Advertisement

ಸಣ್ಣ-ಪುಟ್ಟ ವಾಹನಗಳ ಸಂಚಾರ ಕಷ್ಟ

04:06 PM Jan 24, 2021 | Team Udayavani |

ಜೋಯಿಡಾ: ತಾಲೂಕಿನ ಜಗಲಬೇಟ -ಶಿಂಗರಗಾಂವ ರಸ್ತೆಯಲ್ಲಿ ಭಾರಿ ತೂಕವುಳ್ಳ ಸರಕನ್ನು ಹೊತ್ತ ವಾಹನಗಳು ನಿರಾತಂಕವಾಗಿ ಸಂಚರಿಸುತ್ತಿರುವುದರಿಂದ ಈ ರಸ್ತೆಯ ಮೇಲೆ ದೈನಂದಿನ ಓಡಾಡುವ ಸ್ಥಳೀಯ ಸಣ್ಣ-ಪುಟ್ಟವಾಹನಗಳ ಸಂಚಾರಕ್ಕೆ ಕಷ್ಟ ಹಾಗೂ ಭಯದ ವಾತಾವರಣ ಉಂಟಾಗಿದೆ.

Advertisement

ಜಗಲಬೇಟ ಶಿಂಗರಗಾಂವ ರಸ್ತೆ ಗ್ರಾಮೀಣ ಸಂಚಾರದ ರಸ್ತೆಯಾಗಿದ್ದು, ಸ್ಥಳೀಯ ವಾಹನ ಸಂಚಾರಕ್ಕೆ ಯೋಗ್ಯವಾಗಿದೆ. ಅಲ್ಲದೆ ಇದು ಭಾರೀ ವಾಹನ ಸಂಚಾರಕ್ಕೆ ನಿಷೇಧಿತ ರಸ್ತೆಯಾಗಿದ್ದು ಈ ಬಗ್ಗೆ ಲೋಕೋಪಯೋಗಿ ಇಲಾಖೆ ಫಲಕ ಅಳವಡಿಸಿ, ಜಗಲಬೇಟ ಬಳಿ ರಸ್ತೆ ಆರಂಭದಲ್ಲಿ ಹಾಗೂ ಶಿಂಗರಗಾಂವ ರಸ್ತೆ ಕೊನೆಯಲ್ಲಿ ಭಾರೀ ವಾಹನಗಳು ನುಸುಳದಂತೆ ಕಮಾನುಗಳನ್ನು ಅಳವಡಿಸಿ ನಿಷೇಧದ ಫಲಕ ಕೂಡಾ ಹಾಕಿತ್ತು. ಆದರೆ ಈ ಎರಡೂ ಕಡೆಯಿರುವ ಕಮಾನುಗಳನ್ನು ಚಾಲಕರೇ ಮುರಿದು ಹಾಕಿದ್ದಾರೆ.

ಇದನ್ನೂ ಓದಿ:ಸಿಆರ್‌ಸಿ ಕಟ್ಟಡಕ್ಕೆ ಹೊಸ ರೂಪ

ಜಗಲಬೇಟದಿಂದ ದಾಂಡೇಲಿ ತಾಲೂಕನ್ನು ಸಂಪರ್ಕಿಸುವ ರಸ್ತೆಯಾಗಿದ್ದರಿಂದ ದಾಂಡೇಲಿಗೆ ಹಾಗೂ ಬೆಳಗಾವಿಗೆ ಸರಕನ್ನು ಸಾಗಿಸುವ ಭಾರೀ ವಾಹನಗಳು ನುಸುಳುತ್ತಿದ್ದರಿಂದ ಈ ರಸ್ತೆ ಸಂಪೂರ್ಣ ಹಾಳಾಗಿದೆ. ಎಚ್ಚೆತ್ತುಕೊಳ್ಳದ ಇಲಾಖೆಯಿಂದಾಗಿ ಭಾರಿ ವಾಹನ ಮಾಲಿಕರು ರಾತ್ರಿ ಹಗಲೆನ್ನದೆ ಸಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇನ್ನುವುದು ಸ್ಥಳಿಯರ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next