Advertisement

ಕೋಲಾರ: ಪತಿಗೆ ಮೊಬೈಲ್ ನೀಡಲು ಹೋಗಿ ಪ್ರಾಣ ಕಳೆದುಕೊಂಡ ಪತ್ನಿ; ಆಗಿದ್ದೇನು ?

07:51 PM May 29, 2022 | Team Udayavani |

ಕೋಲಾರ : ಮಹಿಳೆಯೊಬ್ಬರು ಅಚಾನಕ್ಕಾಗಿ ಕೃಷಿ ಯಂತ್ರಧಾರೆ ಟ್ರಾಕ್ಟರ್ ರೋಟರಿಗೆ  ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ವೇಮಗಲ್ ಹೋಬಳಿಯಲ್ಲಿ ಭಾನುವಾರ (ಮೇ.29 ರಂದು) ನಡೆದಿದೆ

Advertisement

ಗ್ರಾಮದ ರಾಜೇಶ್ ರವರ ಪತ್ನಿ ಸೌಮ್ಯ ( 35 ) ಎಂಬಾಕೆ ಮೃತ ದುರ್ದೈವಿ.

ಪತಿ ರಾಜೇಶ್ ಎಂಬಾತ ಜಮೀನಿನಲ್ಲಿ ಉಳುಮೆ ಮಾಡಲು ಕೃಷಿ ಯಂತ್ರದಾರೆ ಟ್ರಾಕ್ಟರ್ ರೋಟರಿ ತಂದು  ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ ಪತಿಗೆ ಮೊಬೈಲ್ ನೀಡಲು ಬಂದ ಪತ್ನಿ ಸೌಮ್ಯ ಟ್ರಾಕ್ಟರ್ ರೋಟರಿಗೆ ಸೀರೆ ಸೆರಗು ಸಿಲುಕಿಕೊಂಡು ಸ್ಥಳದಲ್ಲಿಯೇ ದೇಹ ತುಂಡಾಗಿತ್ತು.

ಮೃತ ಸೌಮ್ಯ ಒಂದು ಹೆಣ್ಣು ಒಂದು ಗಂಡು ಮಗುವನ್ನು ಹೊಂದಿದ್ದರು. ಸಂಬಂಧಿಕರ ಆಕ್ರಂದನ ಮುಗುಲು ಮುಟ್ಟಿದೆ.

ಘಟನೆ ನಡೆದರು ಸ್ಥಳಕ್ಕೆ ಬರದ ಕೃಷಿ ಯಂತ್ರದಾರೆ ಅಧಿಕಾರಿಗಳು ಬೇಜವ್ದಾರಿತನವನ್ನು ತೋರಿಸಿದ್ದಾರೆ.

Advertisement

ಈ ಸಂಬಂಧ ವೇಮಗಲ್ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ ಬಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next