Advertisement

ದಾವಣಗೆರೆ: ಮೂರು ವರ್ಷದ ಮಗುವಿನೊಂದಿಗೆ ನೇಣಿಗೆ ಶರಣಾದ ತಾಯಿ

02:31 PM Jul 03, 2021 | Team Udayavani |

ದಾವಣಗೆರೆ: ಮೂರು ವರ್ಷದ ಮಗುವಿನೊಂದಿಗೆ ತಾಯಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದಿದೆ.

Advertisement

ಹರ್ಷಿತಾ(3), ಚಂದ್ರಮ್ಮ (25), ನೇಣು ಬಿಗಿದು ಸಾವನ್ನಪ್ಪಿದ ದುರ್ದೈವಿಗಳು. ತಾಯಿ ಚಂದ್ರಮ್ಮ ತನ್ನ ಮೂರು ವರ್ಷದ ಹೆಣ್ಣು ಮಗುವಿಗೆ ನೇಣು ಬಿಗಿದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: ಸ್ಯಾಂಡಲ್ ವುಡ್ ನಟ ಸೂರ್ಯೋದಯ ಪುತ್ರ ರಸ್ತೆ ಅಪಘಾತದಲ್ಲಿ ಸಾವು

ಮೃತರಾದ ಚಂದ್ರಮ್ಮನ ಗಂಡ ಮಂಜಪ್ಪ  ಡಿ ಆರ್ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಸೇವೆಯಲ್ಲಿದ್ದಾರೆ. ಗಂಡ ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next