Advertisement

ಕ್ರಿಕೆಟ್‌ ಆಡುತ್ತಿದ್ದಾಗಲೇ ಕುಸಿದು ಬಿದ್ದ ಯುವಕ ಸಾವು

12:05 AM Aug 06, 2021 | Team Udayavani |

ಬೆಳ್ಮಣ್‌: ಕ್ರಿಕೆಟ್‌ ಆಟವಾಡುತ್ತಿರುವ ಸಂದರ್ಭ ಕುಸಿದು ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಬುಧವಾರ ಸಂಭವಿಸಿದೆ.

Advertisement

ನಿಟ್ಟೆ ಕುಡಾರಿಕ್ಕು ಬಳಿ ನಿವಾಸಿ ಸುಕೇಶ್‌ ಶೆಟ್ಟಿ (27) ಸಾವನ್ನಪ್ಪಿದ ಯುವಕ. ಕುಕ್ಕುದಕಟ್ಟೆ ಮೈದಾನದಲ್ಲಿ ಸಂಜೆ ವೇಳೆ ಕ್ರಿಕೆಟ್‌ ಆಟವಾಡುತ್ತಿದ್ದ ಸಂದರ್ಭ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಖಾಸಗಿ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ.

ಉತ್ತಮ ಆಟಗಾರ:

ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿ ಯಾಗಿ ಕೆಲಸ ನಿರ್ವಹಿಸುತ್ತಿದ್ದ ಸುಕೇಶ್‌ ಅವರು ಉತ್ತಮ ಕ್ರಿಕೆಟ್‌ ಆಟಗಾರನಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next