Advertisement

ಶಾಲಾ ಬಸ್ಸಿನಡಿ ಬಿದ್ದು ಎಲ್‌ಕೆಜಿ ಬಾಲಕನ ದಾರುಣ ಸಾವು

10:28 AM Sep 23, 2017 | Team Udayavani |

ರೇವಾರಿ : ಹರಿಯಾಣದ ರೇವಾರಿ ಜಿಲ್ಲೆಯಲ್ಲಿ  ಐದು ವರ್ಷ ಪ್ರಾಯದ ಶಾಲಾ ಬಾಲಕನೋರ್ವ ತನ್ನದೇ ಶಾಲೆಯ ಬಸ್ಸಿನಡಿ ಬಿದ್ದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. 

Advertisement

ಮೃತ ಬಾಲಕನು ಎಲ್‌ ಕೆಜಿ ಓದುತ್ತಿದ್ದು ಆತನ ಹೆಸರು ಹಿಮಾಂಗ್‌ ಎಂದು ತಿಳಿದು ಬಂದಿದೆ. ಬಸ್ಸನ್ನು ಚಾಲಕನು ರಿವರ್ಸ್‌ ತರುವಾಗ ಬಾಲಕನು ಅದರಡಿ ಬಿದ್ದು ಈ ದುರ್ಘ‌ಟನೆ ಸಂಭವಿಸಿದೆ.

ದುರ್ಘ‌ಟನೆ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ತನಿಖಾಧಿಕಾರಿ ಪ್ರೀತ್‌ ಸಿಂಗ್‌, “ಪ್ರಕರಣಕ್ಕೆ ಸಂಬಂಧಿಸಿ ನಾವು ಕೇಸು ದಾಖಲಿಸಕೊಂಡಿದ್ದೇವೆ; ಮರಣೋತ್ತರ ಪರೀಕ್ಷೆ ನಡೆಯುತ್ತಿದೆ; ತನಿಖೆ ಸಾಗುತ್ತಿದೆ’ ಎಂದು ಹೇಳಿದರು.

ಘಟನೆ ಕುರಿತಾದ ಹೆಚ್ಚಿನ ವಿವರಗಳನ್ನು ಎದುರು ನೋಡಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next