ಬಳ್ಳಾರಿ: ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ನನ್ನು ಭೀಕರವಾಗಿ ಕೊಚ್ಚಿ ಕೊಂದಿರುವ ಘಟನೆ ನಗರದ ರಾಯಲ್ ವೃತ್ತದ ಬಳಿ ನಡೆದಿದೆ.
ಬಸವರಾಜ ಗಾರ್ಡ್ ಕೊಲೆಯಾದ ಸೆಕ್ಯೂರಿಟಿ ಗಾರ್ಡ್. ಹುಬ್ಬಳ್ಳಿ ಮೂಲದ ಬಸವರಾಜ ಕಳೆದ ಹತ್ತು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದರು.
ಎಟಿಎಂ ಮತ್ತು ಐಸಿಐಸಿಐ ಬ್ಯಾಂಕ್ ಅಕ್ಕಪಕ್ಕದಲ್ಲಿಯೇ ಇರುವುದರಿಂದ ಬಸವರಾಜ ಎಂದಿನಂತೆ ಎಟಿಎಂ ಪಕ್ಕದ ಬ್ಯಾಂಕ್ ಸ್ಥಳದಲ್ಲಿ ಮಲಗಿಕೊಂಡಿದ್ದರು. ಈ ವೇಳೆ ಬಂದ ದುಷ್ಕರ್ಮಿಗಳ ತಂಡ ಬಸವರಾಜ ಅವರ ಮೇಲೆ ರಾಡ್ ನಿಂದ ಹಲ್ಲೆ ಮಾಡಿ, ಬಳಿಕ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.
ಇದನ್ನೂ ಓದಿ: 26/11 ಮುಂಬಯಿ ದಾಳಿ ನಂತರ ಕಾಂಗ್ರೆಸ್ ಸಂಯಮ ತೋರಿಸಿದ್ದೇಕೆ? ಹೊಸ ಪುಸ್ತಕದಲ್ಲಿ ತಿವಾರಿ
ಬ್ಯಾಂಕ್ ಅಥವಾ ಎಟಿಎಂ ದರೋಡೆಗೆ ಬಂದಿದ್ರೋ ಅಥವಾ ಖಾಸಗಿ ವಿಚಾರದ ಕೊಲೆಯೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.