Advertisement

ಸಂಚಾರ ದಟ್ಟಣೆ ನಿಯಂತ್ರಿಸಿದ ಠಾಣಾ ಪ್ರಭಾರ ಎಸ್‌ಐ

08:25 AM Sep 05, 2017 | Team Udayavani |

ಉಪ್ಪಿನಂಗಡಿ : ಇಲ್ಲಿನ ಬಸ್‌ ನಿಲ್ದಾಣ ವೃತ್ತದಲ್ಲಿ ಎಂದಿನಂತೆ ಸೋಮವಾರ ಬೆಳಗ್ಗೆ ಟ್ರಾಫಿಕ್‌ ಜಾಮ್‌ ಉಂಟಾದಾಗ ಸ್ಥಳದಲ್ಲಿ ಗೃಹರಕ್ಷಕ ದಳದ ಸಿಬಂದಿ, ಪೊಲೀಸರ್ಯಾರೂ ಇರದಿದ್ದರಿಂದ ಎಲ್ಲಿಗೋ ಹೋಗುತ್ತಿದ್ದ ಉಪ್ಪಿನಂಗಡಿ ಠಾಣಾ ಪ್ರಭಾರ ಎಸ್‌ಐ ಅವರೇ ಬಂದು ಸಂಚಾರ ದಟ್ಟಣೆ ನಿಯಂತ್ರಿಸಿದ ಘಟನೆ ಸಂಭವಿಸಿತು.

Advertisement

ಬೆಳಗ್ಗೆ 9:30ರ ಸುಮಾರಿಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಿಂದ ಕೂಗಳತೆಯ ದೂರದಲ್ಲಿರುವ ಬಸ್‌ನಿಲ್ದಾಣ ವೃತ್ತದ ಬಳಿ ಟ್ರಾಫಿಕ್‌ ಜಾಮ್‌ ಉಂಟಾಯಿತು. ಈ ಸಂದರ್ಭ ಸ್ಥಳದಲ್ಲಿ ಪೊಲೀಸರಾಗಲೀ, ಗೃಹ ರಕ್ಷಕ ದಳದ ಸಿಬಂದಿಯಾಗಲೀ ಇರಲಿಲ್ಲ. ಇದರಿಂದ ಟ್ರಾಫಿಕ್‌ ಜಾಮ್‌ ಸಮಸ್ಯೆ ಮತ್ತಷ್ಟು ಮುಂದುವರಿಯಿತು. ಆಗ ಬೈಕ್‌ನಲ್ಲಿ ಪೊಲೀಸ್‌ ಠಾಣೆ ಕಡೆ ತೆರಳುತ್ತಿದ್ದ ಉಪ್ಪಿನಂಗಡಿ ಠಾಣಾ ಪ್ರಭಾರ ಎಸ್‌ಐ ಅವಿನಾಶ್‌ ಅವರು ಬೈಕ್‌ ನಿಲ್ಲಿಸಿ ಬಂದು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮುಂದಾದರು. ಕೆಲಕಾಲದ ಪ್ರಯತ್ನದ ಬಳಿಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕಿಷ್ಕಿಂದೆಯಂತಹ ಉಪ್ಪಿನಂಗಡಿ ಪಟ್ಟಣದಲ್ಲಿ ಸಂಚಾರ ದಟ್ಟಣೆಯ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಇದಕ್ಕೊಂದು ಪರಿಹಾರ ಕಂಡು ಹಿಡಿಯಲು ಉಪ್ಪಿನಂಗಡಿ ಠಾಣೆಗೆ ವರ್ಗಾವಣೆಗೊಂಡು ಬಂದ ಎಸ್‌ಐ ನಂದಕುಮಾರ್‌ ಅವರು ಪ್ರಯತ್ನಿಸಿದ್ದರು. ಆದರೆ ಬಳಿಕದ ದಿನಗಳಲ್ಲಿ ನಂದಕುಮಾರ್‌ ಅವರನ್ನು ಕೆಲವು ವಿಶೇಷ ಪ್ರಕರಣಗಳ ತನಿಖೆಗಾಗಿ ನಿಯೋಜಿಸಿದ್ದರಿಂದ ಅವರ ಕನಸು ನನಸಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

Advertisement

Udayavani is now on Telegram. Click here to join our channel and stay updated with the latest news.

Next