Advertisement

Everest ಪರ್ವತ ತಪ್ಪಲಲ್ಲಿ ಈಗ ಟ್ರಾಫಿಕ್‌ ಜಾಮ್‌

12:30 AM May 29, 2024 | Team Udayavani |

ಕಾಠ್ಮಂಡು: ವಿಶ್ವದ ಅತೀ ಎತ್ತರದ ಪರ್ವತ ಶಿಖರ ಎವರೆಸ್ಟ್‌ ಪರ್ವತವನ್ನು ಏರಲು ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳ ಪರ್ವತಾ ರೋಹಿ ಗಳು ಸಾಲುಗಟ್ಟಿ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಪರ್ವತದ ತಪ್ಪಲಿನಲ್ಲಿ “ಟ್ರಾಫಿಕ್‌ ಜಾಮ್‌’ ಉಂಟಾಗಿದ್ದು ವೀಡಿಯೋ ವೈರಲ್‌ ಆಗಿದೆ.

Advertisement

ಜತೆಗೆ ಶಿಖರವೇರಲು ಇರುವ ನಿಯಮಗಳ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. ರಾಜನ್‌ ದ್ವಿವೇದಿ ಎಂಬುವವರು ಹಂಚಿಕೊಂಡಿರುವ ವೀಡಿಯೋದಲ್ಲಿ ಶಿಖರವನ್ನೇರಲು ನೂರಾರು ಜನರು ಸಾಲುಗಟ್ಟಿ ನಿಂತಿದ್ದಾರೆ. ಬಹಳ ಕಠಿನ ಮಾರ್ಗದಲ್ಲಿ ಶಿಖರವೇರಲು ಸರಿಯಾದ ತರಬೇತಿ ಹಾಗೂ ಬಹಳ ಅನು ಭವ ಬೇಕಾಗುತ್ತದೆ. ಈ ಬಾರಿ ಎವರೆಸ್ಟ್‌ ಏರಲು ಹೋದವರಲ್ಲಿ 5 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ.

ಭಾರತೀಯ ಬಂಶಿ ಸಾವು
ಕಠ್ಮಂಡು: ಮೌಂಟ್‌ ಎವರೆಸ್ಟ್‌ ಏರಲು ಹೊರಟಿದ್ದ ಭಾರತೀಯ ಪರ್ವತಾರೋಹಿ ಬಂಶಿ ಲಾಲ್‌(46) ಅಸುನೀಗಿದ್ದಾರೆ ಎಂದು ನೇಪಾಲ ತಿಳಿಸಿದೆ. ತನ್ಮೂಲಕ ಪ್ರಸಕ್ತ ವರ್ಷದಲ್ಲಿ ಎವರೆಸ್ಟ್‌ ಶಿಖರ ಏರಲು ಹೊರಟು ಸಾವನ್ನಪಿರು ವವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next