Advertisement

ಮೈಸೂರು ರಸ್ತೆ ಸುತ್ತ ತೀವ್ರ ಸಂಚಾರ ದಟ್ಟಣೆ

06:41 AM Jan 04, 2019 | |

ಬೆಂಗಳೂರು: ಬಿಬಿಎಂಪಿ ವತಿಯಿಂದ ಮರು ಡಾಂಬರೀಕರಣ ಕಾಮಗಾರಿಗಾಗಿ ಮೈಸೂರು ರಸ್ತೆ (ಸಿರ್ಸಿ ವೃತ್ತ) ಮೇಲ್ಸೇತುವೆಯ ಒಂದು ಮಾರ್ಗದಲ್ಲಿ ಸಂಚಾರ ನಿಷೇಧಿಸಿರುವ ಪರಿಣಾಮ, ಕೇಂದ್ರ ಭಾಗದ ಪ್ರಮುಖ ರಸ್ತೆಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

Advertisement

ಟೌನ್‌ಹಾಲ್‌, ಜೆ.ಸಿ.ರಸ್ತೆ, ಕಾರ್ಪೊರೇಷನ್‌, ವಿಠಲ ಮಲ್ಯ ರಸ್ತೆ, ಕೆ.ಆರ್‌.ಮಾರುಕಟ್ಟೆ, ಕೆ.ಜಿ.ರಸ್ತೆ, ಚಾಮರಾಜಪೇಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ದಟ್ಟಣೆ ತೀವ್ರವಾಗಿದೆ. ಪ್ರಮುಖವಾಗಿ ಬೆಳಗ್ಗೆ ಹಾಗೂ ಸಂಜೆ ವೇಳೆ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಕಾರ್ಪೊರೇಷನ್‌ನಿಂದ ಮೈಸೂರು ರಸ್ತೆ ತಲುಪಲು ಕನಿಷ್ಠ 30 ನಿಮಿಷ ತಗುಲುತ್ತಿದೆ. ಸಂಚಾರ ಪೊಲೀಸರು ಪರ್ಯಾಯ ರಸ್ತೆಗಳನ್ನು ಸೂಚಿಸಿದ ರಸ್ತೆಗಳಲ್ಲೂ ದಟ್ಟಣೆ ಇರುವ ಕಾರಣ ಸವಾರರು ಸಮಸ್ಯೆ ಅನುಭವಿಸುವಂತಾಗಿದೆ. 

ಸಂಚಾರ ದಟ್ಟಣೆ ನಿವಾರಣೆಗೆ ಮೇಲ್ಸೇತುವೆಯ ಒಂದು ಮಾರ್ಗ ಬಂದ್‌ ಮಾಡಿದ್ದು, ಉಳಿದ ಒಂದು ಮಾರ್ಗದಲ್ಲಿ, ಬೆಳಗ್ಗೆ 6ರಿಂದ ಮಧ್ಯಾಹ್ನ 3 ಗಂಟೆವರೆಗೆ ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳಿಗೆ ಮತ್ತು ಮಧ್ಯಾಹ್ನ 3ರಿಂದ ರಾತ್ರಿ 10ರವರೆಗೆ ಟೌನ್‌ಹಾಲ್‌ನತ್ತ ಸಂಚರಿಸುವ ವಾಹನಗಳಿಗೆ ಅವಕಾಶ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next