Advertisement

‘I hate you principal’: ಡೆತ್ ನೋಟು ಬರೆದಿಟ್ಟು ರೈಲಿಗೆ ತಲೆಕೊಟ್ಟ ವಿದ್ಯಾರ್ಥಿನಿ

12:20 PM Feb 19, 2022 | Team Udayavani |

ಬೆಂಗಳೂರು: ನಗರದ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯ ಶಾಲೆಯ ಪ್ರಾಂಶುಪಾಲರು ಸೇರಿ ಕೆಲವರ ವಿರುದ್ಧ ಡೆತ್‌ನೋಟ್‌ ಬರೆದಿಟ್ಟು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತಪುರ ರೈಲ್ವೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಟಿ.ದಾಸರಹಳ್ಳಿ ನಿವಾಸಿ ಕೆ.ಎಸ್‌.ರಮ್ಯಾ ಮೂರ್ತಿ (15) ಮೃತ ವಿದ್ಯಾರ್ಥಿನಿ.

ಯಶವಂತಪುರ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಮ್ಯಾ ತಂದೆ ಆಂಗ್ಲಮುದ್ರಣ ಮಾಧ್ಯಮದಲ್ಲಿ ಪೇಜ್‌ ಡಿಸೈನರ್‌ ಆಗಿದ್ದು, ತಾಯಿ ಶಿಕ್ಷಕಿಯಾಗಿದ್ದಾರೆ.

ಟಿ.ದಾಸರಹಳ್ಳಿಯಲ್ಲಿರುವ ಖಾಸಗಿ ಶಾಲೆಯಲ್ಲಿ ರಮ್ಯಾ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಐದಾರು ತಿಂಗಳ ಹಿಂದೆ ರಮ್ಯಾ ಶಾಲೆಗೆ ಸ್ನ್ಯಾಕ್ಸ್‌ ತೆಗೆದುಕೊಂಡು ಹೋಗಿದ್ದು, ಅದಕ್ಕೆ ಶಾಲಾ ಆಡಳಿತ ಮಂಡಳಿ ಆಕ್ಷೇಪಿಸಿ, ಆಕೆಯ ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಿದ್ದರು. ಅದರಿಂದ ಬೇಸರಗೊಂಡ ಆಕೆಯ ತಾಯಿ ಮಾನವ ಹಕ್ಕುಗಳಿಗೆ ಶಾಲೆ ಆಡಳಿತ ಮಂಡಳಿ ವಿರುದ್ಧ ದೂರು ನೀಡಿದ್ದರು. ಅದೇ ವಿಚಾರಕ್ಕೆ ಇದೀಗ ಶಾಲೆಯ ಪ್ರಾಂಶುಪಾಲರು ಸೇರಿ ಕೆಲವರು ಆಕೆಗೆ ಕಿರುಕುಳ ನೀಡುತ್ತಿದ್ದರು. ಅದರಿಂದ ಬೇಸರಗೊಂಡ ಆಕೆ ಗುರುವಾರ ಬೆಳಗ್ಗೆ ವಾಯುವಿಹಾರಕ್ಕೆ ಹೋಗುವಾಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಡೆತ್‌ನೋಟ್‌ನಲ್ಲಿ ಆರೋಪ: ವಿದ್ಯಾರ್ಥಿನಿ ಆತ್ಮ ಹತ್ಯೆಗೂ ಮೊದಲು ಡೆತ್‌ನೋಟ್‌ ಬರೆದಿದ್ದು, ಅದರಲ್ಲಿ ‘I hate you principal’ ಹಾಗೂ ಕೆಲ ವಿದ್ಯಾರ್ಥಿಗಳ ಹೆಸರು ಉಲ್ಲೇಖೀಸಿ, “ಎಲ್ಲರನ್ನು ವಿರೋಧಿಸುತ್ತೇನೆ’ ಎಂದು ಬರೆದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ರೈಲ್ವೆ ಪೊಲೀಸರು ಹೇಳಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next