ಬಳ್ಳಾರಿ: ನಗರದ ಏಳುಮಕ್ಕಳ ತಾಯಮ್ಮ ದೇವಸ್ಥಾನ ಬಳಿಯ ಮೇಲ್ಸೇತುವೆ ಮೇಲೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಬ್ಬ ಮಗು ಸೇರಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬ ಮಗು ಗಾಯಗೊಂಡಿರುವ ಘಟನೆ ಬುಧವಾರ ಸಂಭವಿಸಿದೆ.
ವಿರೇಶ್ (40), ಅಂಜಲಿ (35), ಮಗ ದಿನೇಶ್ (6), ಮೃತ ದುರ್ಧೈವಿಗಳಾಗಿದ್ದು, ಮಗಳು ಹನಿ ಗಾಯಗೊಂಡಿದ್ದಾಳೆ.
ತಾಲೂಕಿನ ಎರ್ರಗುಡಿ ಗ್ರಾಮದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಾರ್ಡನ್ ವೀರೇಶ್, ಅಲ್ಲಿಂದ ತನ್ನ ಪತ್ನಿ ಅಂಜಲಿಯವರ ಬಿ.ಇಡಿ ಪರೀಕ್ಷೆ ಬರೆಸಲೆಂದು ಮತ್ತು ಕೌಲ್ ಬಜಾರ್ ನಲ್ಲಿನ ತವರು ಮನೆಗೆ ತೆರಳಲೆಂದು ತನ್ನ ಇಬ್ಬರು ಮಕ್ಕಳೊಂದಿಗೆ ಬೈಕ್ ನಲ್ಲಿ ಬಳ್ಳಾರಿ ನಗರಕ್ಕೆ ಬರುತ್ತಿದ್ದಾಗ ಏಳು ಮಕ್ಕಳ ತಾಯಮ್ಮ ದೇವಸ್ಥಾನ ಬಳಿಯ ಮೇಲ್ಸೇತುವೆ ಮೇಲೆ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಹೈವಾ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಮಗಳು ಹನಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಇದನ್ನೂ ಓದಿ: ದೋಷವಿದೆ ಎಂದು ಹೇಳಿ ಸ್ವಾಮೀಜಿಯಿಂದ 5 ವರ್ಷ ಅತ್ಯಾಚಾರ: ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್
ಟಿಪ್ಪರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕನ ಅತಿವೇಗ, ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.