Advertisement

ನರಗುಂದ-ಗದಗ ಒಳರಸ್ತೆ ಸಂಚಾರ ಸ್ಥಗಿತ

12:21 PM Aug 16, 2019 | Suhan S |

ನರಗುಂದ: 2009ರಲ್ಲಿ ಉಕ್ಕಿ ಹರಿದ ಬೆಣ್ಣೆಹಳ್ಳದ ಪ್ರವಾಹಕ್ಕೆ ಕೊಚ್ಚಿಹೋಗಿ ಬಳಿಕ ಪುನರ್‌ ನಿರ್ಮಾಣಗೊಂಡಿದ್ದ ನರಗುಂದ-ಗದಗ ಒಳರಸ್ತೆಯಲ್ಲಿ ತಾಲೂಕಿನ ಕುರ್ಲಗೇರಿ-ತಡಹಾಳ ಮದ್ಯದ ಸೇತುವೆ ತಳಪಾಯ ಸಮೇತ ಕಿತ್ತು ಹೋಗಿದ್ದು, ಇದರ ಪರಿಣಾಮ ನರಗುಂದ-ಗದಗ ಒಳರಸ್ತೆ ಸಂಚಾರ ಸ್ಥಗಿತಗೊಂಡಿದೆ.

Advertisement

ಪುನರ್‌ ನಿರ್ಮಾಣಗೊಂಡಿದ್ದ ಸೇತುವೆ ಈಗ ಮತ್ತೇ ಕಿತ್ತು ಹೋಗಿ ಪಾದಚಾರಿಗಳು ಕಾಲ್ನಡಿಗೆಯಲ್ಲೂ ತೆರಳಲಾಗದ ರೀತಿಯಲ್ಲಿ ಸೇತುವೆ ಪ್ರವಾಹದ ಹೊಡೆತಕ್ಕೆ ಕೊಚ್ಚಿ ಹೋಗಿದೆ. ಇದನ್ನು ಸಂಪರ್ಕಿಸುವ ಅರ್ಧ ಕಿಮೀನಷ್ಟು ರಸ್ತೆ ಸಹಿತ ಸಂಪೂರ್ಣ ತಳ ಸಹಿತವಾಗಿ ಕಿತ್ತು ಕೊಚ್ಚಿ ಹೋಗಿ ತನ್ನ ಅಸ್ತಿತ್ವ ಕಳೆದುಕೊಂಡಿದೆ.

ನರಗುಂದ-ಗದಗ ಸಂಪರ್ಕ ಮಾಡುವ ಈ ರಸ್ತೆಯನ್ನೇ ಅವಲಂಬಿಸಿದ್ದ ನಾಯಕನೂರ, ತಡಹಾಳ ಕೊಂಗವಾಡ, ಕಡದಳ್ಳಿ, ನಾಗನೂರ, ಗುಡಿಸಾಗರ, ಶಲವಡಿ ಗ್ರಾಮಗಳಿಗೆ ತೆರಳಬೇಕಾದರೆ ಸುಮಾರು 20 ಕಿಮೀ ಹೆಚ್ಚು ಅಂತರ ಕ್ರಮಿಸಬೇಕಾದ ಅನಿವಾರ್ಯತೆ ಬೆಣ್ಣೆಹಳ್ಳದ ಪ್ರವಾಹ ಸೃಷ್ಟಿಸಿದೆ.

ಬೆಣ್ಣೆಹಳ್ಳದ ನೀರು ಬಳಕೆ ಮಾಡಿ ಬನಹಟ್ಟಿ, ಕುರ್ಲಗೇರಿ, ಸುರಕೋಡ, ಯಾವಗಲ್, ಹದಲಿ, ಖಾನಾಪುರ, ಗಂಗಾಪುರ ರಡ್ಡೇರನಾಗನೂರ ಗ್ರಾಮ ವ್ಯಾಪ್ತಿಗಳಲ್ಲಿ ಬೆಳೆದಿದ್ದ ಹತ್ತಿ ಗೋವಿನಜೋಳ, ಶೇಂಗಾ, ಹೆಸರು, ಸೋಯಾಬಿನ್‌, ಸೂರ್ಯಕಾಂತಿ ಪೈರುಗಳು ನೆಲಕಚ್ಚಿ ಕೋಟ್ಯಂತರ ರೂ. ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ನರಗುಂದ: ಬೆಣ್ಣೆಹಳ್ಳದ ಪ್ರವಾಹದ ರಭಸಕ್ಕೆ ಕೊಚ್ಚಿ ಹೋದ ಕುರ್ಲಗೇರಿ- ತಡಹಾಳ ಸೇತುವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next