ಸಂಚಾರ ನಿಯಮ ಉಲ್ಲಂಘನೆಗಳಿಗೆ ದುಬಾರಿ ದಂಡ ವಿಧಿಸುವ ಕ್ರಮ ಜಾರಿಗೆ ಬಂದ ಮೇಲೂ ಅಪಘಾತ ಪ್ರಮಾಣದಲ್ಲಿ ಇಳಿಕೆಯಾಗದಿರಲು ಏನು ಕಾರಣವಿರಬಹುದು ಎಂದು ಉದಯವಾಣಿ ಕೇಳಿದ ಪ್ರಶ್ನೆಗಳಿಗೆ ಉತ್ತಮ ಪ್ರತಿಕ್ರೀಯೆ ಬಂದಿದ್ದು ಅದರಲ್ಲಿ ಆಯ್ದ ಕೆಲವೊಂದು ಅಭಿಪ್ರಾಯಗಳನ್ನು ಪ್ರಕಟಿಸಲಾಗಿದೆ.
ಲೋಹಿತ್ ಕಾಮಯ್ಯನಹಟ್ಟಿ: ನಗರ ಪಟ್ಟಣಗಳಿಗೆ ಹೋಲಿಸಿದರೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿರುವುದು ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ. ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸಲು ಜನ ಸಂಖ್ಯೆಗೆ ಅನುಗುಣವಾಗಿ ಆಧಿಕಾರಿಗಳ ಕೊರತೆಯು ಪ್ರಮುಖ ಕಾರಣ.
ಸತೀಶ್ ನೂಜಿ: ಚಾಲನಾ ಪರವಾನಗಿಯನ್ನು ನೀಡುವ ವಿಧಾನವನ್ನು ಇನ್ನಷ್ಟು ಕಠಿಣಗೊಳಿಸಬೇಕು. ಬ್ರೋಕರ್ ಗಿರಿ ತಪ್ಪಿಸಿ ಆನ್ ಲೈನ್ ಅಥವಾ ಸ್ಯಾಟಲೈಟ್ ಬೇಸ್ಡ್ ಪರೀಕ್ಷಾರ್ಥ ಚಾಲನೆ ಇರಬೇಕು. ಸಾರಿಗೆ ಇಲಾಖೆ ಕೇವಲ ಕಛೇರಿ ಕೆಲಸಗಳಿಗೆ ಸೀಮಿತವಾಗದೆ, ರಸ್ತೆ ಅಪಘಾತ ಸ್ಥಳದಲ್ಲಿ ರಸ್ತೆಯ ನಿರ್ಮಾಣ ದೋಷವಿದ್ದಲ್ಲಿ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಎನ್ಪೋರ್ಸ್ ಮೆಂಟ್ ಹೆಚ್ಚು ಆದ್ಯತೆ ಕೊಡಬೇಕು. ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆಯ ಕೇಸು ದಾಖಲಿಸದಂತೆ ಜನಪ್ರತಿನಿಧಿಗಳ ಹಸ್ತಕ್ಷೇಪ ನಿಲ್ಲಭೇಕು.
ರಾಜೇಶ್ ಅಂಚನ್ ಎಂ.ಬಿ: ಇಲ್ಲಿ ಬದಲಾಗಬೇಕಿರೋದು ನಿಯಮ ದಂಡಗಳಿಗಿಂತ ಚಾಲನೆ ಮಾಡುವ ವ್ಯಕ್ತಿಯ ಮನೋಭಾವನೆ.ಇವತ್ತು ಚಾಲನೆ ಅನ್ನೋದು ಒಂದು ಶೋಕಿಯಾಗಿದೆ. ಗೊತ್ತು ಗುರಿ ಇಲ್ಲದೆ ತಮ್ಮ ಸ್ಥಳವನ್ನು ತಲುಪಬೇಕೆನ್ನುವ ಅನಗತ್ಯ ಅವಸರ. ತಮ್ಮ ರಕ್ಷಣಾ ವಿಚಾರದಲ್ಲೇ ತಮಗೆ ಇಲ್ಲದ ಆಸಕ್ತಿ ,ಮಿತಿಮೀರಿದ ವಾಹನಗಳ ಸಂಖ್ಯೆ, ರಸ್ತೆ ನಿರ್ವಹಣೆ ವಿಚಾರದಲ್ಲಿ ಸರ್ಕಾರಗಳ ನಿರಾಸಕ್ತಿ,ಯುವ ಜನರ ಚಾಲನಾ ಅಜಾಗರೂಕತೆ ಇವುಗಳು ಅಪಘಾತಕ್ಕೆ ಮುಖ್ಯ ಕಾರಣವಾಗಿವೆ..
ಸೈಮನ್ ಫೆರ್ನಾಂಡೀಸ್: ಸಂಚಾರಿ ಪೋಲೀಸರ ಭ್ರಷ್ಟಾಚಾರದಿಂದ…
₹100, 200, 500 ಕಿತ್ತು ಕೊಂಡು ಕಳಿಸಿಬಿಡುತ್ತಾರೆ.. ಅವರ ಕರ್ತವ್ಯ ಸರಿಯಾಗಿ ಮಾಡಿದರಷ್ಟೇ ಸರಿಹೊಗೋದು..