ಕೊರಟಗೆರೆ: ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಶೌಚಾಲಯದಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿರುವ ಘಟನೆ ಕೊರಟಗೆರೆ ತಾಲೂಕಿನ ತೋವಿನಕೆರೆ ಗ್ರಾಪಂನಲ್ಲಿ ಜರುಗಿದೆ.
ಗೋಪಾಲಚಾರ್(58) ಮೃತ ದುರ್ದೈವಿ.
ಈತ ಮಧ್ಯಾಹ್ನ ಶೌಚಾಲಯಕ್ಕೆ ಹೋಗಿದ್ದು ಆಕಸ್ಮಿಕವಾಗಿ ಶೌಚಾಲಯದಲ್ಲಿ ಜಾರಿಬಿದ್ದು ಯಾರ ಗಮನಕ್ಕೂ ಬಾರದೆ ಕೆಲವೊತ್ತು ಶೌಚಾಲಯದಲ್ಲಿ ಒದ್ದಾಡಿದ್ದಾರೆ ಎನ್ನಲಾಗಿದ್ದು, ಈತನ ಹೆಂಡತಿ, ಮದ್ಯಾಹ್ನ ಗಂಡ ಊಟಕ್ಕೆ ಬಾರದ ಕಾರಣ ಎರಡು ಬಾರಿ ಹುಡುಕಿಕೊಂಡು ಬಂದಿದ್ದು, ಗ್ರಾಮ ಪಂಚಾಯತಿಯ ನೌಕರರಾದ ಗ್ರಾಮ ಪಂಚಾಯತಿ ಕಡೆ ಹೋದವನು ಯಾವ ಕಡೆ ಹೋದ ಎಂದು ಅನುಮಾನಗೊಂಡು ಪರೀಕ್ಷಿಸಲಾಗಿ ಶೌಚಾಲಯದಲ್ಲಿ ಒದ್ದಾಡುತ್ತಿದ್ದ ಗೋಪಾಲಚಾರ್ ರನ್ನು ಕದ ಹೊಡೆದು ಹೊರತಂದು,ಬಳಿಕ ತೋವಿನಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಕೊಟ್ಟಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ ಸಿದ್ದರಾಮೇಶ್ವರ ಪಿಎಸ್ಐ ಮಂಜುಳಾ ಹಾಗೂ ಎಎಸ್ಐ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.