ಬೆಂಗಳೂರು: ಗಾಂಧಿಜಯಂತಿ, ವಿಜಯದಶಮಿ ಸೇರಿದಂತೆ ಸಾಲು ಸಾಲು ರಜೆಗಳು ಬರುವುದರಿಂದ ಮೆಜೆಸ್ಟಿಕ್, ರೈಲು ನಿಲ್ದಾಣಗಳಲ್ಲಿ ಸಂಚಾರ ದಟ್ಟಣೆ ನಿರ್ಮಾಣವಾಗುವ ಹಿನ್ನೆಲೆಯಲ್ಲಿ ಸೆ.28ರಂದು ಸಂಚಾರ ಪೊಲೀಸರು ಕೆಲವೆಡೆ ಸಂಚಾರ ಮಾರ್ಗ ಬದಲಾಯಿಸಿದ್ದಾರೆ.
ಧನ್ವಂತರಿ ರಸ್ತೆ, ರೈಲು ನಿಲ್ದಾಣ ರಸ್ತೆ, ಟ್ಯಾಂಕ್ ಬಂಡ್ ರಸ್ತೆ ಹಾಗೂ ಪ್ಲಾಟ್‌ಫಾರಂ ರಸ್ತೆ ಕಡೆಗಳಲ್ಲಿ ಹಾಗೂ ಖೋಡೇಸ್ ಜಂಕ್ಷನ್‌ನಲ್ಲಿ ಎಲ್ಲಾ ಬಗೆಯ ಖಾಸಗಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದ್ದು, ಮೈಸೂರು ರಸ್ತೆ, ಕೊಡಗು ಮತ್ತು ಕೇರಳ ಕಡೆ ಹೋಗುವ ಬಸ್‌ಗಳು ಮೈಸೂರು ರಸ್ತೆ ಸ್ಯಾಟಲೈಟ್ ನಿಲ್ದಾಣದಿಂದ ಮಾತ್ರವೇ ಹೊರಡುತ್ತವೆ. ತಮಿಳುನಾಡು ಕಡೆ ಸಂಚರಿಸುವ ಬಸ್‌ಗಳು ಶಾಂತಿನಗರ ಬಸ್ ನಿಲ್ದಾಣದಿಂದ ಹೊರಡಲಿವೆ.
ದಾವಣಗೆರೆ ಕಡೆಗೆ ಹೋಗುವ ಬಸ್‌ಗಳು ಚಿಕ್ಕಲಾಲ್‌ಬಾಗ್ ಬಸ್ ನಿಲ್ದಾಣದಿಂದ ಹೊರಡುತ್ತವೆ. ದೂರದ ಪ್ರದೇಶಗಳಿಗೆ ತೆರಳುವ ವಾಹನನಗಳಿಗೆ ಬಾಳೇಕಾಯಿ ಮಂಡಿ, ಜಕ್ಕರಾಯನಕೆರೆ, ಎಜಿಇಎಫ್ ಮತ್ತು ಪೀಣ್ಯ ನೂತನ ಬಸ್ ಟರ್ಮಿನಲ್‌ಗಳಲ್ಲಿ ಮಾತ್ರ ನಿಲುಗಡೆ ಅವಕಾಶವಿದೆ.
ಸಾರ್ವಜನಿಕರಲ್ಲಿ ಮನವಿ: ನಗರದಿಂದ ಹೊರ ಊರುಗಳಿಗೆ ಪ್ರಯಾಣಿಸುವವರು ಕಡ್ಡಾಯವಾಗಿ ಬಿಎಂಟಿಸಿ ಬಸ್ ಹಾಗೂ ಆಟೋ ರಿûಾಗಳ ಮೂಲಕ ಕೆಂಪೇಗೌಡ ನಿಲ್ದಾಣ ಹಾಗೂ ರೈಲು ನಿಲ್ದಾಣಕ್ಕೆ ಸಾಗಬೇಕು. ಮೈಸೂರು ಹಾಗೂ ಹೊರಗಿನ ಊರುಗಳಿಗೆ ಪ್ರಯಾಣಿಸುವವರು ಕಡ್ಡಾಯವಾಗಿ ಮೈಸೂರು ರಸ್ತೆ ಸ್ಯಾಟಲೈಟ್ ನಿಲ್ದಾಣದಲ್ಲೇ ಬಸ್‌ಗಳು ಹತ್ತಬೇಕು.
ಕೆಸ್‌ಆರ್‌ಟಿಸಿ, ಎಸ್‌ಇಟಿಸಿ ಪ್ರಿಮಿಯರ್ ಬಸ್‌ಗಳ ಪ್ರಯಾಣಿಕರು ಕಡ್ಡಾಯವಾಗಿ ಶಾಂತಿನಗರ ಬಸ್ ನಿಲ್ದಾಣದಲ್ಲಿ ಬಸ್ ಹತ್ತಬೇಕು. ಹೊಸೂರು ಮೂಲಕ ವಿಲ್ಲಾಪುರಂ, ಧರ್ಮಪುರಿ, ಸೇಲಂ, ಕೃಷ್ಣಗಿರಿ, ಕೊಯಮತ್ತೂರು ಕಡೆಗೆ ತಮಿಳುನಾಡು ಬಸ್‌ಗಳ ಮೂಲಕ ಹೊರಡುವವರು ಕಡ್ಡಾಯವಾಗಿ ಮೈಸೂರು ರಸ್ತೆ ನಿಲ್ದಾಣದಲ್ಲಿ ಬಸ್ ಹತ್ತಬೇಕು.
ಶಿವಮೊಗ್ಗ ಮತ್ತು ಈ ಮಾರ್ಗದ ಊರುಗಳ ಪ್ರಯಾಣಿಕರು ಕಡ್ಡಾಯವಾಗಿ ಯಶವಂತಪುರ ಟಿಟಿಎಂಸಿಯಲ್ಲಿ ಬಸ್ ಹತ್ತಬೇಕು. ನಗರದ ಜನತೆ ಸೆ.28 ರಂದು 4ರಿಂದ ರಾತ್ರಿ 11ರವರೆಗೆ ಕೆಂಪೇಗೌಡ ರಸ್ತೆ, ಗೂಡ್ಸ್‌ಶೆಡ್ ರಸ್ತೆ ಶೇಷಾದ್ರಿ ರಸ್ತೆ, ಸುಬೇದಾರ್ ಛತ್ರಂ ರಸ್ತೆ, ಪ್ಲಾಟ್‌ಫಾರಂ ರಸ್ತೆ, ಕೃಷ್ಣಪ್ಲೋರ್‌ಮಿಲ್ ರಸ್ತೆಗಳನ್ನು ಸಾಧ್ಯವಾದಷ್ಟು ಉಪಯೋಗಿಸದಂತೆ ಮನವಿ ಮಾಡಲಾಗಿದೆ.