Advertisement

ಟ್ರಾಫಿಕ್‌ ಉಲ್ಲಂಘನೆಯಾದರೆ ತಕ್ಷಣ ಎಸ್‌ಎಂಎಸ್‌..!

11:15 AM Dec 05, 2021 | Team Udayavani |

ಬೆಂಗಳೂರು: ವಾಹನ ಸವಾರರೇ ಎಚ್ಚರ! ಇನ್ಮುಂದೆ ಸಂಚಾರ ನಿಯಮ ಉಲ್ಲಂ ಸಿದಲ್ಲಿ ನಿಮ್ಮ ಮೊಬೈಲ್‌ ನಂಬರ್‌ಗೆ ಶೀಘ್ರ ಸಂದೇಶ ಬರಲಿದೆ. ಹೌದು, ಈ ವಿನೂತನ ಪ್ರಯೋಗವನ್ನು ಬೆಂಗಳೂರು ಸಂಚಾರ ಪೊಲೀಸರು ಜಾರಿಗೆ ತಂದಿದ್ದಾರೆ.

Advertisement

ಸಂಚಾರ ನಿಯಮ ಉಲ್ಲಂಘನೆ ಕುರಿತು ವಾಹನ ಮಾಲೀಕರಿಗೆ ಎಸ್‌ಎಂಎಸ್‌ ಮೂಲಕ ಮಾಹಿತಿ ಕಳುಹಿಸುವ ಪ್ರಕ್ರಿಯೆ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ನೂತನ ವ್ಯವಸ್ಥೆ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಸದ್ಯದಲ್ಲೇ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರ ವಿಭಾಗ ಜಂಟಿ ಆಯುಕ್ತ ಡಾ ಬಿ.ಆರ್‌.ರವಿಕಾಂತೇಗೌಡ ತಿಳಿಸಿದ್ದಾರೆ.

ಪ್ರಸ್ತುತ ಸಂಚಾರ ವಿಭಾಗದ ಪೊಲೀಸ್‌ ಕಾನ್‌ಸ್ಟೇಬಲ್‌ ಮತ್ತು ಹೆಡ್‌ಕಾನ್‌ಸ್ಟೇಬಲ್‌ಗಳು ನಿಯಮ ಉಲ್ಲಂಘನೆ ಪುಸ್ತಕ ಬಳಸುತ್ತಿದ್ದರು. ಸಾಕ್ಷ್ಯಾಧಾರಿತವಾಗಿ ಪ್ರಕರಣವನ್ನು ದಾಖಲಿ ಸಲು ಡಿಜಿಟಲ್‌ ಎಫ್ಟಿವಿಆರ್‌ ಉಪಕರಣ ಸಿಬ್ಬಂದಿ ನೀಡಲಾಗಿತ್ತು.

ಇದನ್ನೂ ಓದಿ:- ಯೋಗ ಚೈತನ್ಯ ನೀಡುವ ಸಾಧನ: ಖೂಬಾ

ತಮ್ಮ ಜಂಕ್ಷ ನ್‌ಗಳಲ್ಲಿ ನಿಯಮ ಉಲ್ಲಂಘನೆ ಮಾಡುವ ವಾಹನಗಳು ಕಂಡುಬಂದರೆ ಅವುಗಳ ನೋಂದಣಿ ಸಂಖ್ಯೆ, ಸಮಯ, ಸ್ಥಳ ಇತರೆ ವಿವರಗಳನ್ನು ಫೋಟೋ ತೆಗೆದು ಎಫ್ಟಿವಿಆರ್‌ಗಳಲ್ಲಿ ಭರ್ತಿ ಮಾಡಲಾಗುತ್ತಿತ್ತು. ಪೊಲೀಸರು ಫೋಟೋ ತೆಗೆದು ಐಎಂವಿ ಕಲಂ 133ರಡಿ ಸಂಚಾರಿ ನಿಯಮ ಉಲ್ಲಂಘನಾ ನೋಟಿಸ್‌ಗಳನ್ನು ಮುದ್ರಿಸಿ ಅಂಚೆ ಮೂಲಕ ವಾಹನ ಮಾಲೀಕರಿಗೆ ಕಳುಹಿಸಲಾಗುತ್ತಿತ್ತು.

Advertisement

ಈ ರೀತಿ ನಿತ್ಯ 20 ಸಾವಿರ ಸಂಪರ್ಕ ರಹಿತ ವ್ಯವಸ್ಥೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ನೋಟಿಸ್‌ಗಳನ್ನು ಹೊರಡಿಸಲಾಗುತ್ತಿತ್ತು. ನೋಟಿಸ್‌ಗಳನ್ನು ತಯಾರಿಸಲು, ಮುದ್ರಿಸಲು ಮತ್ತು ಅವುಗಳನ್ನು ರವಾನಿಸಲು ಪೊಲೀಸರು ಅಂಚೆ ಇಲಾಖೆಯ ಸಿಬ್ಬಂದಿ ಶ್ರಮ ವ್ಯಯವಾಗುತಿತ್ತು. ಜತೆಗೆ 4.50 ರೂ. ವೆಚ್ಚ ತಗುಲುತ್ತಿದೆ.

ಜತೆಗೆ ಮಾನವ ಸಂಪನ್ಮೂಲ ಕೂಡ ಬಳಕೆಯಾಗುತ್ತಿದೆ. ಬಹು ತೇಕ ಪ್ರಕರಣಗಳಲ್ಲಿ ಮಾಲೀಕರು ವಿಳಾಸ ಬದ ಲಾಯಿಸಿದರೆ ನೋಟಿಸ್‌ಗಳು ವಾಪಸ್‌ ಬಂದು, ಅದಕ್ಕೆ ತಗುಲಿದ ವೆಚ್ಚ ಮತ್ತು ಶ್ರಮ ವ್ಯಯವಾಗುತಿತ್ತು. ದಂಡ ಪಾವತಿಗೆ ಏಳು ದಿನಗಳ ಕಾಲಾವಕಾಶ ನೀಡಲಾಗುತ್ತಿದ್ದು, ದಂಡ ಪಾವತಿಯ ಲಿಂಕ್‌ಗಳನ್ನು ಎಸ್‌ಎಂಎಸ್‌ ಒಳಗೊಂಡಿರುತ್ತದೆ.

ಸಂದೇಶ ಕಳುಹಿಸಲು 20 ಪೈಸೆ ವೆಚ್ಚ ತಗುಲತ್ತದೆ ಎಂದು ಡಾ ಬಿ.ಆರ್‌.ರವಿಕಾಂತೇಗೌಡ ತಿಳಿಸಿ ದ್ದಾರೆ. ತಕ್ಷಣವೇ ಎಸ್‌ಎಂಎಸ್‌ ತಲುಪುವು ದರಿಂದ ವಾಹನ ಮಾಲೀಕರು ಎಚ್ಚೆತ್ತುಕೊಂಡು ನಿಯಮ ಉಲ್ಲಂಘನೆಯನ್ನು ನಿಯಂತ್ರಿಸಲಿ ¨ªಾರೆ. ಬೇರೆಯವರು ವಾಹನ ಚಲಾಯಿಸುತ್ತಿದ್ದಾಗ ಸಂಚಾರ ನಿಯಮ ಉಲ್ಲಂಘನೆ ಯಾಗಿದ್ದರೆ ಅದರ ಮಾಲೀಕರಿಗೆ ಸಂದೇಶ ಹೋಗಿ ತಪ್ಪುಗಳನ್ನು ಸರಿಪಡಿಸಲು ಈ ವ್ಯವಸ್ಥೆ ಅನುಕೂಲವಾಗಲಿದೆ ಎಂದರು.

ಮೊಬೈಲ್‌ಗೆ ಸಂದೇಶ

ಸಾರಿಗೆ ಇಲಾಖೆ ವಾಹನಗಳ ನೋಂದಣಿ ಜತೆಗೆ ಸಂಬಂಧಿತ ಮಾಲೀಕರ ಮೊಬೈಲ್‌ ಸಂಖ್ಯೆಗಳನ್ನು ಸಂಗ್ರಹಿಸುತ್ತಿದೆ. ಈ ನಂಬರ್‌ ಗಳನ್ನು ಸಾರಿಗೆ ಇಲಾಖೆ ಬೆಂಗಳೂರು ಪೊಲೀಸರ ಜತೆ ಹಂಚಿಕೊಳ್ಳುತ್ತದೆ.

ಈ ಮಾಹಿತಿ ಆಧರಿಸಿ ಇನ್ಮುಂದೆ ಯಾವುದೇ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಗಳು ದಾಖಲಾದರೆ, ಕೆಲ ಹೊತ್ತಿನಲ್ಲಿಯೇ ಅದರ ಮಾಲೀಕರಿಗೆ ನೋಟಿಸ್‌ ಸಂಖ್ಯೆ, ನೋಂದಣಿ ಸಂಖ್ಯೆ, ದಿನಾಂಕ-ಸಮಯ ಮತ್ತು ದಂಡದ ಮೊತ್ತ ಒಳಗೊಂಡ ಎಸ್‌ ಎಂಎಸ್‌ ಅನ್ನು ನೋಂದಾ ಯಿತ ಮೊಬೈಲ್‌ ಸಂಖ್ಯೆಗೆ ರವಾನಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next