ಚಳ್ಳಕೆರೆ: ಪ್ರತಿ ವರ್ಷ ರಸ್ತೆ ಸುರಕ್ಷತಾ ಸಪ್ತಾಹದ ಮೂಲಕ ವಾಹನ ಚಾಲಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಮೂಲಕ ಅಪಘಾತಗಳ ಸಂಖ್ಯೆಯನ್ನು ನಿಯಂತ್ರಣ ಹಾಗೂ ಸಾವಿನಿಂದ ಪಾರು ಮಾಡಲು ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿ ಕಾರಿ ಕರುಣಾಕರ ಕರೆ ನೀಡಿದರು.
ನಗರದ ಚಿತ್ರದುರ್ಗ ರಸ್ತೆಯ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರ ಜೀವ ಸಂರಕ್ಷಣೆಗಾಗಿ ಸರ್ಕಾರ ಸಾರಿಗೆ ಇಲಾಖೆ ಅನೇಕನಿಯಮಗಳನ್ನು ರೂಪಿಸಿಅವುಗಳನ್ನು ಚಾಚೂ ತಪ್ಪದೆ ಪಾಲಿಸಲು ಜನ ಜಾಗೃತಿ ಮೂಡಿಸುತ್ತಿದೆ. ಆದರೆ ನಿರ್ಲಕ್ಷé ತಾಳಿದ್ದರಿಂದ ಅಪಘಾತಗಳ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ವಿಷಾದಿಸಿದರು.
ಇದನ್ನೂ ಓದಿ:ಅಗೆದಿರುವ ರಸ್ತೆದುರಸ್ತಿಗೊಳಿಸಿ: ಶಾಸಕ ತಿಪ್ಪಾರೆಡ್ಡಿ
ಪೊಲೀಸ್ ಇನ್ಸ್‌ಪೆಕ್ಟರ್ ಜೆ.ಸಿ. ತಿಪ್ಪೇಸ್ವಾಮಿ ಮಾತನಾಡಿ, ಪ್ರತಿ ವರ್ಷ ಪೊಲೀಸ್, ಸಾರಿಗೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜನರನ್ನು ಅಪಘಾತದಿಂದಸಂರಕ್ಷಣೆ ಮಾಡಲು ರಸ್ತೆ ನಿಯಮ ಪಾಲಿಸುವಂತೆ ಅರಿವು ಮೂಡಿಸಲಾಗುತ್ತಿದೆ.
ರಸ್ತೆ ನಿಯಮಗಳ ಉಲ್ಲಂಘನೆ ಅಪಘಾತಕ್ಕೆ ಕಾರಣವಾಗುತ್ತಿದ್ದು, ವಾಹನ ಸವಾರರು ಜಾಗೃತಿ ವಹಿಸಿದಲ್ಲಿ ಮಾತ್ರ ಇದಕ್ಕೆ ಕಡಿವಾಣ ಹಾಕಬಹುದಾಗಿದೆ. ಪ್ರತಿಯೊಂದು ಹಂತದಲ್ಲೂ ಪೊಲೀಸ್ ಇಲಾಖೆಯ ನೆರವು ನಿರೀಕ್ಷಿಸುವ ಸಾರ್ವಜನಿಕರು ರಸ್ತೆ ನಿಯಮ ಹಾಗೂ ಇನ್ನಿತರೆ ವಿಚಾರಗಳಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಆಗ ಯಾವುದೇ ಅಪಾಯ ನಮಗೆ ಎದುರಾಗದು ಎಂದರು. ಪಿಎಸ್‌ಐಗಳಾದ ಪಿ.ಆರ್. ರಾಘವೇಂದ್ರ, ಮಂಜುನಾಥ ಇದ್ದರು.