Advertisement

ಇಂದು ಇಡೀ ದಿನ ಸಂಚಾರ ನಿಷೇಧ

10:56 AM Dec 24, 2017 | Team Udayavani |

ಬೆಂಗಳೂರು: ಪ್ರವಾಸೋದ್ಯಮ ಇಲಾಖೆ ಡಿ.24 ರಂದು ವಿಧಾನಸೌಧದ ಮುಂಭಾಗದ ಡಾ.ಬಿ.ಆರ್‌.ಅಂಬೇಡ್ಕರ್‌ ರಸ್ತೆಯಲ್ಲಿ “ಬ್ರಾಂಡ್‌ ಬೆಂಗಳೂರು’ ಅನಾವರಣ ಹಾಗೂ ಓಪನ್‌ ಸ್ಟ್ರೀಟ್‌ ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಕ್ರದಲ್ಲಿ ಒಂದೂವರೆ ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಈ ಸಂಬಂಧ ಸುಗಮ ಸಂಚಾರಕ್ಕೆ ಅನುಕೂಲವಾಗಲು ಸಂಚಾರ ಮಾರ್ಗ ಬದಲಾಯಿಸಲಾಗಿದೆ.

Advertisement

ಡಿ.23ರ ಶನಿವಾರ ರಾತ್ರಿ 10 ಗಂಟೆಯಿಂದ ಡಿ.25ರ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಪೊಲೀಸ್‌ ತಿಮ್ಮಯ್ಯ ವೃತ್ತದಿಂದ ಕೆ.ಆರ್‌.ವೃತ್ತದವರೆಗೆ ಎರಡು ಕಡೆ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ. ಹಾಗೆಯೇ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರ ವಾಹನಗಳನ್ನು ಕಬ್ಬನ್‌ ಪಾರ್ಕ್‌ನಲ್ಲಿ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಶನಿವಾರ ರಾತ್ರಿ 10 ಗಂಟೆಯಿಂದ ಡಿ.25ರ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಕಬ್ಬನ್‌ ಉದ್ಯಾನವನದ ಎಲ್ಲ ದ್ವಾರಗಳು ತೆರೆಯಲಿದ್ದು, ಸಾರ್ವಜನಿಕರು ಈ ರಸ್ತೆಗಳಲ್ಲಿ ಸಂಚರಿಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

ಪಾರ್ಕಿಂಗ್‌ ನಿಷೇಧ: ರಾಜಭವನ, ಕ್ವೀನ್ಸ್‌ ರಸ್ತೆ, ನೃಪತುಂಗ, ಕಸ್ತೂರ ಬಾ ರಸ್ತೆ, ಶೇಷಾದ್ರಿ ರಸ್ತೆ, ಪ್ಯಾಲೇಸ್‌ ರಸ್ತೆ, ದೇವರಾಜ್‌
ಅರಸ್‌ ರಸ್ತೆ, ರೇಸ್‌ಕೋರ್ಸ್‌, ಕನ್ನಿಂಗ್‌ಹ್ಯಾಮ್‌, ಮಿಲ್ಲರ್, ಇನ್‌ಫೆಂಟ್ರಿ ಹಾಗೂ ಕಬ್ಬನ್‌ ರಸ್ತೆಗಳಲ್ಲಿ ಪಾರ್ಕಿಂಗ್‌ ನಿಷೇಧಿಸಲಾಗಿದೆ.

ಪಾರ್ಕಿಂಗ್‌ ವ್ಯವಸ್ಥೆ

ಮೈಸೂರು ಬ್ಯಾಂಕ್‌ ವೃತ್ತದಿಂದ ಬರುವ ಹಳೇ ಅಂಚೆ ಕಚೇರಿ ರಸ್ತೆಯಲ್ಲಿರುವ ಸರ್ಕಾರಿ ಕಾಲೇಜು ಆವರಣ,ಮೇಕ್ರಿ ವೃತ್ತ, ಜಯಮಹಲ್‌ ಕಡೆಯಿಂದ ಬರುವ ವಾಹನಗಳಿಗೆ ಮೌಂಟ್‌ ಕಾರ್ಮೆಲ್‌ ಕಾಲೇಜ್‌ ಆವರಣ. ಪೂರ್ವದ ಕಡೆಯಿಂದ ಬರುವ ವಾಹನಗಳಿಗೆ ಶಿವಾಜಿನಗರದಲ್ಲಿರುವ ಬಿಎಂಟಿಸಿ ಬಸ್‌ ನಿಲ್ದಾಣದ ಮೊದಲನೆ ಮಹಡಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next