Advertisement

ಸಂಪ್ರದಾಯಕ್ಕೆ ಜೋತುಬಿದ್ದು ಸಂವಿಧಾನಕ್ಕೆ ಅಪಚಾರ

12:28 PM Oct 29, 2018 | Team Udayavani |

ನಂಜನಗೂಡು: ಶಬರಿ ಮಲೆಗೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದ್ದರೂ ಭಕ್ತರು ಸಂಪ್ರದಾಯಕ್ಕೆ ಜೋತು ಬಿದ್ದಿರುವುದು ಸಂವಿಧಾನಕ್ಕೆ ಅಪಚಾರ ಮಾಡಿದಂತೆ ಎಂದು ಮೈಸೂರಿನ ಉರಿಲಿಂಗ ಪೆದ್ದೀಶ್ವರ ಸಂಸ್ಥಾನ ಶಾಖಾ ಮಠದ ಜಾನಪ್ರಕಾಶ ಸ್ವಾಮಿಜಿ ವಿಷಾದ ವ್ಯಕ್ತಪಡಿಸಿದರು.

Advertisement

ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಅನುಭವ ಮಂಟಪ ಟ್ರಸ್ಟ್‌ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಜಗಜ್ಯೋತಿ ಬಸವಣ್ಣನವರ ಜೀವನ ಚರಿತ್ರೆ’ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಹಾಗೂ ಪುರುಷರಿಗೆ ಸಮಾಜದಲ್ಲಿ ಸಮಾನ ಅವಕಾಶ ಹಾಗೂ ಸ್ಥಾನಮಾನ ನೀಡಲಾಗಿದೆ ಹಾಗಿದ್ದೂ, ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶಲ್ಲ ಎಂದರೆ ಏನರ್ಥ ಎಂದ ಅವರು ಸಂವಿಧಾನದ ಆಶಯವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌ ಆದೇಶ ಪರಿಪಾಲನೆಯಾಗಲೇಬೇಕು ಹಾಗಿದ್ದು,

ಅಲ್ಲಿ ಆಕೆಗೆ ಪ್ರವೇಶ ನಿರಾಕರಿಸುತ್ತಿರುವುದು ಸಂವಿಧಾನದ ಆಶಯಕ್ಕಿಂತ ಸಂಪ್ರದಾಯದ ಪ್ರತಿಪಾದನೆಗೆ ಹೆಚ್ಚು ಒತ್ತು ನೀಡಲಾಗಿದೆ. ಶ್ರೀಗಳು ಭಕ್ತವೃಂದ ಈಗಲಾದರೂ ತಮ್ಮ ತಪ್ಪನ್ನು ತಿದ್ದಿಕೊಂಡು ಮಹಿಳೆೆಯರಿಗೆ ಮುಕ್ತ ಪ್ರವೇಶ ನೀಡಲಿ ಎಂದು ಮನವಿ ಮಾಡಿದರು.

ಮಹಿಳೆಯರಿಗೆ ಸಮಾನ ಅವಕಾಶ ನೀಡಬೇಕೆಂದು 12ನೇ ಶತಮಾನದಲ್ಲೇ ಜಗಜ್ಯೋತಿ ಬಸವಣ್ಣ ಪ್ರತಿಪಾದಿಸಿದ್ದರು ಹಾಗಾಗಿಯೇ ವಿ ಶ್ವದ ಮೊದಲ ಸಂಸತ್‌ ಎನಿಸಿಕೊಂಡಿರುವ ಅನುಭವ ಮಂಟಪದ ಬಾಗಿಲನ್ನು ಅಂದೇ ಅಣ್ಣ ಬಸವಣ್ಣ ತಾಯಂದಿರಿಗೆ ತೆರದಿಡುವ ಮೂಲಕ ಮಹಿಳೆಯರ ಸ್ಥಾನಮಾನವನ್ನು ಎತ್ತಿಹಿಡಿದಿದ್ದರು ಎಂದು ಹೇಳಿದರು.

Advertisement

 ಬಸವಣ್ಣನ ಆಶಯಗಳನ್ನೇ ಡಾ ಬಿ ಆರ್‌ ಅಂಬೇಡ್ಕರ್‌ ಸಂವಿಧಾನದಲ್ಲಿ ಅಳವಡಿಕೆ ಮಾಡಿ ದೇಶಕ್ಕೆ ಅರ್ಪಿಸಿದ್ದಾರೆ. ಅದರಂತೆಯೇ ದೇಶ ಈಗ ಮುನ್ನಡೆಯಬೇಕು. ಹೀಗಾಗಿ ಸುಪ್ರೀಂ ಕೋರ್ಟ್‌ ಸಂವಿಧಾನವನ್ನು ಎತ್ತಿಡಿದಿದೆಯೇ ಹೊರತು ಹೆಚ್ಚುವರಿ ಹೇರಿಕೆ ಮಾಡಿಲ್ಲ. ಇದನ್ನು ಗಂಭೀರವಾಗಿ ಅರ್ಥ ಮಾಡಿಕೊಳ್ಳಬೇಕಾದ ಭಕ್ತರು ಗಲಭೆ ಸೃಷ್ಟಿತ್ತಿರುವುದು ತರವಲ್ಲ ಎಂದು ಜಾನಪ್ರಕಾಶ ಸ್ವಾಮಿಗಳು ತಿಳಿಸಿದರು.

ಮಹಿಳೆಯರ ಹಕ್ಕುಗಳಿಗಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಮಹನೀಯರ ಸಾಲಿನಲ್ಲಿ ಬಸವಣ್ಣ, ಅಂಬೇಡ್ಕರ್‌ ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ. ಮಮತೆ, ಸಮಾನತೆೆ ತುಂಬಿದ ಪ್ರಜಾಪ್ರಭುತ್ವವನ್ನು ನಿರ್ಮಿಸಿರುವುದು ಸಮಾಜಕ್ಕೆ ಇವರಿಬ್ಬರ ಕೊಡುಗೆಯಾಗಿದೆ ಎಂದ ಅವರು ಜಾತಿ ವಿಷ ಬೀಜದ ಮಧ್ಯದಲ್ಲಿ ಸಿಲುಕಿ ತೊಳಲಾಡುತ್ತಿರುವ ನಮಗಿದು ಅರ್ಥವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಜನರೊಂದಿಗೆ ಜಾnನಪ್ರಕಾಶ ಸ್ವಾಮಿಜಿ ಸಂವಾದ ನಡೆಸಿದರು. ಡಾ.ಸುರೇಶ್‌ ತಂಡದವರು ವಚನ ಗಾಯನ ನಡೆಸಿಕೊಟ್ಟರು. ಸಮಾರಂಭದಲ್ಲಿ ಟ್ರಸ್ಟ್‌ನ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷ ಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಮಹದೇವಯ್ಯ, ಖಜಾಂಚಿ ಕೆ.ಎಂ.ಕೃಷ್ಣಕುಮಾರ್‌, ಸಂಘಟನಾ ಕಾರ್ಯದರ್ಶಿ ಶ್ರೀ ನಿವಾಸಮೂರ್ತಿ, ಟಿ.ಗುರುಮೂರ್ತಿ, ರಾಕೇಶ್‌, ಅಳಗಂಚಿ ಮಹದೇವಸ್ವಾಮಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next