Advertisement
ದ್ವಿಚಕ್ರ ವಾಹನಗಳ ಸಹಿತ ಬಸ್, ಕಾರು, ಲಾರಿ ಮೊದಲಾದ ವಾಹನಗಳ ಅತೀ ವೇಗ, ನಿರ್ಲಕ್ಷ್ಯದ ಚಾಲನೆ ಒಂದು ಸಮಸ್ಯೆಯಾದರೆ, ಬಸ್ ಗಳ ಕರ್ಕಶ ಹಾರ್ನ್ ಮತ್ತೂಂದು ದೊಡ್ಡ ಸಮಸ್ಯೆಯಾಗಿ ನಾಗರಿಕರನ್ನ ಕಾಡತೊಡಗಿದೆ. ಇವುಗಳೊಂದಿಗೆ ಇತ್ತೀಚೆಗೆ ಕೆಲವರ ಹೊಸ ಹುಚ್ಚು ಸಾಹಸಗಳೂ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ.
ಖಾಸಗಿ ಬಸ್‌ಗಳ ಓವರ್‌ಟೇಕ್ ಭರಾಟೆ ಹೆಚ್ಚಾಗಿದೆ. ಬೆಳಗ್ಗೆ ಮತ್ತು ಸಂಜೆ ಜನ, ವಾಹನ ಸಂಚಾರ ದಟ್ಟಣೆಯ ವೇಳೆ ಬಸ್‌ಗಳ ಪೈಪೋಟಿಯ ಸಂಚಾರ ಇತರ ವಾಹನ ಚಾಲಕರಲ್ಲಿ ಭೀತಿ ಮೂಡಿಸಿದೆ. ಸಿಬಂದಿ ನಡುವೆ ಟೈಮಿಂಗ್ಸ್ ವಿಚಾರವಾಗಿ ಆಗಾಗ್ಗೆ ಘರ್ಷಣೆಗಳು ಸಂಭವಿಸುತ್ತಿದ್ದು ಬಸ್‌ಗಳನ್ನು ರಸ್ತೆಯಲ್ಲೇ ಅಡ್ಡ ಇಟ್ಟ ಘಟನೆಗಳು ಕೂಡ ನಡೆದಿದೆ. ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ಲೌಡ್ ಸ್ಪೀಕರ್‌ಗೆ ಇಲ್ಲ ಕಡಿವಾಣ
ಸಿಟಿ, ಎಕ್ಸ್‌ಪ್ರೆಸ್ ಸಹಿತ ಬಹುತೇಕ ಖಾಸಗಿ ಬಸ್‌ಗಳಲ್ಲಿ ಲೌಡ್‌ಸ್ಪೀಕರ್ ಆರ್ಭಟ ಇದೆ. ಕೆಲವು ಮಂದಿ ಚಾಲಕರು ಜಂಕ್ಷನ್‌ಗಳ ಬಳಿ ಬರುವ ವೇಳೆ ಸ್ಪೀಕರ್ ವಾಲ್ಯೂಮ್ ಸ್ವಲ್ಪ ತಗ್ಗಿಸುತ್ತಾರೆ. ಅನಂತರ ಅದರ ಸದ್ದು ಪ್ರಯಾಣಿಕರ ನೆಮ್ಮದಿ ಕೆಡಿಸುತ್ತದೆ. ಪ್ರಯಾಣಿಕರು ತಮ್ಮ ನಿಲ್ದಾಣ ಬರುವಾಗ ಬಸ್ ನಿಲ್ಲಿಸಲು ಬೊಬ್ಬೆ ಹೊಡೆಯಬೇಕಾದ ಸ್ಥಿತಿ ಇದೆ.
Related Articles
ಸಂಚಾರಿ ಪೊಲೀಸರ ಕಣ್ತಪ್ಪಿಸಿ ಮೊಬೈಲ್ ಬಳಕೆ ನಡೆಯುತ್ತಲೇ ಇದೆ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಒಳಗೆ ಮೊಬೈಲ್ ಇಟ್ಟು ಮಾತನಾಡುವುದು, ಇಯರ್ ಪೋನ್, ಬ್ಲೂ ಟೂತ್ ಮೊದಲಾದವುಗಳನ್ನು ಬಳಕೆ ಮಾಡುವುದು ಸರ್ವೇಸಾಮಾನ್ಯ. ಕಾರು ಚಾಲನೆ ವೇಳೆಯೂ ಮೊಬೈಲ್ ಬಳಕೆ ಯಾವುದೇ ಅಂಜಿಕೆ ಇಲ್ಲದೆ ನಡೆಯುತ್ತಿರುವುದು ಕಂಡುಬಂದಿದೆ.
Advertisement
ನಿಗಾ-ಕಾರ್ಯಾಚರಣೆ ಹೆಚ್ಚಾಗಲಿರಾಷ್ಟ್ರೀಯ ಹೆದ್ದಾರಿ, ನಗರದೊಳಗಿನ ರಸ್ತೆಗಳು ಸೇರಿದಂತೆ ವಿವಿಧೆಡೆ ಪೊಲೀಸರ ನಿಗಾ ಹೆಚ್ಚಾಗಬೇಕಿದೆ. ಪೊಲೀಸರು ವಾಹನಗಳ ದಾಖಲೆಗಳನ್ನು ಪರಿಶೀಲಿಸಿ ದಂಡ ವಸೂಲಿಗೆ ಆದ್ಯತೆ ನೀಡುತ್ತಿದ್ದಾರೆ. ಇದನ್ನೂ ಓದಿ : ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ: ಎನ್ ಸಿಬಿಯ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ಸಾವು ಕರ್ಕಶ ಹಾರ್ನ್ ಹಾವಳಿ
ನಿಷೇಧಿತವಾದ ಹಾರ್ನ್ಗಳ ಬಳಕೆ ಯನ್ನು ತಡೆಯುವಲ್ಲಿ ಪೊಲೀಸರು ಇನ್ನೂ ಯಶಸ್ಸಾಗಿಲ್ಲ. ಅಪರೂಪ ಕ್ಕೊಮ್ಮೆ ಕಾರ್ಯಾಚರಣೆ ನಡೆಸಿ ಕೆಲವು ಬಸ್‌ಗಳ ಹಾರ್ನ್ ಕಿತ್ತು ಹಾಕುತ್ತಾರೆ. ಮರುದಿನದಿಂದಲೇ ಮತ್ತೆ ಅದೇ ರೀತಿಯ ಹಾರ್ನ್ಗಳನ್ನು ಬಳಸಲಾಗುತ್ತಿದೆ. ಶಾಲೆ, ಆಸ್ಪತ್ರೆ ಮೊದಲಾದ ಸ್ಥಳಗಳಲ್ಲಿಯೂ ಯಾವುದೇ ಅಂಜಿಕೆ ಇಲ್ಲದೆ ಕರ್ಕಶ ಹಾರ್ನ್ಗಳನ್ನು ಬಳಕೆ ಮಾಡಲಾಗುತ್ತಿದೆ. ಜಾಲಿರೈಡ್, ಸ್ಟಂಟ್
ನಗರದ ರಸ್ತೆಗಳು, ಹೆದ್ದಾರಿಗಳಲ್ಲಿ ದ್ವಿಚಕ್ರ ವಾಹನಗಳ ಸ್ಟಂಟ್, ಅತೀ ವೇಗ ಹಲವರ ಜೀವಕ್ಕೆ ಅಪಾಯ ತಂದೊಡ್ಡಿದೆ. ನಿರ್ಲಕ್ಷ್ಯದ ಚಾಲನೆಗೆ ಈಗಾಗಲೇ ಹಲವರು ಬಲಿಯಾಗಿದ್ದಾರೆ. ವೀಲಿಂಗ್‌ಗೆ ಸಂಬಂಧಿಸಿ ಈಗಾಗಲೇ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ. ಆದರೂ ಬೈಕ್ ಸ್ಟಂಟ್ ಹಲವೆಡೆ ಮುಂದುವರಿದಿದೆ. ವೀಕೆಂಡ್ ದಿನಗಳಲ್ಲಿ ಜಾಲಿ ರೈಡ್ ಹೆಸರಿನಲ್ಲಿ ನಿರ್ಲಕ್ಷ್ಯದ ಬೈಕ್ ಸವಾರಿ ಹೆಚ್ಚಾಗಿದೆ. ತಿಂಗಳಲ್ಲಿ 61.42 ಲ.ರೂ. ದಂಡ ವಸೂಲಿ
ಫೆಬ್ರವರಿ ತಿಂಗಳಲ್ಲಿ ಅತೀ ವೇಗಕ್ಕೆ ಸಂಬಂಧಿಸಿ 3 ಪ್ರಕರಣ, ಮೊಬೈಲ್ ಪೋನ್ ಬಳಕೆಗೆ ಸಂಬಂ ಧಿಸಿ 205 ಪ್ರಕರಣ, ಫುಟ್‌ಪಾತ್ ಮೇಲೆ ಬೈಕ್ ಸವಾರಿ ಮಾಡಿರುವ ಸಂಬಂಧವಾಗಿ 8 ಪ್ರಕ ರಣ, ಕರ್ಕಶ ಹಾರ್ನ್ ಬಳಕೆಗೆ ಸಂಬಂಧಿಸಿ 34 ಪ್ರಕರಣ, ನಿರ್ಲಕ್ಷ್ಯದ ಚಾಲನೆಗೆ ಸಂಬಂಧಿಸಿ 147 ಪ್ರಕರಣ ಸಹಿತ ಒಟ್ಟು 16,448 ಪ್ರಕರ ಣಗಳನ್ನು ದಾಖಲಿಸಿ 61, 42,400 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.