Advertisement
ಮಂಗಳೂರು ಕಡೆಯಿಂದ ಮತ ಎಣಿಕೆ ಕೇಂದ್ರಕ್ಕೆ ಬರುವ ವಾಹನಗಳನ್ನು ತಡಂಬೈಲ್ ಸಮೀಪ ತಪಾಸಣೆ ನಡೆಸಿ ಅಧಿಕೃತ ಪಾಸ್ ಹೊಂದಿದ್ದಲ್ಲಿ ಮಾತ್ರ ಮುಂದಕ್ಕೆ ಪ್ರವೇಶ ಕಲ್ಪಿಸಲಾಗುವುದು. ಉಡುಪಿ ಕಡೆಯಿಂದ ಆಗಮಿಸುವ ವಾಹನಗಳನ್ನು ಚೇಳ್ಯಾರು ಕ್ರಾಸ್ ಬಳಿ ತಪಾಸಣೆ ನಡೆಸಿ ಪಾಸ್ ಹೊಂದಿದ್ದಲ್ಲಿ ಮಾತ್ರ ಮುಂದಕ್ಕೆ ಪ್ರವೇಶ ಕಲ್ಪಿ ಸಲಾಗುವುದು.
ಮಂಗಳೂರಿನಿಂದ ಉಡುಪಿ ಕಡೆಗೆ ಸಂಚರಿಸುವ ಎಲ್ಲಾ ತರಹದ ಘನ ಗೂಡ್ಸ್ ವಾಹನಗಳು ಕೆಪಿಟಿಯಿಂದ ಮಾರ್ಗ ಬದಲಾವಣೆ ಮಾಡಿ ಕಾವೂರು ಜಂಕ್ಷನ್ – ಬಜಪೆ – ಕಟೀಲು – ಮೂರುಕಾವೇರಿ – ಕಿನ್ನಿಗೋಳಿ – ಮೂಲ್ಕಿಯಾಗಿ ಉಡುಪಿ ಕಡೆಗೆ ಸಂಚರಿಸಬೇಕಿದೆ.
Related Articles
Advertisement
ಲಘು ವಾಹನಗಳುಉಡುಪಿಯಿಂದ ಮಂಗಳೂರು ಕಡೆಗೆ ಬರುವ ಲಘು, ದ್ವಿಚಕ್ರ ವಾಹನಗಳು ಚೇಳ್ಯಾರು ಕ್ರಾಸ್‌ನಿಂದ ಎಡಕ್ಕೆ ಬಂದು ಮಧ್ಯ ವೃತ್ತದ ಮುಖೇನ ಮುಂಚೂರು ಕ್ರಾಸ್‌ನಲ್ಲಿ ಹೆದ್ದಾರಿ ಸೇರಬೇಕು. ಉಡುಪಿ ಕಡೆಗೆ ಸಂಚರಿಸುವವು ತಡಂಬೈಲ್ ಕ್ರಾಸ್ ಸದಾಶಿವ ದೇವಸ್ಥಾನ ದ್ವಾರದ ಮೂಲಕ ಎನ್‌ಐಟಿಕೆ ಲೈಟ್‌ಹೌಸ್- ರೆಡ್‌ರಾಕ್ ಕ್ರಾಸ್‌ನಲ್ಲಿ ಎಡಕ್ಕೆ ತಿರುಗಿ ಮುಕ್ಕ ಮುಖಾಂತರ ಸಂಚರಿಸಬೇಕು. ಮೂಲ್ಕಿಯಿಂದ ಮಂಗಳೂರು ಕಡೆಗೆ ಸಂಚರಿಸುವ ದ್ವಿಚಕ್ರ, ಲಘು ವಾಹನಗಳು ಮೂಲ್ಕಿ ವಿಜಯ ಸನ್ನಿಧಿಯಿಂದ ಕಿನ್ನಿಗೋಳಿ – ಮೂರು ಕಾವೇರಿ – ಬಜಪೆ- ಕಾವೂರು ಜಂಕ್ಷನ್ – ಕೆಪಿಟಿ ಮೂಲಕ ಸಂಚರಿಸಬೇಕು. ಹಳೆಯಂಗಡಿಯಿಂದ ಮಂಗಳೂರು ಕಡೆಗೆ ಸಂಚರಿಸುವ ದ್ವಿಚಕ್ರ, ಲಘು ವಾಹನಗಳು ಪಕ್ಷಿಕೆರೆ – ದಾಮಸ್‌ಕಟ್ಟೆ – ಕಿನ್ನಿಗೋಳಿ – ಮೂರುಕಾವೇರಿ – ಬಜಪೆ- ಕಾವೂರು ಜಂಕ್ಷನ್- ಕೆಪಿಟಿ ಮೂಲಕ ಸಂಚರಿಸಬೇಕು. ಪೊಲೀಸ್, ಚುನಾವಣಾಧಿಕಾರಿಗಳು, ತುರ್ತು ಸೇವೆಗಳ ವಾಹನಗಳು, ಅಧಿಕೃತ ಪಾಸು ಹೊಂದಿರುವ ವಾಹನಗಳು, ಮಾಧ್ಯಮ, ಅಭ್ಯರ್ಥಿಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ. ತಡಂಬೈಲ್ ಕ್ರಾಸ್‌ನಿಂದ ರೆಡ್‌ಕ್ರಾಸ್ ಕ್ರಾಸ್‌ವರೆಗೆ, ಮುಂಚೂರು ಕ್ರಾಸ್ ನಿಂದ NITKವರೆಗೆ ಎರಡೂ ಬದಿಯಲ್ಲಿ ಸರ್ವಿಸ್ ರಸ್ತೆಯಲ್ಲಿ ಸಂಚಾರ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.