Advertisement

ಮೂಲ್ಕಿ: ಪೈಪ್‌ ಬಿದ್ದು ಮಗು ಸಾವು

01:12 AM Sep 02, 2021 | Team Udayavani |

ಮೂಲ್ಕಿ: ಮೂಲ್ಕಿ ವ್ಯಾಪ್ತಿಯ ಕಾರ್ನಾಡು ಸದಾಶಿವ ನಗರದ ಆಶ್ರಯ ಕಾಲನಿ ಬಳಿಯ ಸಿಮೆಂಟ್‌ ಪೈಪ್‌ ತಯಾರಿಕೆ ಘಟಕದ ಆವರಣದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಪೈಪ್‌ ಉರುಳಿ ಬಿದ್ದು ಮಗು ಸಾವನ್ನಪ್ಪಿದ ಘಟನೆ ವರದಿಯಾಗಿದೆ.

Advertisement

ಈ ಘಟಕದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ರಾಮು ಅವರ ಪುತ್ರ 4 ವರ್ಷದ ಯುವರಾಜ ಇತರ ಮಕ್ಕಳೊಂದಿಗೆ ಪೈಪ್‌ ಜೋಡಿಸಿದ್ದ ಪಕ್ಕದಲ್ಲಿ ಮಂಗಳವಾರ ಸಂಜೆ ಆಟವಾಡುತ್ತಿದ್ದ ಸಂದರ್ಭ ಪೇರಿಸಿದ್ದ ಬೃಹತ್‌ ಗಾತ್ರದ ಪೈಪ್‌ಗಳು ಮಗುವಿನ ಮೇಲೆ ಉರುಳಿ

ಬಿತ್ತು. ಹತ್ತಿರದಲ್ಲಿದ್ದ ಇತರ ಮಕ್ಕಳು ಬೊಬ್ಬೆ ಹಾಕಿದಾಗ ಘಟಕದಲ್ಲಿದ್ದ ಸಿಬಂದಿ ಧಾವಿಸಿ ಬಂದು ಗಾಯಗೊಂಡ ರಾಮುನನ್ನು ಕೂಡಲೇ ಮುಕ್ಕ ಬಳಿಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ಮೂಲ್ಕಿ ಪೊಲೀಸರು ಘಟನೆಯ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next