ತುಮಕೂರು: ಕಲ್ಪತರು ನಾಡಿನಲ್ಲಿ ಲಾಕ್‌ಡೌನ್ ಸಡಿಲಿಕೆಯಿಂದ ಜನ ಸಾಮಾಜಿಕ ಅಂತರ ಮರೆತ್ತಿದ್ದಾರೆ. ಎಲ್ಲಾ ಕಡೆ ದಟ್ಟನೆಯ ಜನ ಸಂದಣಿ, ವಾಹನ ಸಂಚಾರವೂ ಅಧಿಕವಾಗಿದೆ. ಕೊರೊನಾ ವೈರಸ್ ನಿಂದ ಜಿಲ್ಲೆ ಮುಕ್ತಿ ಹೊಂದಿತು ಎಂದು ಕೊಂಡವರಿಗೆ ಈಗ ಮತ್ತೆ ಆತಂಕ ವಾಗುವಂತೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೊರ ರಾಜ್ಯ, ಜಿಲ್ಲೆಗಳಿಂದ ಬರುತ್ತಿರುವ ಜನರಿಗೆ ಕೊರೊನಾ ಕಾಣಿಸಿ ಕೊಳ್ಳುವ ಸಂಭವವಿದ್ದು ಆರೆಂಜ್ ವಲಯ ದಲ್ಲಿರುವ ತುಮಕೂರು ಕೆಂಪು ವಲಯದ ಕಡೆ ಹೋಗುತ್ತಾ ಎನ್ನುವ ಭೀತಿ ಹೆಚ್ಚಿದೆ.
ಕೊರೊನಾ ಸದ್ಯ ತೊಲಗಿತ್ತಲ್ಲ ಎಂದು ನಿರಾಳರಾಗಿದ್ದ ಜನರಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆ ಯಾಗಿರುವುದು ಆತಂಕ ಮೂಡಿಸಿದೆ. ತಬ್ಲೀಘಿ ಜಮಾಯತ್‌ಗೆ ಹೋಗಿ ಅಹ ಮದಾಬಾದ್ ನಿಂದ ಬಂದಿರುವ ಮೂವರಿಗೆ ಕೊರೊನಾ ಸೋಂಕು ಕಾಣಿಸಿ ಕೊಂಡಿರು ವುದು ಮತ್ತು ಬೆಂಗಳೂರು ಪಾದರಾಯನ ಪುರದಿಂದ ಶಿರಾ ನಗರಕ್ಕೆ ಬಂದಿದ್ದ ವ್ಯಕ್ತಿಗೆ ಸೋಂಕು ಕಾಣಿಸಿ ಕೊಂಡಿರುವುದು ದೃಢವಾಗಿದೆ.
ಈಗ ವಿವಿಧ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬರುತ್ತಿರುವ ಜನರಿಂದ ಮತ್ತೆ ಎಲ್ಲಿ ಕೊರೊನಾ ಸೋಂಕು ಹರಡುತ್ತದೆಯೋ ಎನ್ನುವ ಮಾತು ಕೇಳಿ ಬರುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 4,893 ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಿದೆ. ಅದರಲ್ಲಿ 4,296 ಪ್ರಕರಣಗಳು ನೆಗೆಟಿವ್ ಬಂದಿದೆ. ಇನ್ನೂ 1,879 ಜನರು ಹೋಂ ಕ್ವಾರೆಂಟೈನ್ ನಲ್ಲಿದ್ದಾರೆ. 718 ಜನರಲ್ಲಿ ಸೋಂಕು ಗುಣಲಕ್ಷಣ ಇದೆ ಎಂದು ಗುರುತಿಸಲಾಗಿದೆ.
82 ಜನರಿಗೆ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ 548 ಜನರ ಮಾದರಿ ಪರೀಕ್ಷೆ ಲ್ಯಾಬ್ ನಿಂದ ಬರಬೇಕಾಗಿದ್ದು ಇದು ಜನರನ್ನು ಭೀತಿ ಗೊಳಿಸಿದೆ. ಜೊತೆಗೆ ಈಗ ಆರೆಂಜ್ ವಲಯವಾಗಿರು ತುಮಕೂರು ಕೆಂಪು ವಲಯವಾಗುತ್ತೆ ಎನ್ನಲಾಗುತ್ತಿದೆ,. ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಸೋಂಕು ವ್ಯಾಪಿಸದಂತೆ ಜಾಗೃತಿ ವಹಿಸಲಿ.
ರೆಡ್ ಝೋನ್‌ನತ್ತ ತುಮಕೂರು ಜಿಲ್ಲೆ..: ಜಿಲ್ಲಾಡಳಿತ ಲಾಕ್‌ಡೌನ್ ತೆರವು ಮಾಡಿದ ಮೇಲೆ ಜಿಲ್ಲೆಯಲ್ಲಿ ಅದರಲ್ಲಿಯೂ ನಗರದಲ್ಲಿ ಯಾವುದೇ ಸಾಮಾಜಿಕ ಅಂತರವೂ ಇಲ್ಲದೇ, ಮಾಸ್ಕ್ ಧರಿಸದೇ ಎಲ್ಲಾ ಕಡೆ ಗುಂಪು ಗುಂಪಾಗಿ ಜನ ಸಂಚರಿಸುತ್ತಿದ್ದಾರೆ. ಎಲ್ಲಾ ಕಡೆ ವಾಹನ ದಟ್ಟಣೆ ವ್ಯಾಪಾರಸ್ಥರು ತಮಗೆ ಈ ರಂಜಾನ್ ವೇಳೆಯಲ್ಲಿ ಉತ್ತಮ ವ್ಯಾಪಾರವಾಗಲಿ ಎಂದು ಸರ್ಕಾರದ ನಿಯಮ ಮರೆಯುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ತುಮಕೂರು ಆರೆಂಜ್ ವಲಯದಿಂದ ಕೆಂಪು ವಲಯಕ್ಕೆ ಹೋಗುವ ಕಾಲ ದೂರವಿಲ್ಲ.
ಹೊರ ರಾಜ್ಯದಿಂದ ಜಿಲ್ಲೆಗೆ ಬರಲು ಸೇವಾ ಸಿಂಧುನಲ್ಲಿ ಈಗಾಗಲೇ 1,200ಕ್ಕೂ ಹೆಚ್ಚು ಜನರು ನೋಂದಾಯಿಸಿ ಕೊಂಡಿದ್ದು, ಬರುವವರು ಕಡ್ಡಾಯವಾಗಿ ಸ್ವಯಂ ವರದಿ ಮಾಡಿಕೊಳ್ಳಬೇಕು. ಅವರಿಗೆ ಇಲ್ಲಿ ಪರೀಕ್ಷೆಗೊಳಪಡಿಸಲಾಗುವುದು. ರೋಗ ಲಕ್ಷಣಗಳು ಇರುವವರನ್ನು ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು. ಸ್ವಯಂ ವರದಿ ಮಾಡಿಕೊಳ್ಳದೇ ನೇರವಾಗಿ ಮನೆಗೆ ಬಂದವರ ಮಾಹಿತಿಯನ್ನು ಅಕ್ಕ-ಪಕ್ಕದ ಮನೆಯವರು ಜಿಲ್ಲಾಡಳಿತಕ್ಕೆ ನೀಡಬೇಕು.
-ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾಧಿಕಾರಿ
* ಚಿ.ನಿ.ಪುರುಷೋತ್ತಮ್