ಮೈಸೂರು : ಮಗನೊಬ್ಬ ಕೋವಿಡ್ ಸೋಂಕಿನಿಂದ ಮೃತಪಟ್ಟ ತನ್ನ ತಂದಯೆ ಶವವನ್ನು ಪಡೆದುಕೊಳ್ಳಲು ನಿರಾಕರಿಸಿದ ಅಮಾನವೀಯ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಹೆಬ್ಬಾಳದ ವೃದ್ಧ ನಿವಾಸಿಯೊಬ್ಬರು ಕೋವಿಡ್ ಗೆ ಬಲಿಯಾಗಿದ್ದಾರೆ. ಮೈಸೂರು ಪಾಲಿಕೆಯ ಸದಸ್ಯ ಶ್ರೀಧರ್ ಮೃತ ವ್ಯಕ್ತಿಯ ಮಗನಿಗೆ ಕರೆಮಾಡಿ ತಂದೆ ಸಾವನ್ನಪ್ಪಿರುವ ವಿಷಯವನ್ನು ಹೇಳುತ್ತಾರೆ. ಆದರೆ ಮೃತ ವ್ಯಕ್ತಿತಯ ಮಗನಿಂದ ಬಂದ ಉತ್ತರ ಕೇಳಿ ಸ್ವತಃ ಪಾಲಿಕೆ ಅಧಿಕಾರಿಯೇ ದಂಗಾಗಿದ್ದಾರೆ.
ಇದನ್ನೂ ಓದಿ : ಮೋದಿ ಕಣ್ಣೀರಾದ ಕ್ಷಣ : ಪ್ರಧಾನಿಗೆ ಆಸ್ಕರ್ ಕೊಡಬೇಕೆಂದು ವ್ಯಂಗ್ಯವಾಡಿದ ನಿರ್ದೇಶಕ ವರ್ಮಾ
ತಂದೆಯ ಅಂತ್ಯಕ್ರಿಯೆಯನ್ನು ನೀವೆ ಮುಗಿಸಿ. ಅವರ ಬಳಿ ಇರುವ 6 ಲಕ್ಷ ಹಣ ಹಾಗೂ ಇನ್ನಿತರೆ ದಾಖಲೆಗಳನ್ನು ನನ್ನ ಬಳಿ ತಂದು ಕೊಡಿ,ನೀವು ಮಾಡಿರುವ ಖರ್ಚನ್ನು ಅದೇ ಹಣದಲ್ಲಿ ಕೊಡುತ್ತೇನೆ ಎಂದು ತಾನಿರುವ ವಿಳಾಸವನ್ನು ತಿಳಿಸಿ ಕರೆ ಕಟ್ ಮಾಡಿದ್ದಾನೆ.
ಬಂಧು-ಬಳಗ ಇದ್ದರೂ ಕೋವಿಡ್ ಸೋಂಕಿತನ ಶವ ಅನಾಥವಾಗಿರುವುದು ದುರಂತ.