Advertisement
ವಾಹನ ನಿಲುಗಡೆಗೆ ಜಾಗವೇ ಇಲ್ಲ! ಉಡುಪಿ ನಗರದಲ್ಲಿ ಪ್ರಸ್ತುತ ಇರುವ ಕೆಎಸ್ಸಾರ್ಟಿಸಿ ಬಸ್ ತಂಗುದಾಣದ ಬಳಿ ಬಿಟ್ಟರೆ ಬೇರೆ ಎಲ್ಲಿಯೂ ಅಧಿಕೃತ ವಾಹನ ನಿಲುಗಡೆಗೆ ಜಾಗವೇ ಇಲ್ಲ ಎಂಬಂತಾಗಿದೆ. ಒಂದೆಡೆ ಫುಟ್‌ಪಾತ್‌ಗಳನ್ನು ಅಂಗಡಿಗಳು ಆಕ್ರಮಿಸಿಕೊಂಡಿವೆ. ಪ್ರಸ್ತುತ ರಸ್ತೆಯ ಬದಿಯಲ್ಲಿರುವ ಬಿಳಿ ಬಣ್ಣದ ಹೊರಭಾಗದಲ್ಲಿ ಹೆಚ್ಚಿನ ಮಂದಿ ವಾಹನ ನಿಲುಗಡೆಗೊಳಿಸುತ್ತಿದ್ದಾರೆ. ಆದರೆ ಇದು ತಾತ್ಕಾಲಿಕವಷ್ಟೇ. ಬನ್ನಂಜೆ ಬಳಿಯೂ ಹೆದ್ದಾರಿಯುದ್ದಕ್ಕೂ ವಾಹನ ನಿಲುಗಡೆ ಮಾಡಲಾಗುತ್ತಿದೆ. ಈ ಹಿಂದೆ ಕೋರ್ಟ್ ಎದುರುಗಡೆ ಪ್ರದೇಶದಲ್ಲಿಯೂ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿತ್ತು. ಆದರೆ ಪೊಲೀಸ್ ಭಯದಿಂದ ಅದು ನಿಂತುಹೋಗಿದೆ. ನಗರದ ಶಿರಿಬೀಡು, ಕಲ್ಸಂಕ, ಮಾರುತಿ ವಿಥಿಕಾ, ತೆಂಕಪೇಟೆ, ಬಡಗುಪೇಟೆ, ಪಿಪಿಸಿ ಸಹಿತ ಎಲ್ಲ ಅಂಗಡಿ-ಮುಂಗಟ್ಟುಗಳ ಎದುರು ವಾಹನ ನಿಲುಗಡೆ ಮಾಡುತ್ತಿರುವುದು ಟ್ರಾಫಿಕ್ ದಟ್ಟಣೆ ಹೆಚ್ಚಳವಾಗಲು ಕಾರಣವಾಗುತ್ತಿದೆ.
ಸಂತೆಕಟ್ಟೆ ಮೂಲಕ ಮಂಗಳೂರಿನತ್ತ ತೆರಳುವ ವಾಹನಗಳು ಮತ್ತೂಂದೆಡೆ ಅಜ್ಜರಕಾಡು ಬಳಿಗೆ ತೆರಳುವ ವಾಹನಗಳು ಆ ಕಡೆಯಿಂದ ಅಂಬಲಪಾಡಿಯಿಂದ ಸಂತೆಕಟ್ಟೆ, ಅಜ್ಜರಕಾಡು, ಮಂಗಳೂರಿನತ್ತ ತೆರಳುವ ವಾಹನಗಳು ಅತ್ತ ಮಂಗಳೂರಿನಿಂದ ಆಗಮಿಸಿ ಅಜ್ಜರಕಾಡು, ಸಂತೆಕಟ್ಟೆ, ಅಂಬಲಪಾಡಿಗೆ ತೆರಳುವ ವಾಹನಗಳು ಆಗಮಿಸುತ್ತವೆ. ಮೇಲ್ನೋಟಕ್ಕೆ ಈ ಭಾಗದಲ್ಲಿ ಸಿಗ್ನಲ್ ಲೈಟ್ ಹಾಗೂ ಸಿಸಿಟಿವಿಗಳನ್ನು ಅಳವಡಿಸಿದರೆ ಸಮಸ್ಯೆ ತಕ್ಕ ಮಟ್ಟಿಗೆ ನಿವಾರಣೆಯಾಗಲು ಸಾಧ್ಯವಿದೆ. ಪ್ರಸ್ತುತ 2ರಿಂದ 3 ಮಂದಿ ಟ್ರಾಫಿಕ್ ಪೊಲೀಸ್ ಸಿಬಂದಿ ಇಲ್ಲಿ ಕರ್ತವ್ಯ ನಿರತರಾಗಿದ್ದಾರೆ. ಇದನ್ನೂ ಓದಿ : ವಿವೇಕ್ ಅಗ್ನಿಹೋತ್ರಿ ವಿರುದ್ಧ ದೂರು ದಾಖಲು: ಭೋಪಾಲಿಗಳ ಬಗ್ಗೆ ಸಂದರ್ಶನದಲ್ಲಿ ಹೇಳಿದ್ದೇನು?
Related Articles
ಕಲ್ಸಂಕ ಭಾಗದಲ್ಲಿ ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು ಅದೆಷ್ಟು ಪ್ರಯೋಗ ಮಾಡಿದರೂ ಸಾಕಾಗುತ್ತಿಲ್ಲ. ಸೈರನ್ ಮೂಲಕ ತಿಳಿಸುವುದು, ಒಂದು ಬದಿ ನಿಲ್ಲಿಸಿ ಮತ್ತೂಂದು ಬದಿ ಸಂಚಾರಕ್ಕೆ ಅನುವು ಮಾಡುವುದು ಹೀಗೆ ನಾನಾ ಪ್ರಯೋಗಗಳನ್ನು ಟ್ರಾಫಿಕ್ ಪೊಲೀಸರು ಈ ಭಾಗದಲ್ಲಿ ಮಾಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಬೇರೆ ರೀತಿಯ ಸಮಸ್ಯೆಗಳೂ ಉದ್ಬವಿಸಿರುವುದರಿಂದ ಮತ್ತೆ ಯಥಾಸ್ಥಿತಿ ಮುಂದುವರಿಯುತ್ತಿದೆ. ಆದರೂ ಈ ಹಿಂದಿಗಿಂತ ಈಗ ಸಮಸ್ಯೆ ತಕ್ಕ ಮಟ್ಟಿಗೆ ಪರವಾಗಿಲ್ಲ ಎಂಬಂತಿದೆ. ಅಂಬಾಗಿಲು ಕಡೆಯಿಂದ ಮಣಿಪಾಲ, ಶ್ರೀಕೃಷ್ಣ ಮಠದಿಂದ ಸಿಟಿ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣದಿಂದ ಅಂಬಾಗಿಲು ಕಡೆ ತೆರಳುವವರಿಗೆ ಮುಕ್ತ ಎಡ ಸಂಚಾರಕ್ಕೆ ಅವಕಾಶ ಇಲ್ಲದಿರುವ ಕಾರಣ ಇಲ್ಲಿ ದಟ್ಟಣೆಗೆ ಕಾರಣವಾಗುತ್ತಿದೆ. ಪ್ರಸ್ತುತ ಇರುವ ಸ್ಥಳಾವಕಾಶವನ್ನು ವಿಸ್ತರಿಸಿದರಷ್ಟೇ ಸಮಸ್ಯೆ ಅಂತ್ಯಕಾಣಲು ಸಾಧ್ಯವಿದೆ.
Advertisement
ಸಿಟಿ ಬಸ್ ನಿಲ್ದಾಣಸಿಟಿ ಬಸ್ ನಿಲ್ದಾಣ ಮೇಲ್ದರ್ಜೆ ಕನಸು ಇನ್ನೂ ಹಾಗೆ ಉಳಿದುಕೊಂಡಿದೆ. ಇದರ ಪರಿಣಾಮ ದಿನನಿತ್ಯ ದಟ್ಟಣೆ ಈ ಭಾಗದಲ್ಲಿ ಸರ್ವೇಸಾಮಾನ್ಯ ಎಂಬಂತಾಗಿದೆ. ಬನ್ನಂಜೆಯಿಂದ ಮಣಿಪಾಲದತ್ತ ಹಾಗೂ ಬನ್ನಂಜೆಯಿಂದ ಸರ್ವಿಸ್ ಬಸ್ ತಂಗುದಾಣಕ್ಕೆ ತೆರಳುವ ವೇಳೆ ಅಶ್ವತ್ಥ ಮರದ ಬಳಿ ಉಂಟಾಗುವ ದಟ್ಟಣೆ
ಇಡೀ ನಗರಕ್ಕೆ ವಿಸ್ತರಣೆಯಾಗುತ್ತಿದೆ. ಈ ಭಾಗದಲ್ಲಿ ಟ್ರಾಫಿಕ್ ಪೊಲೀಸರ ಅಗತ್ಯತೆಯೂ ಕಂಡುಬಂದಿದೆ. ಇತರ ದಟ್ಟಣೆ ಪ್ರದೇಶಗಳು
ಬ್ರಹ್ಮಗಿರಿ ಸರ್ಕಲ್, ಮೀನುಮಾರುಕಟ್ಟೆ, ಹಳೆ ಡಯನಾ ಸರ್ಕಲ್, ಬನ್ನಂಜೆ ಸರ್ಕಲ್, ಜೋಡುಕಟ್ಟೆ, ಉಡುಪಿ ಸಿಂಡಿಕೇಟ್ ಸರ್ಕಲ್‌ಗಳಲ್ಲಿ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ವೇಳೆ ವಾಹನ ದಟ್ಟಣೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದೆ. ಶಾಲಾ-ಕಾಲೇಜುಗಳು ಆರಂಭ ಹಾಗೂ ಮುಕ್ತಾಯದ ಬಳಿಕ ವಿದ್ಯಾರ್ಥಿಗಳ ಓಡಾಟವೂ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ವಾಹನ ಸವಾರರೂ ಜಾಗರೂಕತೆ ವಹಿಸುವ ಅಗತ್ಯತೆ ಇದೆ. ರಾತ್ರಿ ವೇಳೆಯೂ ಸರ್ಕಲ್‌ಗಳ ಗೋಚರವಿಲ್ಲದೆ ವಾಹನಗಳು ಅತೀ ವೇಗದಿಂದ ಚಲಿಸುವ ಕಾರಣ ಅಪಘಾತಕ್ಕೆ ಕಾರಣವಾಗುತ್ತಿದೆ.