Advertisement

Kudremukha ರಾಷ್ಟ್ರೀಯ ಉದ್ಯಾನವನದ ಬಾಲ್ ಗಲ್ ಬಳಿ ಟ್ರಾಫಿಕ್ ಜಾಮ್‌

03:24 PM Oct 01, 2023 | Team Udayavani |

ಚಿಕ್ಕಮಗಳೂರು: ಕಾಫಿನಾಡ ನೇತ್ರಾವತಿ ಪೀಕ್ ಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದರಿಂದ ಕುದುರೆಮುಖ-ಕಾರ್ಕಳ ರಸ್ತೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬಾಲ್ ಗಲ್ ನಲ್ಲಿ ಟ್ರಾಫಿಕ್ ಜಾಮ್‌ ಆಗಿತ್ತು.

Advertisement

ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಪರದಾಡುತ್ತಿದ್ದು, ಪ್ರವಾಸಿಗರ ದಟ್ಟಣೆ ಟ್ರಾಫಿಕ್ ಜಾಮ್ ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳಸ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ ನೇತ್ರಾವತಿ ಪೀಕ್ ಗೆ ಟ್ರಕ್ಕಿಂಗ್ ಗಾಗಿ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆ ಟ್ರಾಫಿಕ್ ಜಾಮ್ ಸಂಭವಿಸಿದೆ.

ಚಿಕ್ಕಮಗಳೂರು ಹಾಗೂ ಉಡುಪಿ ಗಡಿಭಾಗದಲ್ಲಿರುವ ನೇತ್ರಾವತಿ ಪೀಕ್ ಗೆ ತೆರಳುವಾಗ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ತುಂತುರು ಮಳೆ ನಡುವೆ ಟ್ರಾಫಿಕ್ ಜಾಮ್ ಉಂಟಾಗಿ ಪ್ರವಾಸಿಗರಿಗೆ ಕೆಲ ಕಾಲ ತೊಂದರೆಯುಂಟಾಯಿತು.

Advertisement

Udayavani is now on Telegram. Click here to join our channel and stay updated with the latest news.

Next