ಯಾರ್ಡ್‌ಗೆ ಮರದ ದಿಮ್ಮಿಗಳನ್ನು ತರುತ್ತಿತ್ತು. ಮುಂಜಾನೆಕಡಿಮೆ ವಾಹನಗಳಿದ್ದ ಹಿನ್ನೆಲೆಯಲ್ಲಿ ಚಾಲಕ ಅತೀ ವೇಗವಾಗಿ ಲಾರಿ ಚಲಾಯಿಸಿದ್ದ. ದುರ್ಘಟನೆ ನಡೆದ ಸ್ಥಳದ ಬಳಿ ತಿರುವಿದ್ದು, ಅಲ್ಲಿ ಏಕಾಏಕಿ ಬ್ರೇಕ್ ಹಾಕಿರುವ ಕಾರಣ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿರ ಬಹುದು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.