Advertisement

10 ನಿಮಿಷಕ್ಕಿಂತ ಹೆಚ್ಚು ಟ್ರಾಫಿಕ್‌ ನಿಲುಗಡೆ ಸಲ್ಲ: ಹೈಕೋರ್ಟ್‌

12:02 PM Mar 08, 2018 | udayavani editorial |

ಚೆನ್ನೈ : ರಾಜ್ಯಪಾಲರು, ಮುಖ್ಯಮಂತ್ರಿ , ಮುಖ್ಯ ನ್ಯಾಯಾಧೀಶರು ಸೇರಿದಂತೆ ಅತ್ಯುನ್ನತ ಗಣ್ಯರ ವಾಹನ ಸಾಗಲು ಐದರಿಂದ ಹತ್ತು ನಿಮಿಷಕ್ಕಿಂತ ಹೆಚ್ಚು ಹೊತು ಟ್ರಾಫಿಕ್‌ ನಿಲುಗಡೆ ಮಾಡಕೂಡದು ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ. 

Advertisement

ಚೀಫ್ ಜಸ್ಟಿಸ್‌ ಇಂದಿರಾ ಬ್ಯಾನರ್ಜಿ ಮತ್ತು ಜಸ್ಟಿಸ್‌ ಅಬ್ದುಲ್‌ ಖಧ್ದೋಸ್‌ ಅವರನ್ನು ಒಳಗೊಂಡ ಪ್ರಥಮ ಪೀಠ, “ಅಪರೂಪಕ್ಕೆ ಭೇಟಿ ಕೊಡುವ ರಾಷ್ಟ್ರಪತಿ ಮತ್ತು ಪ್ರಧಾನಿ ಅವರಂತಹ ಅತ್ಯುಚ್ಚ ಗಣ್ಯರ ಸಂದರ್ಭದಲ್ಲಿ ಮಾತ್ರವೇ ರಿಯಾಯಿತಿ ನೀಡಬಹುದಾಗಿದೆ; ಏಕೆಂದರೆ ಇವರ ಭೇಟಿಯ ವೇಳಾ ಪಟ್ಟಿಗಳನ್ನು ಸಾಕಷ್ಟು ಮುಂಚಿತವಾಗಿ ಪ್ರಚುರಪಡಿಸಲಾಗಿರುತ್ತದೆ’ ಎಂದು ಹೇಳಿತು. 

ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರ ಮತ್ತು ಅತ್ಯುಚ್ಚ ಗಣ್ಯರ ವಾಹನಗಳು ಸಾಗುವ ಸಂದರ್ಭದಲ್ಲಿ ಟ್ರಾಫಿಕ್‌ ನಿಲುಗಡೆಯನ್ನು ಐದರಿಂದ ಹತ್ತು ನಿಮಿಷಕ್ಕಿಂತ ಹೆಚ್ಚು ಹೊತ್ತು ಮಾಡಕೂಡದು ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next