Advertisement

Tragic: ಪಂಚಾಯ್ತಿಯಲ್ಲೇ ಗ್ರಾಪಂ ಸಿಬ್ಬಂದಿ ಮಗ ಆತ್ಮಹತ್ಯೆ

05:46 PM Dec 21, 2023 | Team Udayavani |

ಮಾಲೂರು: ತಾಲೂಕಿನ ಮಡಿವಾಳ ಗ್ರಾಪಂ ಸಹಾಯಕ ನಾಗರಾಜ್‌ ಎಂಬುವರ ಮಗ ಕೃಷ್ಣ(24) ಎಂಬಾತನು ಗ್ರಾಪಂ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

Advertisement

ತಾಲೂಕಿನ ಮಡಿವಾಳ ಗ್ರಾಮ ಪಂಚಾಯ್ತಿಯ ಚೊಕ್ಕಡಹಳ್ಳಿ ಗ್ರಾಮದ ಕೃಷ್ಣ ಎಂಬಾತನು ರಾತ್ರಿ ಗ್ರಾಮ ಪಂಚಾಯ್ತಿ ಕಾರ್ಯಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈತನ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ.

ಎರಡು ವರ್ಷಗಳಿಂದ ಗ್ರಾಮ ಪಂಚಾಯ್ತಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ತಂದೆ ನಾಗರಾಜ್‌ ಅನಾರೋಗ್ಯದ ಕಾರಣ ಹೇಳಿ ಮಗನನ್ನು ಗ್ರಾಪಂ ಕೆಲಸಕ್ಕೆ ಆನಧಿಕೃತವಾಗಿ ನಿಯೋಜಿಸಿದ್ದರು ಎನ್ನಲಾಗಿದೆ. ತಂದೆಯ ಕೆಲಸ ಮಾಡುತ್ತಿದ್ದ ಕೃಷ್ಣನಿಗೆ ರಾತ್ರಿಯಲ್ಲಿ ಪಂಚಾಯ್ತಿಗೆ ಬರುವ ಅಗತ್ಯವಾದರೂಏನ್ನು ಎನ್ನುವುದು ಪ್ರಶ್ನೆಯಾಗಿದ್ದು, ಈ ಬಗ್ಗೆ ಅಧಿಕಾರಿಗಳಲ್ಲಿ ಉತ್ತರ ಇಲ್ಲ ದಂತಾಗಿದೆ.

ನಿವೇಶನಕ್ಕೆ ಕಾಂಪೌಂಡ್‌ ನಿರ್ಮಾಣ: ಇತ್ತೀಚಿಗೆ ಚೊಕ್ಕಂಡಹಳ್ಳಿಯ ಗ್ರಾಪಂ ವ್ಯಾಪ್ತಿಯಲ್ಲಿನ ಕಂದಾಯ ಭೂಮಿಯಲ್ಲಿ ಒಬ್ಬರೇ ವ್ಯಕ್ತಿಯ ಮೂರು ನಿವೇಶನಗಳನ್ನು ಮಂಜೂರು ಮಾಡಿದ್ದು, ಗ್ರಾಪಂನಿಂದ ಮಂಜೂರಾತಿ ಪಡೆದ ವ್ಯಕ್ತಿಯ ಮೃತ ಕೃಷ್ಣನ ಸಂಬಂಧಿಯಾಗಿದ್ದರು ಎನ್ನಲಾಗಿದೆ. ವ್ಯಕ್ತಿಯ ಪಂಚಾಯ್ತಿಯಿಂದ ಪರವಾನಿಗೆ ಪಡೆದು ನಿವೇಶನಕ್ಕೆ ಕಾಂಪೌಂಡ್‌ ನಿರ್ಮಿಸಿಕೊಂಡಿದ್ದರು. ಒಬ್ಬನೇ ವ್ಯಕ್ತಿಯ ಕಂದಾಯ ಇಲಾಖೆಗೆ ಸೇರಿದ ಮೂರು ನಿವೇಶನಗಳಿಗೆ ಕಾಂಪೌಂಡ್‌ ಹಾಕಿರುವ ವಿಚಾರವಾಗಿ ಕೆಲವು ಮಂದಿ ಗ್ರಾಮಸ್ಥರು ತಹಶೀಲ್ದಾರ್‌ ಹಾಗೂ ಉಪವಿಭಾಗಾಧಿ ಕಾರಿಗೆ ದೂರು ನೀಡಿದ್ದರು ಎನ್ನಲಾಗಿದೆ.

ನಂತರ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಿದ ಹಿನ್ನೆಲೆ ಕಳೆದ ವಾರ ಸ್ಥಳ ಪರಿಶೀಲನೆ ಲೋಕಾಯುಕ್ತರು ನಡೆಸಿದ್ದರು. ಕಾಂಪೌಂಡ್‌ ತೆರವುಗೊಳಿಸಿದ ಹಿನ್ನೆಲೆ ಗಲಾಟೆ: ಅಕ್ರಮವಾಗಿ ನಿರ್ಮಿಸಿರುವ ಕಾಂಪೌಂಡ್‌ ತೆರವುಗೊಳಿಸಿ, ಸುತ್ತಲಿನ ಮನೆಗಳಲ್ಲಿ ವಾಸವಾಗಿರುವ ಸಾರ್ವಜನಿಕರಿಗೆ ಶೌಚಾಲಯ ನಿರ್ಮಿಸುವಂತೆ ಲೋಕಾಯುಕ್ತರು ಆದೇಶ ನೀಡಿ ತಹಶೀಲ್ದಾರ್‌ ಅವರಿಗೆ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಆದರೂ ಗ್ರಾಪಂ ಆಡಳಿತ ಕಾಂಪೌಂಡ್‌ ತೆರವುಗೊಳಿಸದೆ ಮೀನಮೇಷ ಎಣಿಸುತ್ತಿದ್ದು, ಮಂಗಳವಾರ ಕಂದಾಯ ಇಲಾಖೆ ಸಿಬ್ಬಂದಿ ಅಕ್ರಮ ಕಾಂಪೌಂಡ್‌ ತೆರವುಗೊಳಿಸಿದ ಹಿನ್ನೆಲೆ ಗ್ರಾಮದಲ್ಲಿ ಗಲಾಟೆಯಾಗಿತ್ತು. ಈ ಕಾರಣದಿಂದ ಬೇಸತ್ತ ಕೃಷ್ಣ ಆತ್ಯಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿದ್ದು, ನಿವೇಶನ ಮಂಜೂರಾತಿಯಲ್ಲಿ ಯಾರ್ಯಾರ ಪಾತ್ರವಿದೆ ಎನ್ನುವುದು ಪ್ರಶ್ನೆಯಾಗಿ ಕಾಡುತ್ತಿದೆ.

Advertisement

ಸೈಟಿನ ವಿಚಾರದಲ್ಲಿ ಗಲಾಟೆ: ಮೃತ ಕೃಷ್ಣನ ತಂದೆ ನಾಗರಾಜು ಗ್ರಾಪಂ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಕೃಷ್ಣನಿಗೆ ಗ್ರಾಪಂನಲ್ಲಿ ರಾತ್ರಿ ವೇಳೆ ಏನು ಕೆಲಸ ಎನ್ನುವುದು ಸಾರ್ವಜನಿಕ ವಲಯದಲ್ಲಿ ಗಂಭೀರವಾಗಿ ಕಾಡುತ್ತಿರುವ ಪ್ರಶ್ನೆಯಾಗಿದೆ. ಚೊಕ್ಕಡಹಳ್ಳಿ ಗ್ರಾಮದಲ್ಲಿ ಸೈಟಿನ ವಿಚಾರದಲ್ಲಿ ರಾತ್ರಿ ಗಲಾಟೆ ನಡೆದಿದ್ದು, ಗಲಾಟೆ ಹಿನ್ನೆಲೆಯಲ್ಲಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಆರೋಪ ಕೇಳಿ ಬರುತ್ತಿದೆ.

ಪ್ರಕರಣ ದಾಖಲು : ಸ್ಥಳದಲ್ಲಿ ಸಂಬಂಧಿಕರಿಂದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮೇಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ತಾಪಂ ಇಒ ಕೃಷ್ಣಪ್ಪ, ಪಿಡಿಒ ದೀಪಾ ಭೇಟಿ ನೀಡಿದ್ದು, ಮಾಲೂರು ಪೊಲೀಸ್‌ ಇನ್ಸ್‌ಪೆಕ್ಟರ್‌ ವಸಂತ್‌, ಅಪರಾಧ ಸಬ್‌ ಇನ್ಸ್‌ಪೆಕ್ಟರ್‌ ವರಲಕ್ಷ್ಮೀ, ಎಎಸ್‌ಐ ಮುನೇಗೌಡ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next