ಮೈಸೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಸಂಬಂಧ ಸಂಚಾರ ಠಾಣೆ ಪೊಲೀಸರ ತಪಾಸಣಾಕಾರ್ಯದಲ್ಲಿ ಮಹತ್ತರ ಬದಲಾವಣೆಯಾಗಲಿದ್ದು, ಹೊಸಮಾರ್ಗಸೂಚಿ ಅನ್ವಯ ಏ.1ರಿಂದ ಪೊಲೀಸರು ತಪಾಸಣಾ ಕಾರ್ಯ ನಡೆಸಲಿದ್ದಾರೆ.
ಬೋಗಾದಿಯ ರಿಂಗ್ ರಸ್ತೆ ಜಂಕ್ಷನ್‌ನಲ್ಲಿ ನಡೆದ ಅಪಘಾತಪ್ರಕರಣದ ಬಳಿಕ ಸಂಚಾರ ಪೊಲೀಸರು, ತಮ್ಮ ಕಾರ್ಯವೈಖರಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಎಲ್ಲೆಂದರಲ್ಲಿತಪಾಸಣೆ ನಡೆಸದೇ ಆಯ್ದ ಸ್ಥಳಗಳಲ್ಲಿ ನಿರ್ದಿಷ್ಟ ಅವಧಿಯಲ್ಲಿಮಾತ್ರ ತಪಾಸಣೆ ನಡೆಸಲು ನಿರ್ಧರಿಸಿದ್ದಾರೆ. ಸಂಚಾರ ದಟ್ಟಣೆಹೆಚ್ಚಾಗಿರುವ ಸಂದರ್ಭದಲ್ಲಿ ವಾಹನ ತಪಾಸಣಾ ಕಾರ್ಯನಡೆಸುವುದಿಲ್ಲ. ಈ ಸಂಬಂಧ ಮೈಸೂರು ನಗರ ಎಲ್ಲಾಸಂಚಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗಳು, ಎಸಿಪಿ,ಡಿಸಿಪಿ ಅವರೊಂದಿಗೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಸಭೆ ನಡೆಸಿದ್ದು, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಸಮಯ ನಿಗದಿ: ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30ರವರೆಗೆ ಹಾಗೂ ಸಂಜೆ 3ರಿಂದ 5ರವರೆಗೆ ಮಾತ್ರ ತಪಾಸಣಾ ಕಾರ್ಯನಡೆಸಲಿದ್ದಾರೆ. ಆಯ್ದ ಸ್ಥಳಗಳಲ್ಲಿ ತಪಾಸಣಾ ಕಾರ್ಯ ನಡೆಸುವಮುನ್ನ ಸಾರ್ವಜನಿಕರು ಸೇರಿ ವಾಹನ ಸವಾರರಿಗೆ ಪೂರ್ವನಿಗದಿಯಾಗಿ ಮಾಹಿತಿ ನೀಡಲಿದ್ದು, ಧ್ವನಿ ವರ್ಧಕದ ಮೂಲಕ ಪ್ರಚಾರ ನಡೆಸಿ, ವಾಹನ ಸವಾರರು ಅಗತ್ಯದಾಖಲೆಯೊಂದಿಗೆ ಸಂಚಾರ ನಿಯಮ ಪಾಲನೆ ಮಾಡಬೇಕು ಎಂದು ಮಾಹಿತಿ ನೀಡಲಿದ್ದಾರೆ.
ಎಎಸ್‌ಐ ಮಟ್ಟದ ಪೊಲೀಸ್ ಅಧಿಕಾರಿಗಳು ಮಾತ್ರತಪಾಸಣಾ ಕಾರ್ಯ ನಡೆಸಲಿದ್ದಾರೆ. ಅಲ್ಲದೆ, ರಿಂಗ್ ರಸ್ತೆವ್ಯಾಪ್ತಿಯಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣಗಳ ಸಂಬಂಧಮಾತ್ರ ತಪಾಸಣಾ ಕಾರ್ಯ ನಡೆಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ನಗರದಲ್ಲಿ ಹೊಸ ಮಾರ್ಗ ಸೂಚಿ ಅನ್ವಯಏಪ್ರಿಲ್ 1 ರಿಂದ ತಪಾಸಣಾ ಕಾರ್ಯನಡೆಸಲಿದ್ದು, ಪೊಲೀಸರು ವಾಹನ ಸಂಚಾರದಟ್ಟಣೆ ಹೆಚ್ಚಿರುವ ಸಮಯದಲ್ಲಿ ತಪಾಸಣಾಕಾರ್ಯ ನಡೆಸದೇ ನಿರ್ಧಿಷ್ಟ ಅವಧಿಯಲ್ಲಿ ತಪಾಸಣಾ ಕಾರ್ಯ ನಡೆಸಲಿದ್ದಾರೆ.
– ಡಾ.ಚಂದ್ರ ಗುಪ್ತ, ನಗರ ಪೊಲೀಸ್ ಆಯುಕ್ತರು