Advertisement

ಮಗಳ ಬಳಿಕ ತಂದೆಯನ್ನು ಕಳೆದುಕೊಂಡ ಸೋಲಂಕಿ

11:14 PM Feb 28, 2022 | Team Udayavani |

ಅಹ್ಮದಾಬಾದ್‌: ಇತ್ತೀಚೆಗಷ್ಟೇ ತನ್ನ ಪುಟ್ಟ ಮಗಳನ್ನು ಕಳೆದುಕೊಂಡ ನೋವಿನಲ್ಲೂ ಶತಕ ಬಾರಿಸಿ ಸುದ್ದಿಯಾಗಿದ್ದ ಬರೋಡಾ ತಂಡದ ಕ್ರಿಕೆಟಿಗ ವಿಷ್ಣು ಸೋಲಂಕಿಗೆ ಮತ್ತೊಂದು ಆಘಾತ ಎದುರಾಗಿದೆ. ಅವರ ತಂದೆ ಕೂಡ ಕೊನೆಯುಸಿರೆಳೆದಿದ್ದಾರೆ.

Advertisement

ಸೋಲಂಕಿ ಅವರ ತಂದೆ ದೀರ್ಘ‌ಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಬರೋಡಾ ಕ್ರಿಕೆಟ್‌ ತಂಡದ ಮ್ಯಾನೇಜರ್‌ ಧರ್ಮೇಂದ್ರ ಅರೋಥೆ ಮಾಹಿತಿ ನೀಡಿದ್ದಾರೆ. ತಂದೆಯ ಅಗಲಿಕೆಯ ಸುದ್ದಿ ಬಂದ ಬಳಿಕವೂ ಸೋಲಂಕಿ ರಣಜಿ ಪಂದ್ಯದಲ್ಲಿ ಮುಂದುವರಿಯುವ ನಿರ್ಧಾರ ತೆಗೆದುಕೊಂಡಿದ್ದರು.

ರವಿವಾರ ಚಂಡೀಗಢ ವಿರುದ್ಧದ ಪಂದ್ಯದ ಬಳಿಕ ತಮಗೆ ಈ ಸುದ್ದಿ ತಿಳಿಯಿತು ಎಂದು ಬರೋಡಾ ತಂಡದ ನಾಯಕ ಕೇದಾರ್‌ ದೇವಧರ್‌ ತಿಳಿಸಿದ್ದಾರೆ.

ಇದನ್ನೂ ಓದಿ:ವಿಂಡೀಸ್‌ನ ಲೆಜೆಂಡ್ರಿ ಸ್ಪಿನ್ನರ್‌ ಸೋನಿ ರಾಮಧಿನ್‌ ನಿಧನ

“ಡ್ರೆಸ್ಸಿಂಗ್‌ ರೂಮ್‌ನ ಮೂಲೆಯಲ್ಲಿ ಕುಳಿತು ವಿಷ್ಣು ತಂದೆಯ ಅಂತಿಮ ವಿಧಿವಿಧಾನವನ್ನು ವೀಡಿಯೋ ಕಾಲ್‌ ಮೂಲಕ ನೋಡುತ್ತಿದ್ದರು. ಅದು ನಿಜಕ್ಕೂ ಆತನ ಪಾಳಿಗೆ ಅತ್ಯಂತ ಕಠಿನ ಕ್ಷಣ. ಆದರೆ ಇಂಥ ಸಂದರ್ಭದಲ್ಲಿಯೂ ಆತ ತೋರಿದ ಧೈರ್ಯಕ್ಕೆ ನಮ್ಮಲ್ಲಿ ಪದಗಳಿಲ್ಲ. ದುಃಖದ ಹೊರೆಯನ್ನು ಹೊತ್ತು ಕ್ರಿಕೆಟ್‌ ಆಡಿ ಮಿಂಚಿದ್ದಕ್ಕೆ ಅವರಿಗೆ ಹ್ಯಾಟ್ಸ್‌ ಆಫ್’ ಎಂದು ದೇವಧರ್‌ ಹೇಳಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next