Advertisement

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಡಾಂಬರೀಕರಣ: ಮುಕ್ಕ, ಪಾವಂಜೆಯಲ್ಲಿ ಟ್ರಾಫಿಕ್‌ ಜಾಮ್‌

11:19 PM Dec 17, 2022 | Team Udayavani |

ಸುರತ್ಕಲ್‌ : ರಾಷ್ಟ್ರೀಯ ಹೆದ್ದಾರಿ 66ರ ಮುಕ್ಕ, ಪಾವಂಜೆ ಮುಂತಾದ ಕಡೆ ಡಾಮರು ಫೇವರ್‌ ಫಿನಿಷ್‌ ಕಾಮಗಾರಿ ಶನಿವಾರದಿಂದ ಆರಂಭವಾಗಿದ್ದು ರಾತ್ರಿ ವೇಳೆ ಟ್ರಾಫಿಕ್‌ ಜಾಮ್‌ ಸಂಭವಿಸಿತು.

Advertisement

ವಾರಾಂತ್ಯ ಆಗಿರುವುದರಿಂದ ರಾತ್ರಿ ವೇಳೆ ಉಡುಪಿ ಕಡೆ ಹೋಗುವ ಸಂಚಾರದಲ್ಲಿ ಭಾರೀ ವ್ಯತ್ಯಯವಾಯಿತು.

ತಾಸುಗಟ್ಟಲೆ ವಾಹನ ಸವಾರರು ಹೆದ್ದಾರಿಯಲ್ಲಿ ಸಿಲುಕಿ ಸಂಕಟ ಪಡಬೇಕಾಯಿತು. ತುರ್ತು ವಾಹನಗಳ ಓಡಾಟಕ್ಕೂ ಅಡಚಣೆ ಯಾಯಿತು. ಸುರತ್ಕಲ್‌ನ ತಡಂಬೈಲಿನಿಂದ ಪಾವಂಜೆಯವರೆಗೆ ಟ್ರಾಫಿಕ್‌ ಜಾಮ್‌ ಉಂಟಾಗಿದೆ.

ಡಾಮರು ಹಾಕಲು ರಸ್ತೆಯನ್ನು ಈ ಹಿಂದೆಯೇ ಅಗೆದು ಹಾಕಿದ್ದರೂ ಈ ಭಾಗದಲ್ಲಿ ವಾಹನಗಳ ಒತ್ತಡ ಹೆಚ್ಚಿರುವ ಕಾರಣ ಈ ಸಮಸ್ಯೆ ಉಂಟಾಯಿತು.

Advertisement

Udayavani is now on Telegram. Click here to join our channel and stay updated with the latest news.

Next