Advertisement
ಈಗಾಗಲೇ ಕಲ್ಸಂಕ, ಅಂಬಾಗಿಲು, ಕೋರ್ಟ್ ಸಮೀಪ ಸಿಗ್ನಲ್ ಅಳವಡಿಕೆಗೆ ಫೌಂಡೇಶನ್ ಕೆಲಸ ನಡೆಯುತ್ತಿದೆ. ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ದಟ್ಟಣೆಗೆ ಕಡಿವಾಣ ಹಾಕಲು ಸಿಗ್ನಲ್ ಲೈಟ್ ಅಳವಡಿಸುವ ಬೇಡಿಕೆ ಹಲವಾರು ವರ್ಷಗಳಿಂದ ಇದ್ದು, ಇದೀಗ ಹಂತಹಂತವಾಗಿ ಅಭಿವೃದ್ಧಿ ಗೊಳಿಸಲಾ ಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ಕಲ್ಸಂಕ, ಬಲಾಯಿ ಪಾದೆ, ಶಿರಿಬೀಡು, ತ್ರಿವೇಣಿ ಸರ್ಕಲ್, ಹಳೆ ಡಯಾನ ವೃತ್ತ, ಮಣಿಪಾಲ ಟೈಗರ್ ಸರ್ಕಲ್, ಎಂಐಟಿ ಸರ್ಕಲ್ ಹೆದ್ದಾರಿ ವ್ಯಾಪ್ತಿಯಲ್ಲಿ ಅಂಬಾಗಿಲು, ಅಂಬಲಪಾಡಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಸಿಗ್ನಲ್
ಬೆಂಗಳೂರು, ಮಂಗಳೂರಿನಂತೆ ಉಡುಪಿ ನಗರವು ಟ್ರಾಫಿಕ್ ಸಮಸ್ಯೆ ಸ್ವರೂಪ ಪಡೆಯುತ್ತಿದೆ. ಕಲ್ಸಂಕ ವೃತ್ತ, ಕೆಎಂ ಮಾರ್ಗ, ಸಿಟಿ ಬಸ್ ನಿಲ್ದಾಣ, ಬನ್ನಂಜೆ, ಕೆಎಂ ಮಾರ್ಗ, ಕರಾವಳಿ ಜಂಕ್ಷನ್, ಡಯಾನ ಸರ್ಕಲ್, ಅಂಬಲಪಾಡಿ ಜಂಕ್ಷನ್‌ನಲ್ಲಿ ವಾರಾಂತ್ಯ ದಿನಗಳಲ್ಲಿ ಟ್ರಾಫಿಕ್ ಜಂಜಾಟ ವಿಪರೀತವಾಗಿದೆ. ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ. ಬೆಳಗ್ಗೆ ಮತ್ತು ಸಾಯಂಕಾಲ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿರುವಷ್ಟೆ ಒತ್ತಡ ನಗರದ ಒಳಭಾಗದ ರಸ್ತೆಗಳಲ್ಲಿಯೂ ಇರುತ್ತದೆ. ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ನಗರದಲ್ಲಿ ಮೊದಲ ಹಂತದಲ್ಲಿ ಹತ್ತು ಕಡೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಯೋಜನೆ ರೂಪಿಸಲಾಗಿದೆ. ಪ್ರಾಯೋ ಗಿಕವಾಗಿ ಮಾತ್ರ ಮಣಿಪಾಲದಲ್ಲಿ ಸಿಗ್ನಲನ್ನು ಅಳವಡಿ ಸಿದ್ದು, ಅಂಬಾಗಿಲು, ಕಲ್ಸಂಕ, ಬಲಾಯಿಪಾದೆಯಲ್ಲಿ ಈಗಾಗಲೇ ಇದರ ಫೌಂಡೇಶನ್ ಕೆಲಸಗಳು ನಡೆಯುತ್ತಿದೆ.
– ಸುಮಿತ್ರಾ ನಾಯಕ್, ಅಧ್ಯಕ್ಷರು, ಉಡುಪಿ ನಗರಸಭೆ.