Advertisement
ಅಷ್ಟಮಿ ಎಂದರೆ ಪೇಟ್ಲ, ಪೇಟ್ಲ ಎಂದರೆ ಅಷ್ಟಮಿ ಎಂಬ ಮಾತು ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಉಡುಪಿಯ ಸುತ್ತಮುತ್ತ ಜನಪ್ರಿಯವಾಗಿತ್ತು. ಆದರೆ ಇತ್ತೀಚಿನ ಪೀಳಿಗೆಗೆ ಈ ಆಟಿಕೆಯ ಅರಿವೇ ಇಲ್ಲದಂತಾಗಿದೆ.
Related Articles
Advertisement
ಪೇಟ್ಲ ತಯಾರಿಕೆ ಹೇಗೆ?
ಸೀಮೆ ಕೋಲು, ಬಿದರಿನ ಕೋಲು ಮತ್ತು ತಗಡನ್ನು ಬಳಸಿ ಮಾಡುವ ಕೋವಿಯಂತ ಆಟಿಕೆ ಇದು. ಬಿದಿರಿನಲ್ಲಿ ರಂಧ್ರದೊಳಗೆ ಕಾಡಿನಲ್ಲಿ ಸಿಗುವ ಕಮಟೆಕಾಯಿ ಅಥವಾ ಪೇಟ್ಲಕಾಯಿ ಹಾಕಿ ಇನ್ನೊಂದು ಕೋಲಿನಿಂದ ಬಿದರಿನ ರಂಧ್ರದೊಳಗೆ ಹಾಕಿ ಜೋರಾಗಿ ತಳ್ಳುವುದು. ಆಗ ಪೇಟ್ಲಕಾಯಿ ಅತ್ಯಂತ ರಭಸದಿಂದ ಹೊರಬಂದು ದೂರಕ್ಕೆ ಚಿಮ್ಮುತ್ತದೆ. ಸುಮಾರು ವರ್ಷಗಳ ಹಿಂದೆ ಸೀಮೆ ಕೋಲು, ಬಿದಿರಿನ ಕೋಲು ಮತ್ತು ತಗಡನ್ನು ಬಳಸಿ ಪೇಟ್ಲ ಮದ್ದನ್ನು ತಯಾರಿಸಲಾಗುತ್ತಿತ್ತು. ಆದರೆ ಆಧುನಿಕತೆಯ ಬದಲಾವಣೆಗೆ ತಕ್ಕಂತೆ ಪ್ಲಾಸ್ಟಿಕ್ ಹಾಗೂ ಪ್ಲಾಸ್ಟಿಕ್ ಪೈಪ್‌ಗ್ಳನ್ನು ಬಳಸಿ ತಯಾರು ಮಾಡಲಾಗುತ್ತಿದೆ.
ಅದ್ದೂರಿಯಾಗಿ ಜರಗುತ್ತಿರುವ ಅಷ್ಟಮಿಯಲ್ಲಿ ಈ ಬಾರಿ ಕೆಲವೇ ಕೆಲವು ಪೇಟ್ಲ ಮದ್ದಿನ ಮಾರಾಟಗಾರರು ಕಂಡುಬಂದಿದ್ದು. ಆಧುನಿಕತೆಯ ಪ್ರಭಾವಕ್ಕೆ ಸಿಲುಕಿ ಕ್ರಮೇಣ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಈಗ ಬಿದಿರಿನ ಅಲಭ್ಯತೆ, ಕಾಡುನಾಶ, ತಯಾರಕರ ಕೊರೆತೆ ಹಾಗೂ ಖರೀದಿದಾರರ ನಿರಾಸಕ್ತಿಯಿಂದ ಕ್ರಮೇಣ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ.
ಇನ್ನೊಂದು ವಿಶೇಷ ಮಾರಾಟಗಾರರೊಬ್ಬರು ಕಸದಿಂದ ರಸ ಎಂಬ ಆಲೋಚನಾದೃಷ್ಟಿಯಿಂದ, ಪೇಟ್ಲ ಮದ್ದಿನ ಆಟಿಕೆಯನ್ನು ಬಳಸಿ ಬಿಸಾಡಲಾದ ಪ್ಲಾಸ್ಟಿಕ್ ಬಾಟಲ್‌ಗಳಿಂದ ತಯಾರಿಸುತ್ತಿರುವುದು ಕಂಡು ವಿಶೇಷವೆನಿಸಿತು.
ಆಧುನಿಕ ತಂತ್ರಜ್ಞಾನದ ಪ್ರಭಾವಕ್ಕೆ ಸಿಕ್ಕ ಈಗಿನ ಮಕ್ಕಳಲ್ಲಿ ತಾಳ್ಮೆ ಇಲ್ಲದಿರುವುದು, ನಿರಾಸಕ್ತಿ ಮತ್ತು ಅರಿವಿನ ಕೊರತೆ, ಮಾಹಿತಿ ಇಲ್ಲದೇ ಇರುವುದು ಇತ್ಯಾದಿ ಕಾರಣದಿಂದ ಹಳೆಯ ಸಾಂಪ್ರದಾಯಿಕ ಆಟಿಕೆಗಳು ಮರೆಯಾಗುತ್ತಿವೆ. ಮಕ್ಕಳಿಗೆ ಇಂತಹ ಸಂಪ್ರದಾಯಿಕ ಹಾಗೂ ಪರಿಸರ ಸ್ನೇಹಿ ಆಟಿಕೆಗಳ ಕುರಿತ ಪರಿಚಯ ಮಾಡಿಸುವ ಕೆಲಸಗಳು ಹಿರಿಯರಿಂದ ಆಗಬೇಕಿದೆ. ಆಗ ಮಾತ್ರ ಇಂತಹ ವಿಶೇಷ ಆಟಿಕೆಗಳು ಅಳಿವು ಉಳಿವು ಸಾಧ್ಯ.
-ವಿಜಯ ಹಿರೇಮಠ
ಗದಗ