Advertisement

ಟ್ರಾಫಿಕ್‌ ನಿಯಮಾವಳಿ ಉಲ್ಲಂಘನೆ: ನಗರದಲ್ಲಿ 63 ಲ.ರೂ. ದಂಡ ಸಂಗ್ರಹ!

11:28 AM Dec 08, 2022 | Team Udayavani |

ಉಡುಪಿ : ನಗರದಲ್ಲಿ ಟ್ರಾಫಿಕ್‌ ನಿಯಮಾವಳಿ ಉಲ್ಲಂಘನೆಗೆ ಸಂಬಂಧಿಸಿದಂತೆ 2022ರ ಜನವರಿಯಿಂದ ನವೆಂಬರ್‌ ಅಂತ್ಯದವರೆಗೆ 63,85,100 ರೂ. ದಂಡ ಸಂಗ್ರಹ ಮಾಡಲಾಗಿದೆ.

Advertisement

ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ, ಹೆಲ್ಮೆಟ್‌ ಇಲ್ಲದೆ ಸಂಚಾರ ಸಹಿತ ವಿವಿಧ ರೀತಿಯಲ್ಲಿ ನಿಯ ಮಾವಳಿ ಉಲ್ಲಂ ಸುತ್ತಿದ್ದವರಿಂದ ದಂಡ ಸಂಗ್ರಹ ಮಾಡಲಾಗಿದೆ.

ಟ್ರಾಫಿಕ್‌ ದಟ್ಟಣೆ ಪ್ರದೇಶಗಳು
ನಗರದ ಸಿಟಿ ಬಸ್‌ ನಿಲ್ದಾಣ, ಕೆಎಂ ಮಾರ್ಗ, ತ್ರಿವೇಣಿ ಸರ್ಕಲ್‌, ನಗರಸಭೆಯ ಎದುರುಗಡೆ, ಶಿರಿಬೀಡು ಪ್ರದೇಶಗಳಲ್ಲಿ ಟ್ರಾಫಿಕ್‌ ದಟ್ಟಣೆ ಹೆಚ್ಚಾಗಿ ಕಂಡುಬರುತ್ತಿದೆ. ಕೆಲವೆಡೆ ಈಗಾಗಲೇ ಮಾರ್ಕಿಂಗ್‌ ಇದೆ. ಮಾರ್ಕಿಂಗ್‌ ಇಲ್ಲದ ಕಡೆಗಳಲ್ಲಿ ಮಾರ್ಕಿಂಗ್‌ ಮಾಡಿ ಅನಂತರ ವಾಹನ ಸವಾರರಿಗೆ ಪೊಲೀಸರು ದಂಡದ ಬಿಸಿ ಮುಟ್ಟಿಸಲಿದ್ದಾರೆ.

ವಾಹನ ಆಲೆóàಷನ್‌ ಮಾಡಿದರೂ ದಂಡ!
ವಾಹನಗಳಲ್ಲಿ ಹೆಚ್ಚುವರಿ ಹಾರ್ನ್ಗಳ ಅಳವಡಿಕೆ, ಟಿಂಟ್‌ ಗ್ಲಾಸ್‌ಗಳ ಅಳವಡಿಕೆ, ಹೆಲೋಜಿನ್‌ ಲೈಟ್‌ಗಳನ್ನು ಅಳವಡಿಸುವುದು, ಚೀನ ಲೈಟ್‌ಗಳನ್ನು ಅಳವಡಿಸುವುದು, ಸ್ಟಿಕ್ಕರ್‌ಗಳ ಅಳವಡಿಕೆ ಕಂಡು ಬಂದರೆ ಅಂತಹ ವಾಹನಗಳಿಗೂ 500 ರೂ.ಗಳ ದಂಡ ವಿಧಿಸಲಾಗುತ್ತದೆ.

ವಾಹನ ಸವಾರರು ಎಲ್ಲ ರೀತಿಯ ಮೂಲ ದಾಖಲೆಗಳನ್ನು ವಾಹನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ದಂಡ ಪಾವತಿಸಬೇಕಾದುದು ಖಚಿತವಾಗಲಿದೆ.

Advertisement

ವಿವಿಧೆಡೆ ತಪಾಸಣೆ
ನಗರದ ಕಲ್ಸಂಕ ವೃತ್ತ, ಎಂಜಿಎಂ ಕಾಲೇಜು, ಇಂದ್ರಾಳಿ ಬಳಿ, ಕರಾವಳಿ ಬೈಪಾಸ್‌, ಶಿರಿಬೀಡು ಜಂಕ್ಷನ್‌, ಸಂತೆಕಟ್ಟೆ, ಡಯನಾ ಸರ್ಕಲ್‌, ಅಂಬಲಪಾಡಿ ಜಂಕ್ಷನ್‌ಗಳಲ್ಲಿ 2ರಿಂದ 3 ಮಂದಿ ಪೊಲೀಸ್‌ ಸಿಬಂದಿ ತಪಾಸಣೆ ನಡೆಸುತ್ತಿದ್ದಾರೆ. ಸೀಟ್‌ಬೆಲ್ಟ್ ಹಾಕದಿರುವುದು ಹಾಗೂ ಹೆಲ್ಮೆಟ್‌ ಧರಿಸದಿರುವ ಬಗ್ಗೆ ಹೆಚ್ಚಿನವರು ದಂಡ ಪಾವತಿಸುತ್ತಿರುವ ಘಟನೆ ನಡೆಯುತ್ತಿದೆ.

ಸ್ವಯಂ ಜಾಗೃತಿ ಅಗತ್ಯ
ನಗರದ ಆಯಾಕಟ್ಟಿನ ಪ್ರದೇಶಗಳಲ್ಲಿ ವಾಹನ ತಪಾಸಣೆ ಮಾಡಲಾಗುತ್ತಿದೆ. ಈ ವರ್ಷ ಈಗಾಗಲೇ 63 ಲ.ರೂ.ಗಳಷ್ಟು ದಂಡ ಸಂಗ್ರಹ ಮಾಡಲಾಗಿದೆ. ಸಂಚಾರ ನಿಯಮಾವಳಿಗಳನ್ನು ಪಾಲಿಸುವ ನಿಟ್ಟಿನಲ್ಲಿ ಸವಾರರು ಸ್ವಯಂ ಜಾಗೃತರಾಗುವ ಅಗತ್ಯವಿದೆ. ಸಂಚಾರದ ಸಂದರ್ಭದಲ್ಲಿ ಎಲ್ಲ ರೀತಿಯ ದಾಖಲೆಗಳನ್ನು ಕಡ್ಡಾಯವಾಗಿ ಇರಿಸಿ ಕೊಳ್ಳಬೇಕಿದೆ.
-ಸಕ್ತಿವೇಲು, ಎಎಸ್‌ಐ, ಸಂಚಾರ ಪೊಲೀಸ್‌ ಠಾಣೆ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next