Advertisement

ಗಂಗಾವತಿ: ಸಾಣಾಪುರ್ ಲೇಕ್; ಜಂಪಿಂಗ್ ಮಾಡಲು ಹೋಗಿ ಇಬ್ಬರು ಐಟಿ ಉದ್ಯೋಗಿಗಳು ನೀರು ಪಾಲು

01:02 PM Oct 18, 2021 | Team Udayavani |

ಗಂಗಾವತಿ: ಬೇಸಿಗೆಯಲ್ಲಿ ತಾಲ್ಲೂಕಿನ ಸಣಾಪುರ ಎಡದಂಡೆ ಕಾಲುವೆಯ  ಕೆರೆಯಲ್ಲಿ ಜಂಪಿಂಗ್ ಮಾಡಲು ಹೋಗಿ ಇಬ್ಬರೂ ಹೈದರಾಬಾದ್ ಮೂಲದ ಐಟಿ ಬಿಟಿ ಉದ್ಯೋಗಿಗಳು ನಾಪತ್ತೆಯಾಗಿರುವ ಘಟನೆ ಸೋಮವಾರ ಬೆಳಗಿನಜಾವ ಜರುಗಿದೆ .

Advertisement

ಹೈದರಾಬಾದ್ ಮೂಲದ ಕೆ.ಆರ್.ಪುರಂ  ನಿವಾಸಿಗಳಾದ ಮಧುಕಿರಣ್ (25) ಹಾಗೂ ರಾಜೇಶ್ ಕುಮಾರ್ (26) ಸಂಗಾಪುರ ಹತ್ತಿರವಿರುವ ಮೇಘರಾಜ್ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು . ಸೋಮವಾರ ಬೆಳಿಗ್ಗೆ ಸಣಾಪುರ ಕೆರೆಯಲ್ಲಿ ಈಜಾಡಲು ತೆರಳಿದ್ದ ಸಂದರ್ಭದಲ್ಲಿ ಕಲ್ಲಿನ ಮೇಲಿಂದ ಜಂಪಿಂಗ್ ಮಾಡುವ ಸಂದರ್ಭದಲ್ಲಿ ಇಬ್ಬರೂ ನೀರಿನಲ್ಲಿ ನಾಪತ್ತೆಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸ್, ಗೃಹರಕ್ಷಕ ದಳ ಹಾಗೂ  ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮತ್ತೆ ಕರೆದು ತೊಡಗಿದ್ದಾರೆ .  ರಾಜೇಶ್ ಕುಮಾರ್ ಮೃತದೇಹ ಪತ್ತೆಯಾಗಿದ್ದು ಇನ್ನೂ ಮಧುಕಿರಣ್  ಪತ್ತೆಯಾಗಿಲ್ಲ .

ದಸರಾ ಹಬ್ಬದ ನಿಮಿತ್ತ ಸಾಲುಸಾಲು ರಜೆಗಳು ಬಂದಿರುವುದರಿಂದ ಆನೆಗೊಂದಿ ಕಿಷ್ಕಿಂದೆ ಭಾಗದ ಪ್ರಕೃತಿ ಸೌಂದರ್ಯ ಮತ್ತು ಅಂಜನಾದ್ರಿಬೆಟ್ಟ ವೀಕ್ಷಣೆಗೆ ಆಗಮಿಸಿದ್ದರು .

ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Advertisement
Advertisement

Udayavani is now on Telegram. Click here to join our channel and stay updated with the latest news.

Next