ನಾಗಮಂಗಲ: ಬೈಕ್ ಸವಾರರುಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಜತೆಗೆ ತಮ್ಮಜೀವ ರಕ್ಷಣೆಗಾಗಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದುನಾಗಮಂಗಲ ಉಪ ವಿಭಾಗದ ಡಿವೈಎಸ್‌ಪಿ ನವೀನ್‌ಕುಮಾರ್ ತಿಳಿಸಿದರು.
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಪಟ್ಟಣದಲ್ಲಿ ಪೊಲೀಸ್ ಇಲಾಖೆಮಂಗಳವಾರ ಆಯೋಜಿಸಿದ್ದ ಜನಜಾಗೃತಿಜಾಥಾಗೆ ಚಾಲನೆ ನೀಡಿದ ಬಳಿಕಮಾತನಾಡಿದರು.
ರಸ್ತೆ ಅಪಘಾತಗಳು ಸಂಭವಿಸಿ ಸಾವು ನೋವು ಉಂಟಾಗಲು ವಾಹನ ಚಾಲಕರಅಜಾಗರೂಕತೆಯೇ ಮುಖ್ಯ ಕಾರಣ. ಬೈಕ್‌ಸೇರಿದಂತೆ ಯಾವುದೇ ವಾಹನ ಚಾಲನೆಮಾಡುವ ವ್ಯಕ್ತಿ ಚಾಲನಾ ಪರವಾನಗಿ ಜತೆಗೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿತಿಳಿದುಕೊಂಡಿರಬೇಕೆಂದರು.
ಹೆಲ್ಮೆಟ್ ಧರಿಸಿ: ವಾಹನ ಚಾಲನೆ ವೇಳೆಮೊಬೈಲ್ ಬಳಕೆ, ಮದ್ಯಪಾನ ಸೇವನೆ,ರಸ್ತೆಯಲ್ಲಿ ಅಡ್ಡಾದಿಡ್ಡಿ ಚಾಲನೆಯಿಂದ ಅಪಘಾತ ಸಂಭವಿಸಿ, ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.ಹೀಗಾಗಿ ಬೈಕ್ ಸವಾರರು ಚಾಲನೆ ಮಾಡುವಾಗ ತಲೆಗೆ ಹೆಲ್ಮೆಟ್ ಧರಿಸುವುದರಿಂದಆಕಸ್ಮಿಕವಾಗಿ ಅಪಘಾತ ಸಂಭವಿಸಿದರೂತಲೆಗೆ ಪೆಟ್ಟು ಬೀಳದಂತೆ ಸುರಕ್ಷತೆ ಕಾಪಾಡಿಕೊಳ್ಳಬಹುದು. ಅಂತೆಯೇ ದ್ವಿಚಕ್ರಗಳಲ್ಲಿಹಿಂಬದಿಯಲ್ಲಿ ಕುಳಿತು ಸಂಚರಿಸುವವ್ಯಕ್ತಿಯೂ ಹೆಲ್ಮೆಟ್ ಧರಿಸಬೇಕು ಎಂದರು.
ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಾಲನೆಮಾಡುವುದರಿಂದ ಅಪಘಾತಗಳಿಗೆ ಆಹ್ವಾನನೀಡಿದಂತಾಗುತ್ತದೆ. ಸಂಚಾರ ನಿಯಮ ಉಲ್ಲಂಘಿಸುವ ಯಾವುದೇ ವಾಹನ ಸವಾರರ ವಿರುದ್ಧ ಕಠಿಣ ಕ್ರಮಕ್ಕೆ ಇಲಾಖೆಮುಂದಾಗಲಿದೆ ಎಂದ ಅವರು, ಸುರಕ್ಷತೆಯರಸ್ತೆ ಸಂಚಾರಕ್ಕೆ ತಾಲೂಕಿನ ಸಾರ್ವಜನಿಕರುಸಹಕಾರ ನೀಡಬೇಕು. ಇದಕ್ಕಾಗಿಯೇಪೊಲೀಸ್ ಇಲಾಖೆ ವತಿಯಿಂದಲೇ ಜಾಗೃತಿಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂಚಾರ ನಿಯಮ ಪಾಲಿಸಿ: ಬೈಕ್ ಚಾಲನೆಮಾಡುವ ವೇಳೆ ಸುರಕ್ಷತೆ ದೃಷ್ಟಿಯಿಂದಕಡ್ಡಾಯವಾಗಿ ಹೆಲ್ಮೆಟ್ ಧರಿಸ ಬೇಕು. ಒಂದುಬೈಕ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿಪ್ರಯಾಣಿಸಬಾರದು. ನಿಮ್ಮ ಸುರಕ್ಷತೆ ಜತೆಗೆನಿಮ್ಮ ಮೇಲೆ ಅಪಾರ ಭರವಸೆಇಟ್ಟುಕೊಂಡಿರುವ ಕುಟುಂಬಸ್ಥರ ದೃಷ್ಟಿಯಿಂದ ಬೈಕ್ ಸವಾರರು ಮತ್ತು ಎಲ್ಲ ಬಗೆಯವಾಹನ ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ತಿಳಿಸಿದರು.
ಬಳಿಕ ಪಟ್ಟಣದ ಚಾಮರಾಜನಗರಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಟಿ.ಮರಿಯಪ್ಪವೃತ್ತದಿಂದ ಟಿ.ಬಿ.ಬಡಾವಣೆ, ಮಂಡ್ಯ ರಸ್ತೆ,ಮೈಸೂರು ರಸ್ತೆ, ಕೆಎಸ್‌ಟಿ ರಸ್ತೆ ಸೇರಿ ಪ್ರಮುಖಬೀದಿಗಳಲ್ಲಿ ಹೆಲ್ಮೆಟ್ ಧರಿಸಿದ ಪೊಲೀಸ್‌ಸಿಬ್ಬಂದಿ ಜನಜಾಗೃತಿ ಜಾಥಾ ನಡೆಸಿದರು. ವೃತ್ತ ನಿರೀಕ Òಕ ಸುಧಾಕರ್, ಪಟ್ಟಣ ಠಾಣೆಪಿಎಸ್‌ಐ ರವಿಶಂಕರ್, ಗ್ರಾಮಾಂತರ ಠಾಣೆ ಪಿ ಎಸ್‌ಐ ಶಿವಪ್ರಕಾಶ್, ಠಾಣೆಯ ಪೇದೆಗಳಿದ್ದರು.